ಓದುವುದು ಹೇಗೆ?!
₹160.00
(ವಿದ್ಯಾರ್ಥಿಗಳಿಗಾಗಿ)
Author : ಡಾ. ನಾ. ಸೋಮೇಶ್ವರ
Publishers Name : ಯಾಜಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಓದುವುದು ಹೇಗೆ? ಇದೇನು ಸುಲಭ! ಪುಸ್ತಕವನ್ನು ಕೈಗೆತ್ತಿಕೊಂಡ. ಪುಟ ತೆರೆದ. ಅಲ್ಲಿರೋದನ್ನ ನೋಡಿದ. ಬಾಯಿಂದ ಓದೋಕೆ ಶುರು ಮಾಡಿದ… ಅಷ್ಟೇ ಅಲ್ಲವೆ? ಇದೇನು ಮಹಾ ಎನಿಸಬಹುದು. ಆದರೆ, ದಿನಪತ್ರಿಕೆಯನ್ನು ಓದುವುದಕ್ಕೂ ವಿದ್ಯಾರ್ಥಿಗಳ ಶಾಲಾ ಪಠ್ಯಪುಸ್ತಕಗಳನ್ನು ಓದುವುದಕ್ಕೂ ತುಂಬಾ ವ್ಯತ್ಯಾಸವಿದೆ. ದಿನಪತ್ರಿಕೆಯಲ್ಲಿ ಓದಿದ್ದನ್ನೆಲ್ಲ ನೆನಪಿಡಬೇಕಾಗಿಲ್ಲ. ಆದರೆ ಪಠ್ಯಪುಸ್ತಕದಲ್ಲಿ ಓದಿದ್ದನ್ನೆಲ್ಲ ನೆನಪಿಡಲೇಬೇಕಾಗುತ್ತದೆ… ಅನೇಕ ಸಲ ಜೀವನಪರ್ಯಂತ ನೆನಪಿಡಬೇಕಾಗುತ್ತದೆ. ಅಧ್ಯಯನ ಎನ್ನುವುದು ಒಂದು ತಪಸ್ಸು! ಅದೊಂದು ವೈಜ್ಞಾನಿಕ ಕಲೆ. ಅಧ್ಯಯನವನ್ನು ಮಾಡುವಾಗ ಪಂಚೇಂದ್ರಿಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹೇಗೆ? ನಮ್ಮ ಮಿದುಳು ಹೇಗೆ ಕೆಲಸ ಮಾಡುತ್ತದೆ? ಓದಿದ್ದನ್ನು ನಮ್ಮ ಮಿದುಳು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ? ನಮ್ಮ ಮಿದುಳು ಓದಿದ್ದನ್ನೆಲ್ಲ ನೆನಪಿನಲ್ಲಿಡಬೇಕಾದರೆ ಹೇಗೆ ಓದಬೇಕು? ಅನೇಕ ಸಲ ನಾವು ಓದಿದ್ದೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಏಕೆ? ಓದಿದ್ದು ಸದಾ ಕಾಲಕ್ಕೂ ನೆನಪಿನಲ್ಲಿ ಉಳಿಯಬೇಕಾದರೆ ಏನು ಮಾಡಬೇಕು? ಬೆಳಗಿನ ಹೊತ್ತು ಓದಬೇಕೋ ಅಥವ ರಾತ್ರಿಯ ಹೊತ್ತು ಓದಬೇಕೋ? ಸ್ಟ್ರಾಂಗ್ ಟೀ ಕುಡಿದು ಓದಿದರೆ, ಓದಿದ್ದೆಲ್ಲ ನೆನಪಿನಲ್ಲಿ ಇರುತ್ತದೆಯೆ? ನೆನಪಿನ ಶಕ್ತಿಯನ್ನು ಹೆಚ್ಚಿಸುವ ಔಷಧಗಳು, ಟಾನಿಕ್ ಇಲ್ಲವೇ ಆಹಾರ ಪದಾರ್ಥಗಳು ಇವೆಯೆ? ಕಲಿಕೆ-ಓದು-ನೆನಪು-ಮರೆವುಗಳಿಗೆ ಸಂಬಂಧಿಸಿದಂತೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ, ಇದೋ ನಿಮ್ಮ ಕೈಯಲ್ಲಿದೆ ಉತ್ತರ!



Reviews
There are no reviews yet.