ದೇಹದ ಕಣ ಕಣವೂ ನಿನ್ನನ್ನು ತುಂಬಾ ಪ್ರೀತಿಸುತಿದೆ ಪ್ಯಾರಿ
ಜಾರುವ ಕಂಬನಿಗಳಿಗೆ ತಡೆಗೋಡೆಯನು ಕಟ್ಟುತಿದೆ ಪ್ಯಾರಿ
ತೂಗಿದ ಜೋಕಾಲಿಯಲ್ಲಿ ಬೆನ್ನಿಗಿರಿದಿದ್ದು ಕಾಣಲಿಲ್ಲ
ತಿವಿದ ಚೂರಿಯದು ಹೂವಂತೆ ಎದೆಯನ್ನು ಸೀಳುತಿದೆ ಪ್ಯಾರಿ
ಕೈ ತುತ್ತು ಉಣಿಸುತಿರುವೆ ನೀನೆಂದು ಭಾವಿಸಿದ್ದೆ ನಾನು
ದಸ್ತರ್ ಖಾನ್ ದಲ್ಲಿಯ ವಿಷದನ್ನವನು ಕಾಣದಾದೆ ಪ್ಯಾರಿ
ಶತಮಾನದ ನಂಜನು ಯಾವ ಹೊಳೆಯಲ್ಲಿ ತೊಳೆಯಲಿ ಹೇಳು
ಸಂತ ಶರಣರು ತಿಕ್ಕಿ ತೊಳೆದರೂ ಇನ್ನೂ ಉಳಿದಿದೆ ಪ್ಯಾರಿ
ನಯ ವಂಚಕರಿರುವ ದುನಿಯಾದಲ್ಲಿ ನಂಬಿ ಕೆಟ್ಟವರಿಲ್ಲ ಸಾಹೇಬ್
ಕೊನೆಯ ಉಸಿರಿರುವರೆಗೂ ಐಕ್ಯತೆಗೆ ಹೋರಾಡಬೇಕಿದೆ ಪ್ಯಾರಿ
ಎ ಎಸ್ ಮಕಾನದಾರ