SKU: 17157

ರಾಜಿಯಾಗದ ರಕ್ತದ ಕಣ

120.00

Book Details
Author : ಸುರೇಶ ಎಲ್.ರಾಜಮಾನೆ
Publishers Name : ರನ್ನಭೂಮಿ ಪ್ರಕಾಶನ
ISBN : 978-93-341-241B-7

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಸಮಾಜದಲ್ಲಿನ ಅಸಮಾನತೆಯ ಬೇಲಿಯನ್ನು ಅಕ್ಷರ ಜ್ಞಾನದ ಮೂಲಕ ಮೀರಲು ಪ್ರಯತ್ನಿಸಿದ ಸುರೇಶ ರಾಜಮಾನೆ ತಮ್ಮ `ರಾಜಿಯಾಗದ ರಕ್ತದ ಕಣ’ ಕವನ ಸಂಕಲನದಲ್ಲಿ ಸುರೇಶ ಅವರನ್ನು ಒಳಗಿನಿಂದಲೇ ಇರಿದು ಘಾಸಿಗೊಳಿಸುವ ಹಾಗೂ ಹೊರಗಿನಿಂದ ತಿವಿದು ಗಾಯಗೊಳಿಸುವ ಸಂಗತಿಗಳ ನಡುವಿನ ತಿಕ್ಕಾಟದಲ್ಲಿಯೇ ಕವಿತೆಗಳು ರೂಪುಗೊಂಡಿವೆ. ಮನುಷ್ಯ ಮನುಷ್ಯರ ನಡುವೆ ಭೇದಭಾವ ಸೃಷ್ಟಿಸುವವರ ಬಗ್ಗೆ ಕವಿತೆಗಳಲ್ಲಿ ಪ್ರತಿರೋಧವಿದೆ: ಸಮಾಜವನ್ನು ಒಡೆಯುವ ಘಾತುಕ ಶಕ್ತಿಗಳ ಬಗ್ಗೆ ರೋಷವಿದೆ; ಇಲ್ಲಿಯ ಕವಿತೆಗಳು ಸಹೃದಯಿಗಳ ಮನಸ್ಸನ್ನು ಕಲಕುತ್ತವೆ; ಆಲೋಚನೆಗೆ ಹಚ್ಚುತ್ತವೆ; ಇಲ್ಲಿಯ ಬಹುತೇಕ ಕವಿತೆಗಳು ನೇರವಾಗಿ ಓದುಗರೊಂದಿಗೆ ಸಂವಾದಿಸುವ ಗುಣದಿಂದ ಆಪ್ತವಾಗುತ್ತವೆ.

-ಡಾ.ಸುಭಾಷ್ ರಾಜಮಾನೆ, ಬೆಂಗಳೂರು

ಸುರೇಶ್ ರಾಜಮನೆಯವರ “ರಾಜಿಯಾಗದ ರಕ್ತದ ಕಣ’ ಸತ್ಯೋತ್ತರ ಕಾಲದ ಬರಡನ್ನು ಹಿಡಿದಿಡುವ ಪ್ರಯತ್ನ, ಅವರೇ ಹೇಳುವಂತೆ ಸತ್ಯ ಮತ್ತು ಸುಳ್ಳು ಜಿದ್ದಿಗೆ ಬಿದ್ದಿರುವ’ ದುರಿತ ಕಾಲವಿದು. ನಮ್ಮನ್ನು ಕಾಡುವ ನಮ್ಮೆಲ್ಲರ ಗೊಂದಲಗಳಿಗೆ ಉತ್ತರವಾಗಿದ್ದ ಗಾಂಧಿ ಇಂದು ಪ್ರಶ್ನಾರ್ಹರಾದುದರ ಬಗ್ಗೆ ವಿಷಾದದಿಂದ, ಸಿಟ್ಟಿನಿಂದ ಪ್ರತಿಭಟಿಸುವ, ಸೂಕ್ಷ್ಮಪ್ರಜ್ಞೆಯ ಸವಾಲು ಹಾಕುವ ಕವನಗಳು ಇಲ್ಲಿವೆ. ಎಲ್ಲದಕ್ಕೂ ಸೆಡ್ಡು > ಹೊಡೆಯುವ ಕವಿ, ಸುಮ್ಮನೆ ಕೂರುವವರಲ್ಲ. ನನ್ನ ಏನನ್ನಾದರೂ ಅನ್ನಿ ಬೇಜಾರಿಲ್ಲ ನನ್ನ ಕವಿತೆಯಲ್ಲಿ ನೀವೆಲ್ಲ ಕುನ್ನಿಗಳೆ ಎನ್ನುತ್ತ ಪ್ರತಿರೋಧವನ್ನು ಸ್ಪಷ್ಟವಾಗಿಯೇ ದಾಖಲಿಸಿದ್ದಾರೆ. ಆಸತ್ಯದೊಡನೆ ರಾಜಿಯಾಗಲೊಲ್ಲದ ಗುಣ ರಕ್ತದ ಕಣಕಣದಲ್ಲೂ ಹರಿದಾಗ ಸತ್ಯೋತ್ತರ ಯುಗದ ಸವಾಲುಗಳನ್ನು ಕವಿತೆಯ ಕಣಕಣದಲ್ಲೂ ಹಿಡಿಟ್ಟಿರುವ ಈ ಕವನ ಸಂಕಲನ ಭವಿಷ್ಯದ ಗಟ್ಟಿ ಭರವಸೆಯಾಗಿದೆ.

