+918310000414
contact@kannadabookpalace.com
+918310000414
contact@kannadabookpalace.com
₹75.00
ಹಾಸ್ಯ ಚುಟಾಕೆಗಳ ಸಂಕಲನ
Book Details |
---|
Author : ಸುಭಾಶ್ಚಂದ್ರ ಸಕ್ರೋಜಿ. |
Publisher : ನಿರ್ಮಲ ಭಾರತಿ ಪ್ರಕಾಶನ |
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಮಹಾರಾಷ್ಟ್ರದ ಪುಣೆಯ ನಿವಾಸಿ ಕನ್ನಡಿಗ ಸುಭಾಶ್ಚಂದ್ರ ಸಕ್ರೋಜಿಯವರು ಈಗಾಗಲೇ “ಕವನ ಕಲಶ”, “ಚಿನ್ನದ ಸರ”, “ಒತ್ತಡ”, “ನೆನಪಿನ ಸುರುಳಿ”, ಮುಂತಾದ ಕೃತಿಗಳ ಮೂಲಕ ಸಾಹಿತ್ಯ ವಲಯದ ಗಮನ ಸೆಳೆದವರು. ಅಲ್ಲದೇ ಎಲ್ಲರನ್ನು ನಗಿಸುವ ಮನೋಭಾವದವರು. ಇವರು ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ಹಾಸ್ಯ ಪ್ರಸಂಗಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ತಮ್ಮ ಹುಟ್ಟೂರು ಕಸಬಾ ಜಂಬಗಿಯಲ್ಲಿ ಹಾಸ್ಯ ನಾಟಕವೊಂದನ್ನು ಬರೆದು ಅದರಲ್ಲಿ ತಾವೇ ಅಭಿನಯಿಸಿ ಗ್ರಾಮದ ಎಲ್ಲರನ್ನು ಹಾಸ್ಯದ ಕಡಲಲ್ಲಿ ತೇಲಿಸಿದವರು. ಅಲ್ಲದೇ ಸಮರ್ಥ ಹಾಸ್ಯ ಸಾಹಿತಿಯೂ ಹೌದು. ಇವರು ನೀವೂ ನಗ್ರೀ ” ಕೃತಿಯ ಮೂಲಕ 66 ಹಾಸ್ಯ ಬರಹಗಾರರಾಗಿ ಹೊರಬರುತ್ತಿದ್ದಾರೆ.
ನಕ್ಕವನು ಬಾಳ ದಿನ ಇರತಾನು, ಅತ್ತವನು ಆಯಷ್ಯ ಕಡಿಮೆ ಮಾಡಿಕೊಂಡು ಸತ್ತಾನು, ಎನ್ನುವವರು ಇದ್ದಾರೆ. ನಾ ಹ್ಯಾಂಗ ನಗ್ಲೀ, ಜೋರಾಗಿ ನಗಲ್ಲೋ, ಮಂಗ್ಯಾನಂಗ ಹಲ್ಲಕಿಸದ ನಗಲ್ಲೋ? ಅಂತಾ ಹಳಹಳಿಸದೇ ನಗುವಿಗೆ ಬಿಡುಮಾಡಿಕೊಂಡು ನಗ್ರೀ. ఎంబ ಸಂದೇಶವನ್ನು ನೀಡುವ ಒಂದು ಉತ್ತಮ ಕೃತಿ, ಬಾಯಾಗ ಹಲ್ಲು ಇರಲಿ, ಇರದೇ ಇರಲಿ ನಗಬೇಕು, ‘ಸ್ವರ್ಗ ಬೇರಿಲ್ಲ, ನಕ್ಕರೆ ಅದೇ ಸ್ವರ್ಗ’.
‘ಹಾಂಗಂತ ಎಲ್ಲಿ ಸಿಕ್ಕಲ್ಲಿ ನಕ್ಕ ನಗೇಡಿ ಆಗಬ್ಯಾಡ್ರಿ’ ಎಂಬ ಎಚ್ಚರಿಕೆಯನ್ನು ನೀಡುವ ಈ ಪುಸ್ತಕವು ಹಾಸ್ಯ ಸಾಹಿತ್ಯದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನಮಗೆ ಅನಿಸಿತು. ಇಂದಿನ ಜಂಜಾಟ ಜೀವನದಲ್ಲಿ ಯಾರಿಗೂ ವ್ಯವಧಾನವಿಲ್ಲ. ಆದ್ದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾ ಮದಿಂದಾಗಿ ಮಾನಸಿಕ ಕಾಯಿಲೆಗೆ ತುತ್ತಾಗಿ ಅದೇಷ್ಟೋ ಜನರು ತೊಳಲಾಡುತ್ತಾರೆ. ಅಂತವರಿಗೊಂದು ನಗು ತರಿಸುವ ಪ್ರಯತ್ನವಾಗಿ ಈ ಕೃತಿಯನ್ನು ನಿರ್ಮಲ ಭಾರತಿ ಪ್ರಕಾಶನವು ತಮ್ಮ ಕೈಗೆ ನೀಡುತ್ತಿದೆ. ಈ ಪುಸ್ರಕವು ಓದಿಸಿಕೊಳ್ಳುವಾಗ ಓದುಗರ ಮನದಲ್ಲಿ ನಗುವರಳಿದರೆ ಅಷ್ಟೇ ಸಾಕು ನಮ್ಮ ಶ್ರಮ ಸಾರ್ಥಕ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.