+918310000414
contact@kannadabookpalace.com
+918310000414
contact@kannadabookpalace.com
₹100.00
ಹುಟ್ಟೂರಿನ ಜೀವನ ಪ್ರಸಂಗಗಳು.
Book Details |
---|
Author : ಸುಭಾಶ್ಚಂದ್ರ ಸಕ್ರೋಜಿ. |
Publisher : ನಿರ್ಮಲ ಭಾರತಿ ಪ್ರಕಾಶನ |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
“ಎಲ್ಲೆ ಇರು, ಹೇಗೆ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ರಾಷ್ಟ್ರಕವಿ ಕುವೆಂಪುರವರ ನುಡಿಯನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು ಶ್ರೀ ಸುಭಾಶ್ಚಂದ್ರ ಸಕ್ರೋಜಿಯವರು.
ಹೊಟ್ಟೆಪಾಡಿಗಾಗಿ ನಲವತ್ತು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಜೀವನ ನಡೆಸುತ್ತಿರುವ ಸಕ್ರೋಜಿಯವರಿಗೆ ತಮ್ಮ ಜನ್ಮಭೂಮಿ ಮತ್ತು ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಅವಿಸ್ಮರಣೀಯ.
ತಮ್ಮ ವಿದ್ಯಾರ್ಥಿ ಜೀವನದಿಂದಲೂ ಬೆಳೆಸಿಕೊಂಡು ಬಂದಿರುವ ಕಲೆ ಮತ್ತು ಸಾಹಿತ್ಯದ ಒಡನಾಟ, ಸಂಘ ಸಂಸ್ಥೆಗಳಲ್ಲಿ ಸಕ್ರೀಯ ಭಾಗವಹಿಸುತ್ತ, ಪರಭಾಷೆಯ ನೆಲದಲ್ಲೂ ಹೂವಿನಂತೆ ಅರಳಿ ಸುವಾಸನೆ ಬೀರುತ್ತಿದ್ದಾರೆ.
ತಾವು ಹುಟ್ಟಿ ಬೆಳೆದ ಗ್ರಾಮೀಣ ಪರಿಸರದ ಅನೇಕ ಪ್ರಸಂಗಳೊಂದಿಗೆ ತಮ್ಮ ಬಾಲ್ಯದ ಮತ್ತು ಉದ್ಯೋಗದ ಸಂದರ್ಭಗಳಲ್ಲಿ ಘಟಿಸಿದ ಮಧುರ ಕ್ಷಣಗಳನ್ನು ಮುತ್ತುಗಳಂತೆ ಪೋಣಿಸಿ ನೆನೆಪಿನ ಸುರುಳಿ ಎಂಬ ಕೃತಿಯಲ್ಲಿ ತುಂಬಿ ಕನ್ನಡಾಂಬೆಯ ಮುಡಿಗೇರಿಸಲು ಹೊತ್ತು ತಂದಿದ್ದಾರೆ. ತಮ್ಮ 62 ರ ಪ್ರಾಯದಲ್ಲೂ 26 ರ ತರುಣನ ಉತ್ಸಾಹದಿಂದಿರುವ ಸಕ್ರೋಜಿಯವರಿಂದ ಇನ್ನೂ ಹಲವಾರು ಉತ್ತಮ ಕೃತಿಗಳು ಹೊರಬರಲೇಂದು ಸಮಸ್ತ ಕನ್ನಡಿಗರ ಪರವಾಗಿ ಹಾರೈಸುತ್ತೇನೆ.
ಸದಾಶಿವ ಲ. ಮಾಳಿ
ಪ್ರಕಾಶಕರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.