You are currently viewing ನೋವ ಮರೆಸಿ, ನಲಿವು ಸುರಿಸುವ: ‘ಆತ್ಮದ ಕನ್ನಡಿ’ ಕಾವ್ಯ

ನೋವ ಮರೆಸಿ, ನಲಿವು ಸುರಿಸುವ: ‘ಆತ್ಮದ ಕನ್ನಡಿ’ ಕಾವ್ಯ

ಲೇಖಕ-ಚೆನ್ನಬಸಯ್ಯ.ಪೂಜೇರ
ಮು-2024
ಬೆಲೆ-₹100
ಸಂಪರ್ಕ ಸಂಖ್ಯೆ – +91 90195 24677

ಸಹೃದಯ ಪ್ರಕಾಶನದಿಂದ ಬೆಳಕು ಕಂಡಿರುವ ಕವಿ ಚೆನ್ನಯ್ಯನ ‘ಆತ್ಮದ ಕನ್ನಡಿ’ ವಿಮರ್ಶಕರಾದ ಡಾ.ಹೆಚ್.ಎಸ್. ಸತ್ಯನಾರಾಯಣ ಅವರ ಹೊನ್ನುಡಿ, ಕಾಡುವ ಕಾವ್ಯದ ವಾರಸುದಾರರಾದ ನಾಗೇಶ‌ನಾಯಕ ಅವರ ಮುನ್ನುಡಿಯೊಂದಿಗೆ ಮುದ್ರಣ ಕಂಡಿದೆ.

ಕವಿ ಇಡಿಯ ಕಾವ್ಯದಲ್ಲಿ ಎಲ್ಲಿಯೂ ಅಭಿಜಾತವಾದದ ಪರಿಕಲ್ಪನೆಗೆ ಮೋರೆಹೋಗದೇ ಪೂರ್ತಿಯಾಗಿ ಹೊಸತನದಿಂದ ಕಾವ್ಯ ಬರೆಯುವ ಪ್ರಯತ್ನ ಮಾಡಿದ್ದಾರೆ. ಕಾವ್ಯ ಪ್ರತಿಯಾಗಿ ಹೆಣ್ಣತನದ ಪ್ರೀತಿ, ಯೌವ್ವನದ ಪ್ರೇಮಾ,ಬಂಡಾಯದ ಪ್ಲಾಟ್-ಪಾರ್ಮ್ಗಳಿಂದ ದೂರ ಬಂದು, ಸಮಾಜಕೇಂದ್ರಿತ ಕಾವ್ಯಗಳನ್ನು ಬರೆದು, ಸಂಪ್ರದಾಯ ಮುರಿದು ಕಟ್ಟುವ ಹರ ಸಾಹಸ ಮಾಡಿದ್ದಾರೆ.




ನಲವತ್ತೈದು ಕವಿತೆಗಳ ಸಂಕಲನ ಸೋತ ತಾಯಿಯ ಬೆಸುಗೆ, ಅವಳು ಬಡತನದಲ್ಲಿ ಬೆಂದರೂ ಜೀವನವಿಡಿ ಮೂರೇ ಸೀರೆಯಲ್ಲಿದ್ದರೂ, ‘ಕೂಸು ಅವಳನ್ನು ನೋಡಿದಾಗಲೊಮ್ಮೆ ಹಬ್ಬ’ ಎನ್ನುವ ಅರ್ಥದಲ್ಲಿ ಬರೆದ ‘ತಾಯಾಗುವೆ’ ಕವಿತೆ. ಸಾವಿರ ಮೋಸದ ಕಥೆ ಹೇಳುವ ಬೆರಳು ಬಂದನವೆಂದು ಕೈ ಬದಲಿಸಿದ/ನಿನ್ನ ನಿರ್ಧಾರ ಅತೀ ಕ್ರೂರ’ ಎನ್ನುವ ಕವಿತೆಯ ಸಾಲು, ಗಂಡಸರೇ ಹಾಗೆ- ಎನ್ನುವ ಕವಿತೆಯಲ್ಲಿ ಜನ್ಮ ಗಂಡಸ್ತಿಕೆಗೆ ಜನ್ಮ ಜಾಲಾಡಿದ್ದು,
ಕೊನೆಯ ಬಾರಿ ನಕ್ಕರೂ – ಬಜಾರಿನಲ್ಲಿ ನಗು ಮಾರಿ ಕೊಂಡವರು, ಎನ್ನುವಲ್ಲಿ ಕವಿ ಗಂಡಸಿನ ಶಕ್ರಿಫೈಸ್ ಗಳ ಲೆಕ್ಕಕೊಟ್ಟಿದ್ದಾರೆ.

