+918310000414
contact@kannadabookpalace.com
+918310000414
contact@kannadabookpalace.com
₹160.00
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
“ಅಂಗಳದ ತುಂಬೆಲ್ಲ ನೀನೆಟ್ಟ ಗಿಡಗಳಲಿ
ಮಲ್ಲಿಗೆಯು ಅರಳುತಿದೆ ಕಂಪ ಸೂಸಿ”
ಈ ಸಾಲುಗಳನ್ನು ಓದಿದ ಯಾರಾದರೂ ಇದು
ಕೆ.ಎಸ್.ನರಸಿಂಹಸ್ವಾಮಿ ಅಥವಾ ಕೆ.ಸಿ.ಶಿವಪ್ಪ ಅವರ ಪದ್ಯ ಎಂದು
ಹೇಳದಿರಲಾರರು, ಕವಿತೆಗಳಲ್ಲಿ ಅಂಥ ಲಾಲಿತ್ಯವನ್ನು ಸುಲಲಿತವಾಗಿ
ಮೈಗೂಡಿಸಿಕೊಂಡಿರುವ ಮಧುರಾ ಮೂರ್ತಿ ಉತ್ತರ ಕನ್ನಡ
ಜಿಲ್ಲೆಯಿಂದ ಹೊರಹೊಮ್ಮುತ್ತಿರುವ ಅತ್ಯಂತ ಭರವಸೆಯ ಕವಯಿತ್ರಿ,
`ಅರಿತು ಬಾಳು’, ಬುದ್ಧನಂತಾಗಲಿಲ್ಲ’, ನೀನಿರದ ಮೇಲೆ’, ‘ಸಾಕ್ಷಾತ್ಕಾರ’,
‘ಆತ್ಮದ ಗೋಳು’ ಮುಂತಾದ ಕವಿತೆಗಳು ಮತ್ತೆ ಮತ್ತೆ ಓದುವಂತಿವೆ.
ಜೀವನಾದರ್ಶದ ದರ್ಶನವು ಎಲ್ಲಿಯೂ ಸಹ ಸುಸಂಸ್ಕೃತಿಯ
ಚೌಕಟ್ಟನ್ನು ದಾಟಿಲ್ಲ. ಮೂರು ಅಥವಾ ನಾಲ್ಕು ಸಾಲಿನೊಳಗೇ
ಪ್ರಮಾಣಬದ್ಧವಾಗಿ, ಛಂದೋಬದ್ಧವಾಗಿರುವ ಆನೇಕ ಕವಿತೆಗಳು
ಲೇಖಕಿಯ ಆಸಕ್ತಿಯ ಗಜಲ್, ಹಾಯ್ದು, ರುಬಾಯಿ, ಚೋಕಾ,
ಆಬಾಬಿಗಳೆಂಬ ಪ್ರಕಾರಗಳೆಲ್ಲದರ ಮೂಸೆಯೊಳಗೂ ಅನುಭವದ
ಸಾರವನ್ನು ಅದ್ದಿ, ಎರಕ ಹೊಯ್ದು ತೆಗೆದಂತೆ ಭಾಸವಾಗುತ್ತವೆ. ಒಟ್ಟಾರೆ
ಅವರ ಹೆಸರಿನಂತೆಯೇ ಮಧುರವಾಗಿರುವ ಈ ಕವಿತೆಗಳನ್ನು
ಓದುವುದೇ ಒಂದು ಚೆಂದ.
ಕಂನಾಡಿಗಾ ನಾರಾಯಣ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.