+918310000414
contact@kannadabookpalace.com
+918310000414
contact@kannadabookpalace.com
₹100.00 Original price was: ₹100.00.₹90.00Current price is: ₹90.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಸ್ನೇಹಜೀವಿ ನಗುಮೊಗದ ಶ್ರೀಮತಿ ಸವಿತಾ ಮುದ್ದಲ್ ಅವರು ಈಗಾಗಲೇ ತಮ್ಮ ರಚನೆಯ ಕವನ, ಕಥೆ, ಹನಿಗವನ, ಅಂಕಣ ಬರಹಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ. ಪತ್ರಿಕೆ. ಡಿಜಿಟಲ್ ಮಾಧ್ಯಮಗಳಲ್ಲಿ ಇವರ ಬರಹಗಳು ಪ್ರಕಟಗೊಂಡು ಸಹೃದಯರ ಓದಿಗೆ ದಕ್ಕಿವೆ. ಸ್ನಾತಕೋತ್ತರ ಪದವೀಧರೆಯಾಗಿ ಉದ್ಯೋಗದಲ್ಲಿ ಆಕೌಂಟ್ ಸೆಕ್ಷನ್‌ಗಳಲ್ಲಿ ಕಾರ್ಯ ನಿರ್ವಹಿಸಿದರೂ ಇವರ ಕನ್ನಡ ಪ್ರೀತಿ, ಸಾಹಿತ್ಯದತ್ತ ಒಲವು ಹಾಗೂ ಆದರತ್ತ ನಡಿಗೆ, ಪರಿಶ್ರಮದ ಹೆಜ್ಜೆಗಳು ನಿಜಕ್ಕೂ ಪ್ರಶಂಸಾರ್ಹವಾಗಿದೆ.
ಸವಿತಾ ಮುಚ್ಚಲ್ ಅವರ ‘ನೆರಳಿಗಂಟಿದ ಭಾವ ಚೊಚ್ಚಲ ಕವನ ಸಂಕಲನದ ಕವಿತೆಗಳು ಮನುಷ್ಯನ ಸಹಜ ಸ್ವಭಾವಗಳನ್ನು ಚಿತ್ರಿಸುತ್ತವೆ. ನೆರಳು. ಮುಸುಕು, ಮನದ ಭಾವ, ಅನವರತ, ತಾಯಿನೆರಳು, ಬೆಳದಿಂಗಳ ಸಂಗಮ. ಕವಲೊಡೆದ ಬಳ್ಳಿ, ನಕಲಿ ಮನಸಲಿ ಆಸಲಿಭಾವ ಹೀಗೆ ಬಹುತೇಕ ಕವನಗಳಿವೆ. ಮತ್ತೊಂದು ಮಗ್ಗುಲಲ್ಲಿ ಸಮಾನತೆ, ಸಹಜ ಬದುಕು, ಸೊಗದ ಬಾಳ್ವೆಯ ಹಂಬಲವನ್ನು ಪ್ರತಿನಿಧಿಸುವ ಕವಿತೆಗಳಿವೆ. ಸ್ನೇಹ, ಒಲವು, ಭಾವಗಳನ್ನು ಸ್ಪುರಿಸುತ್ತವೆ. ನಕಲಿ ವ್ಯಕ್ತಿತ್ವ, ದುರಾಲೋಚನೆ, ಕಪಟತನವನ್ನು ನಯವಾಗಿಯೇ ಖಂಡಿಸುತ್ತವೆ. ಪ್ರೀತಿಗಾಗಿ ಮಿಡಿತ. ತಾಯ್ತನದ ಹಂಬಲ, ಹೆಣ್ಣಿನ ಮನದ ತುಡಿತ. ಅಂತರಂಗ ಭಾವಗಳನ್ನು ಸರಳ ಭಾಷೆಯ ‘ಪದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಕವಯಿತ್ರಿ ಮಾಡಿದ್ದಾರೆ. ಕೆಲವು ಕವನಗಳು ವಯೋಮಾನ ಸಹಜ ಬಯಕೆಗಳನ್ನು, ಕನಸುಗಳನ್ನು ಬಿಂಬಿಸುತ್ತವೆ. ಒಟ್ಟಾರೆಯಾಗಿ ಬದುಕಿನತ್ತ ಮುಖಮಾಡಿ ಬಾಳ್ವೆಯ ಸೊಬಗನ್ನು, ಜೀವನ ಪ್ರೀತಿಯನ್ನು ಧೃಡೀಕರಿಸುತ್ತವೆ. ಸವಿತಾ ಮುಚ್ಚಲ್ ಅವರಿಂದ ಹೀಗೆಯೇ ಮತ್ತಷ್ಟು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಗೊಳ್ಳಲಿ, ‘ನೆರಳಿಗಂಟಿದ ಭಾವ’ ಕವನ ಸಂಕಲನವನ್ನು ಓದುಗ ಸಹೃದಯರು ಪ್ರೀತಿಯಿಂದ ಸ್ವಾಗತಿಸಲಿ ಎಂದು ಆಶಿಸುವೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.