SKU: 12819

ದಣಿದ ನದಿಗೊಂದು ಮಾತು

Original price was: ₹120.00.Current price is: ₹110.00.

Author: ವಿಜಯಲಕ್ಷ್ಮೀ ಕಲಾಲ್

Publishers Name: ರಾಶಿ ಕಲಾಲ್ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ವಿಜಯಲಕ್ಷ್ಮಿ ವೈ ಕಲಾಲ್ ಅವರು ತಿರುಳನ್ನಡ ನಾಡಿನಲ್ಲಿ ಬರೆಯುತ್ತಿರುವ ಪ್ರತಿಭೆ. ಕಾವ್ಯ ಕಟ್ಟುವ ಕಾಯಕದಲ್ಲಿ ನಿರಂತರ ತೊಡಗಿಕೊಂಡು ಈ ಮೂಲಾಮಿನಿಂದಲೇ ಈ ಜಗದ ಅಳಲು-ಅಳಿಸುವ ಉಪಾಯವನ್ನು ಕಂಡಿದ್ದಾರೆ. ಕವಿಯಾಗಲು ಅನುಭವ ದ್ರವ್ಯ, ಲೋಕಾಂತ-ಏಕಾಂತಗಳ ಭಾವ ಸಂವಾದ, ಸಂವೇದನಾಶೀಲ ಗುಣಗಳಿರಬೇಕು. ಈ ಎಲ್ಲಾ ಭಾವಗಳು ಕವಿ ವಿಜಯಲಕ್ಷ್ಮಿ ಅವರಲ್ಲಿ ಪ್ರಾಥಮಿಕ ದೆಸೆಯಲ್ಲಿ ಸಾಂದ್ರವಾಗಿ ಮಡುಗಟ್ಟಿವೆ. ತಾವು ಕಂಡ ಭಿನ್ನ ಭಿನ್ನ ಲೋಕ ನಡಾವಳಿಗೆ ಇವರು ಪ್ರತಿಸ್ಪಂದನೆಯನ್ನು ಅಕ್ಷರಗಳ ಮುಖೇನ ಕಟ್ಟಿದ್ದಾರೆ. ಈ ಕಟ್ಟುವಿಕೆಯಲ್ಲಿ ಪ್ರಾಮಾಣಿಕತೆಯಿದೆ, ಬದ್ಧತೆಯಿದೆ, ಬರೆಯಲೇಬೇಕೆಂಬ ಹಂಬಲ ಮತ್ತು ಕಾಳಜಿಗಳಿವೆ. ಈ ಕಾರಣದಿಂದಲೇ ವಿಜಯಲಕ್ಷ್ಮಿಯವರ ಕಾವ್ಯ ಗೆಲುವನ್ನು ಪಡೆಯುತ್ತದೆ. ಕವಿತೆ ನೇಯಲು ಅವರು ಹಾಕಿದ ಪದಜಾಲಗಳಲ್ಲಿ ಶ್ರಮವಿರುವುದು ಕಾಣಬರುತ್ತದೆ. ಆಯ್ದುಕೊಂಡ ವಸ್ತುಗಳು ನಿರ್ವಹಿಸುವಲ್ಲಿ ಅವರು ಗೆಲುವಿನ ಕಡೆ ನಡೆದಿದ್ದಾರೆ. ಸದಾ ಮಂದಸ್ಮಿತೆಯಾಗಿ, ಸಾಹಿತ್ಯವನ್ನು ಬದುಕಿನ ಭಾಗವೆಂದು ತಿಳಿದು ಸದ್ದಿಲ್ಲದೇ ಬರೆಯುವ ಹಂಗಿಗೆ ಒಳಗಾಗಿ, ಈಗ ಉತ್ತಮ ಕಾವ್ಯ ಫಲವನ್ನು ಸಹೃದಯರ ಪಾಲಿಗೆ ನೀಡುತ್ತಿದ್ದಾರೆ. ಭರವಸೆಯನ್ನು ಹುಟ್ಟಿಸುವ ಕೆಲವಾರು ರಚನೆಗಳು ಈ ಸಂಕಲನದಲ್ಲಿವೆ. ಕಾವ್ಯಯಾನದಲ್ಲಿ ಮತ್ತಷ್ಟು ಪಳಗುತ್ತಾ, ಹದವಾದ ಕಾಮ್ಮೋಪಮೇಗಳಿಂದ ಜೀವದ್ರವ್ಯ ರಚನೆಗಳನ್ನು ಈ ಕವಿಯಿಂದ ಖಂಡಿತಾ ನಿರೀಕ್ಷಿಸಬಹುದು.

 

Rating This Book

Reviews

There are no reviews yet.

Be the first to review “ದಣಿದ ನದಿಗೊಂದು ಮಾತು”

Your email address will not be published. Required fields are marked *

Top Books