ಭವಬಂಧನ ಬಿಡಿಸದೆ ಬಾಳುವ ಬದುಕೇ
ನೋವು ನಲಿವಿನ ಮುಖಗಳಲಿ ತೋರಿಕೆ
ಹಿರಿಮೆ ಮಹಿಮೆಗಳ ಕಲಿಯದ ಮನಸಿಗೆ
ಎಲ್ಲರೊಳು ನಡುವಿನ ಬದುಕಿನ ತೀವ್ರತೆಗೆ
ಕೋಪ ತಾಪಗಳೆಲ್ಲ ಬದಿಗೊತ್ತಿ ನಡೆಯುತಲಿ
ಸಂಯಮದ ಮನಸ್ಸಿಗೆ ಕಡಿವಾಣ ತೋರುತಲಿ
ಮಾತಿನ ಮೋಡಿಗೆ ನೀನು ಕೈಗೊಂಬೆಯಾಗಲು
ಸ್ವಾತಂತ್ರ್ಯವಿಲ್ಲದೆ ಹೆಣ್ಣುಗಂಡಲ್ಲಿ ಸಮಾನವಾಗಲು
ನಿತ್ಯಬೆಳಕು ನೀಡುವ ದೀಪವಿದು ಶಾಶ್ವತವಾಗಿರಲು
ಪ್ರೀತಿಯ ತೈಲವ ಸುರಿಯುತಿರೆ ನಂದಾದೀಪವಾಗಲು
ಬೆಳಕಾಗುವುದು ಇನ್ನೊಬ್ಬರ ಬಾಳಿಗೆ ತೃಪ್ತಿಯಾಗಲು
ಶುಭಕೋರುವ ಮನಸ್ಸೆಲ್ಲೊ ನಿತ್ಯ ನೂತನವಾಗಲು
ಜೀವನವಿದು ಹರಿಯುವ ನದಿಯಂತೆ ಹರಿಯುತಿರಲು
ಸಾಗುತಲಿದ್ದರೆ ದಡಸೇರಲು ಅನುಗಾಲ ಉಳಿಯಲು
ಮನದ ಬೇಗುದಿಯೆಲ್ಲಾ ಇಲ್ಲಿಯೇ ಬಿಟ್ಟುಬರುತಿರಲು
ನೆಮ್ಮದಿಯ ಗೂಡಾಗಲು ಬಹುದಿನದ ಶ್ರಮವಿರಲು
ಸವಿತಾ ಮುದ್ಗಲ್
ಬಳ್ಳಾರಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