ಪರೀಕ್ಷೆಯ ಕಲ್ಪತರು Pariksheya Kalpataru
₹149.00
| Book Details |
|---|
| Author : N F Kittur |
| Publisher : KNS Publications |
| 120 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಕೈಪಿಡಿ – ‘ಪರೀಕ್ಷೆಯ ಕಲ್ಪತರು’
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕನ್ನಡ ವಿಷಯದ ಪರೀಕ್ಷಾ ಸಿದ್ಧತೆ ಹಾಗೂ ಉತ್ತಮ ಫಲಿತಾಂಶದ ಉದ್ದೇಶದಿಂದ ಪ್ರೌಢಶಾಲಾ ಶಿಕ್ಷಕರು, ಸಾಹಿತಿಗಳು ಹಾಗೂ ಆಕಾಶವಾಣಿ ವಿಶೇಷ ಭಾಷಣಕಾರರಾದ ಶ್ರೀ ಎನ್. ಎಫ್. ಕಿತ್ತೂರು, ಎಂ.ಎ., ಬಿ.ಎಡ್. ಅವರು ರಚಿಸಿರುವ ‘ಪರೀಕ್ಷೆಯ ಕಲ್ಪತರು’ ಎಂಬ ಕನ್ನಡ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಗಳ ಕೈಪಿಡಿ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದೆ.
10ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಷಯಕ್ಕೆ ಸಂಬಂಧಿಸಿದ ಈ ಪುಸ್ತಕದಲ್ಲಿ ಪರೀಕ್ಷಾ ದೃಷ್ಟಿಯಿಂದ ಉಪಯುಕ್ತವಾದ ಅಭ್ಯಾಸ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳು ಪಠ್ಯವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಈ ಪುಸ್ತಕ ಸಹಕಾರಿಯಾಗಲಿದೆ.
ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರ ಜೊತೆಗೆ, ಉತ್ತೀರ್ಣರಾಗಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೂ ನೆರವಾಗುವ ರೀತಿಯಲ್ಲಿ ಪುಸ್ತಕವನ್ನು ರೂಪಿಸಲಾಗಿದೆ. ಸರಳವಾದ ನಿರೂಪಣೆ, ಪರೀಕ್ಷಾ ಕೇಂದ್ರಿತ ವಿಷಯವಸ್ತು ಹಾಗೂ ವ್ಯವಸ್ಥಿತ ಪ್ರಶ್ನೋತ್ತರಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕಾ ಮಾರ್ಗದರ್ಶನ ನೀಡುವ ಪ್ರಯತ್ನ ಇದಾಗಿದೆ.
ಶಾಲಾ ಶಿಕ್ಷಣ ಇಲಾಖೆಯಿಂದ ಅನುಮೋದನೆ ಹಾಗೂ ಮೆಚ್ಚುಗೆ ಪಡೆದಿರುವುದಾಗಿ ಪುಸ್ತಕದ ಮುಖಪುಟದಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಕನ್ನಡ ಭಾಷಾ ಕಲಿಕೆಯ ಉನ್ನತಿಗೆ ಪೂರಕವಾಗಿರುವ ‘ಪರೀಕ್ಷೆಯ ಕಲ್ಪತರು’ಮಕ್ಕಳು ಉಜ್ವಲ ಭವಿಷ್ಯಕ್ಕೆ ಒಂದು ಉಪಯುಕ್ತ ಶೈಕ್ಷಣಿಕ ಪ್ರಯತ್ನವಾಗಿದೆ.



Reviews
There are no reviews yet.