ಅರಳಿ ಮರಳಿ’ದ ನಮ್ಮ ಬೇಂದ್ರೆ
ಮುಕ್ತಕಂಠ’ದಿ ಹಾಡಿ ಕುಣಿದಾಂವ
ಜೀವಲಹರಿ’ಯ ಬರೆದು ಮೆರೆದಾಂವ
ಸಖಿಗೀತೆ’ಯ ಹಾಡುತಾ ನಲಿದಾಂವ
ಕುಣಿಯೋಣ ಬಾ’ಯೆಂದು ಮಸ್ತ್ ಕುಣಿದಾಂವ
ಇಳಿದು ಬಾ ತಾಯೆಂದು’ ಕೈ ಮುಗಿದಾಂವ
ನಾನು ಬಡವ’ನೆಂದು ದಣಿದು ಹಾಡಾಂವ
ನಾಕುತಂತಿ’ಯ ಮೀಟಿ ಬದುಕಿ ಹೋದಾಂವ
ಶ್ರಾವಣಾ ಬಂತೆಂದು’ ಹಿರಿ ಹಿರಿ ಹಿಗ್ಗಿದಾಂವ
ನೀ ಹೀಂಗ ನೋಡ ಬ್ಯಾಡೆಂದು’ ಒಳಗ ಅತ್ತಾಂವ
ಇನ್ನೂ ಯಾಕ ಬರಲಿಲ್ಲ’ ಎಂದು ಕೇಳಾಂವ
ನಾರಿಯ ಮಾರಿ ಮ್ಯಾಗ’ ನವಿಲು ಕಂಡಾಂವ
ಶಿವಮೊಗ್ಗ ‘ಸಮ್ಮೇಳನದ ಅಧ್ಯಕ್ಷ’ ಆದಾಂವ
ಕೇಂದ್ರ ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಪಡೆದಾಂವ
ಸಾಹಿತ್ಯಕ್ಕಾಗಿ ‘ಪದ್ಮಶ್ರೀ’ ಪ್ರಶಸ್ತಿ ಪಡೆದಾಂವ
ಕನ್ನಡಕ್ಕ ಎರಡನೆ ‘ಜ್ಞಾನಪೀಠ’ ಪ್ರಶಸ್ತಿ ತಂದಾಂವ
ಎಮ್.ಎಚ್.ಹಾಲ್ಯಾಳ
ಕೋಳೂರು – ಮುದ್ದೇಬಿಹಾಳ