– ಡಾ.ರಾಜಲಕ್ಷ್ಮೀ ಎನ್.ಕೆ, ಮಂಗಳೂರು

ಸ್ಪಷ್ಟವಾದ ದಿಟ್ಟವಾದ ಧೋರಣೆಗಳೊಂದಿಗೆ ಕಾವ್ಯದ ಕುಸುರಿಯಲ್ಲಿ ತೊಡಗಿರುವ ಮಿತ್ರ ಸುರೇಶ ರಾಜಮಾನೆ ಬದುಕಿನ ಎಲ್ಲಾ ಮುಖಗಳನ್ನು ಸರಿಯಾಗಿ ಬಲ್ಲವರು; ಅನುಭವಿಸಿದವರು; ಕಾವ್ಯ ಭಾಷೆಯ ಮೂಲಕ ಅದಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಲೇ ಸದಾ ಬರೆಯುತ್ತಲೇ ಇರುವ ಇವರ ಕಣ್ಣುಗಳಿಗೆ ಕಾಣುವ ಯಾವ ಘಟನೆಗಳೂ ದಕ್ಕದೆ ಹೋಗುವುದೇ ಇಲ್ಲ. “ಅಲ್ಲಿ ಇಲ್ಲಿ ಅಷ್ಟೇ ಅಲ್ಲ ಗಲ್ಲಿಗಲ್ಲಿಗೂ ಗುಲ್ಲೆದ್ದು ಹೋಗದೆ ಹುಬ್ಬಿರದ ಹುಡುಗಿಯನ್ನು ಹಬ್ಬದಲಿ ಹರಿದು ಹಂಚಲು ಸವಾಲು ಕೂಗುತ್ತಿದ್ದಾರೆ’ ಎಂದು ಲೋಕಕ್ಕೆ ಸಾರುತ್ತ, ಈ ಅನಾಗರಿಕ ಬದುಕಿನ ಪಾತಕತನಕ್ಕೆ ತಕ್ಷಣವೇ ಸಿಡಿದೇಳುತ್ತಾರೆ. ಅಷ್ಟೇ ಅಲ್ಲ ” ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನು ಬಿಟ್ಟು ಬೇರೆನನ್ನೂ ಹೇಳುವುದಿಲ್ಲ.. ಗಾಂಧೀಯಷ್ಟಂತೂ ಅಲ್ಲವೇ ಅಲ್ಲ..” ಎನ್ನುತ್ತ ಈ ಕವನಸಂಕಲನದ ಮೂಲಕ ಕಾವ್ಯದ ಬದುಕಿನ ಬದ್ಧತೆಯನ್ನು ಶುದ್ಧಾಂತಃಕರಣದಿಂದ ನಿರೂಪಿಸುತ್ತ ಒಬ್ಬ ಸಶಕ್ತ ಜವಾಬ್ದಾರಿಯುತ ಕವಿಯಾಗಿ ಬಾಳುತ್ತಿದ್ದಾರೆ.

-ಡಾ.ಕೆ.ಶಶಿಕಾಂತ, ಲಿಂಗಸುಗೂರು

Rating This Book

Reviews

There are no reviews yet.

Be the first to review “ರಾಜಿಯಾಗದ ರಕ್ತದ ಕಣ”

Your email address will not be published. Required fields are marked *