SKU: 15399

Pranesh Prapancha ( ಪ್ರಾಣೇಶ ಪ್ರಪಂಚ )

150.00

Book Details
Author : Gangavathi Pranesh
Publisher ‏ : ‎ Sawanna Enterprises
Language ‏ : ‎ Kannada
Paperback ‏ : ‎ 160 pages
ISBN-10 ‏ : ‎ 9382348492
ISBN-13 ‏ : ‎ 978-9382348498
(1 customer review)

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ಚಟಾಕಿಗಳನ್ನು ಕೇಳದವರಿಲ್ಲ. ಅವರು ಕನ್ನಡದ ಮನೆ-ಮನಗಳಲ್ಲಿ ಆಧುನಿಕ ಹಾಸ್ಯ ಚಕ್ರವರ್ತಿ ಎಂದೇ ಹೆಸರುವಾಸಿ. ಅವರದು ಸಹಜ ಹಾಸ್ಯ, ಶುದ್ಧ ಹಾಸ್ಯ. ನಗಿಸುವುದೊಂದೇ ಅವರ ಧೈಯವಲ್ಲ. ನಗುವಿನ ಮೂಲಕ ಬದುಕಿನಲ್ಲಿ ಪಾಲಿಸಬೇಕಾದ ಆಚಾರ-ವಿಚಾರಗಳನ್ನು ಹೇಳಿ ಅರಿವು ಮೂಡಿಸುವುದು ಅವರ ಕಾಳಜಿ. ಪ್ರಾಣೇಶ್ ಅವರದ್ದು ಎರವಲು ಹಾಸ್ಯವಲ್ಲ. ನಮ್ಮ ನಡುವಿನ ಸಹಜ ಘಟನೆ, ಪ್ರಸಂಗಗಳಲ್ಲಿ ಅವರು ಹಾಸ್ಯವನ್ನು ಕಾಣುತ್ತಾರೆ. ಅದನ್ನು ಅಷ್ಟೇ ಸಹಜವಾಗಿ ಪ್ರಸ್ತುತಪಡಿಸುತ್ತಾರೆ. ನಗಿಸುವವನಿಗೆ ಆಂಗಿಕ ಭಾಷೆಯಷ್ಟೇ, ನುಡಿಗಟ್ಟು, ಸಹಜತೆ, ಪ್ರಾದೇಶಿಕತೆ ಹಾಗೂ ಟೈಮಿಂಗ್ ಬಹಳ ಮುಖ್ಯ. ಪ್ರಾಣೇಶ್ ಈ ಎಲ್ಲ ಸಂಗತಿಗಳನ್ನೂ ಸಲೀಸಾಗಿ ಮೈಗೂಡಿಸಿಕೊಂಡಿದ್ದಾರೆ. ಎಂಥ ಪ್ರಸಂಗಕ್ಕೂ ಖಾಸಗಿತನ ಹಾಗೂ ವೈಯಕ್ತಿಕ ಸ್ಪರ್ಶವನ್ನು ಕೊಟ್ಟು ಆಪ್ತವಾಗಿಸುತ್ತಾರೆ.

ಇಂಥ standup comedian ಅಂಕಣ ಬರೆದರೆ ಹೇಗಿರುತ್ತದೆ? ಮಾತುಗಾರ ಪ್ರಾಣೇಶ್ ಹಾಗೂ ಬರಹಗಾರ ಪ್ರಾಣೇಶ್ ನಡುವೆ ನವಿರಾದ ಪೈಪೋಟಿ ಏರ್ಪಡುತ್ತದ್ದೆ. ಇದರಲ್ಲಿ ಯಾರು ಗೆಲ್ತಾರೆ ಅನ್ನೋದನ್ನು ಹೇಳೋದು ಕಷ್ಟ ಕಾರಣ ಇಬ್ಬರ ನಡುವೆಯೂ ಸಮಬಲದ ಹೋರಾಟ ನಡೆದಿದೆ. ಬರಹಗಾರರಾಗಿ ತಾವೇನೂ ಕಮ್ಮಿಯಿಲ್ಲ ಎಂಬುದನ್ನು ಪ್ರಾಣೇಶ್ ತೋರಿಸಿಕೊಟ್ಟಿದ್ದಾರೆ. ಮಾತುಗಾರ ಪ್ರಾಣೇಶ್ ಅವರನ್ನಷ್ಟೇ ಬಲ್ಲವರಿಗೆ ಇದು ಅವರ ಮತ್ತೊಂದು ವ್ಯಕ್ತಿತ್ವವನ್ನು ತೆರೆದಿಟ್ಟಂತಾಗಿದೆ. ನೀವು ಬರಹಗಾರ ಪ್ರಾಣೇಶ್ ಅವರನ್ನೂ ಅಷ್ಟೇ ಗಾಢವಾಗಿ ಇಷ್ಟಪಡುತ್ತೀರಿ. ಪ್ರಾಮಿಸ್!

Rating This Book

1 review for Pranesh Prapancha ( ಪ್ರಾಣೇಶ ಪ್ರಪಂಚ )

  1. Veerabhadrappa Dandin (verified owner)

    ಪ್ರಾಣೇಶ್ ಪ್ರಪಂಚ ತುಂಬಾ ಚನ್ನಾಗಿ ಮೂಡಿಬಂದಿದೆ ಹಳ್ಳಿಯ ಸೊಗಡು ಬಡವರ ಭವನೆಗಳು ತುಂಬಾ ಚನ್ನಾಗಿ ಬಂದಿವೆ ತುಂಬಾ ಒಳ್ಳೆಯ ಕೃತಿ…….

Add a review

Your email address will not be published. Required fields are marked *

Top Books