ಮನುಷ್ಯರೆನಿಸಿಕೊಂಡ ಮೃಗೋತ್ತಮರಿಗೆ ಮನುಷ್ಯತ್ವದ ಪರಿಚಯ ಮಾಡಿಸಲು ಪ್ರಯತ್ನಿಸಿದ ‘ಆತ್ಮದ ಕನ್ನಡಿ’- ನೀವು ಆಗಲೇ ಸತ್ತಿದ್ದೀರಿ/ ಇರಲಿ ಬನ್ನಿ ಮನುಷ್ಯರ ತೋರಿಸುವೆ!/ ನಿಮ್ಮ ಹೆಸರಿಲ್ಲದ ,ಯಾವ ಧರ್ಮದ ಬಸುರಿಲ್ಲದ, ನಿಮ್ಮ ಆತ್ಮಕ್ಕೆ ಕನ್ನಡಿ ಹಿಡಿದು’ ಎಂದು ಜಾಡಿಸಿ, ಥೂ-! ಎಂದು ಉಗಿದು ಉಳ್ಳಾಗಡ್ಡಿ ಕಟ್ಟಿದ್ದಾರೆ.ಧರ್ಮದ ಹೆಸರಿನಲ್ಲಿ, ಪ್ರೀತಿಯ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಕುಲ-ಗೋತ್ರ, ಕಂಕಣದ ಹೆಸರಿನಲ್ಲಿ, ನಡೆಯುವ ಹೇಸಿಕೆಗಳಿಗೆ ಈ ತರೆನಾಗಿ ಬಾಗಿಸಿ ತೋರಿಸಿರುವುದು ಕವಿ ಸಮಯದ ಸಮರ್ಥಕತೆ ಮತ್ತು ಕವಿಬೀಜದ ಪರಿಪಕ್ವತೆ ಗ್ರಾಹ್ಯವಾಗುವಂತದ್ದು.

ಜನನಾಂಗ, ಜಾತಿ ಮತ ಪಂಥ ಉಡುಗೆ ತೊಡುಗೆ ತೊಡುಗೆ ಭಾಷೆ- ಭಾವಗಳ ಮಧ್ಯದ ಅಸೂಹೆಗಳನ್ನು ಒಟ್ಟಾಗಿಸಿ ‘ನನ್ನಂತೆ ಎಲ್ಲಾ ಹೆಣ- ‘ಎಲ್ಲರದು ಅಷ್ಟೇ ಜಾಗೆ-ಸ್ಮಶಾನ’ ಎಂದು ಸಂಭೋದಿಸುತ್ತಾ, ಹುಟ್ಟಿ ಬೆಳೆದು ಬಾಳಿ,ಬದುಕಿನುದ್ದಕ್ಕೂ ಅನಿಷ್ಟ ಆಚರಣೆಗಳೊಟ್ಟಿಗೆ ಬಾಳು ಸವೆಸಿದವರು ಸಾವಿಗೆ ಅರ್ಜಿ ಹಾಕಿದರೂ ಹೂಳುವುದು ಮೂರು ಮೊಳದ ಜಾಗದಲ್ಲಿ ಎನ್ನುವ ಜಾಗತಿಕ ಸತ್ಯ ಹೇಳ ಹೊರಟಿದ್ದಾರೆ.

ಒಟ್ಟಿನಲ್ಲಿ ಶರಣ ಸಂಸ್ಕೃತಿಯ-ಶರಣಾಗಬನ್ನಿ, ಅವ್ವನ ಪಾವಿತ್ರತೆಯ ಬಗೆಗೆ ಹೇಳುವ-ಅಪ್ಪಾ ನಾಟಕೀಯವಾಗಿ ಬಿಟ್ಟ, ಪ್ರೀತಿ-ಬ್ರೇಕಪ್ ನಶೆಯಂತೆ ಎನ್ನುವ: ಕುಡಿತ ಮತ್ತು ಅವಳು, ಸ್ಥಾವರದ ನಾಶದ ಬಗೆಗೆ ಎಚ್ಚೆರಿಸುವ: ರಕ್ತ ಯಾರದ್ದು, ಸೋತದ್ದು ಪ್ರೀತಿಯಲ್ಲ ವಾಸನೆ ಎನ್ನುವ: ನಿದರ್ಶನ(ಕವಿತೆ). ಎಲ್ಲವೂ ಅವಗಾಹನೆಗೆ ತೆಗೆದುಕೊಂಡರೆ, ಒಟ್ಟು ರಸಗಳ ಗಂಧ ಮಿಶ್ರಣ ಮಾಡಿ ಕಾವ್ಯದಲ್ಲಿ ಚೆಲ್ಲಿದ್ದಾರೆ ಎನಿಸುತ್ತದೆ. ಚಿಕ್ಕ ವಯದಲ್ಲಾಗಲೇ ಇಂತಹಾ ರಸಭೂತಿ ಅನುಭವಿಸುವುದು ಓದಿನ ಫಲ ಎಂಬೊದು ಸತ್ವಯುತಗ್ರಹಿಕೆ. ಕವಿಗೂ-ಕಾವ್ಯಕ್ಕೂ ಸಾವಿರದ ಸ್ವಾಗತ ಎನ್ನುವುದು ಸಹೃದಯನ ಬಹುಳದ ಭಾಗ್ಯ.

ಮೈಬೂಬಸಾಹೇಬ.ವೈ.ಜೆ.
ವಿಜಾಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