SKU: 17697

ಇತಿಹಾಸದ ಪುಟಗಳಿಂದ ಸ್ವತಂತ್ರ ಪೂರ್ವದ ಹಸ್ತ ಪ್ರತಿಗಳು

250.00

Book Details
Author : ಸುಭಾಶ್ಚಂದ್ರ ಸಕ್ರೋಜಿ.
Publisher : ಕನ್ನಡ ಸಂಘ ಪುಣೆ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಬೆನ್ನುಡಿ
ಸ್ವಾತಂತ್ರ್ಯ ಕಟ್ಟಡ ನಿರ್ಮಾಣವಾಗಬೇಕಾದರೆ ಕಲ್ಲು, ಉಸುಕ್ ಅಷ್ಟೇ ಅಲ್ಲ, ಕಲ್ಲುಗಳ ಕೆಳಗೆ ಚಿಪ್ಪುಗಳೂ ಅಡಗಿವೆ. ಕಟ್ಟಡ ಪೂರ್ತಿಯಾದ ನಂತರ ದೊಡ್ಡ ಕಲ್ಲುಗಳು ಮಾತ್ರ ಕಾಣುವವು. ಈ ಕಲ್ಲುಗಳು ಅಜರಾಮರ ಉಳಿಯಬೇಕೆಂದರೆ, ಅವುಗಳೊಡನೆ ಪ್ರಾಣ ತ್ಯಾಗಿಸಿದ ಚಿಪ್ಪುಗಳದೇ ಆಧಾರ, ತುಣುಕುಗಳದೇ ಆಧಾರ, ಇಲ್ಲಿ ಲೇಖಕರು, ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ, ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು, ಸಣ್ಣ-ದೊಡ್ಡ ಸ್ವಾತಂತ್ರ್ಯ ಸೇನಾನಿಗಳ ಪರಿಚಯ ಹಾಗೂ ಅವರ ನುಡಿಗಟ್ಟುಗಳನ್ನು ಓದುಗರ ಮುಂದೆ ಇಟ್ಟಿದ್ದಾರೆ. ನಾವು ಸಲ್ಲಿಸಬೇಕಾದ ನಿಜವಾದ ಶ್ರದ್ಧಾಂಜಲಿಯೆಂದರೆ, ದಿನಕ್ಕೊಬ್ಬರಂತೆ ಈ ಕೃತಿಯ ಕೊನೆಯ ಭಾಗದಲ್ಲಿ ಕೊಟ್ಟಿರುವ ಸ್ವಾತಂತ್ರ್ಯ ಸೇನಾನಿಗಳ ಜನನ-ಮರಣ ದಾಖಲೆ ನೆನಪಿಸಿಕೊಂಡು, ಅವರ ಹೆಸರು ಹಾಗೂ ಕೃತಿಯನ್ನು ಶಾಲೆಗಳಲ್ಲಿ, ಸಾಮಾಜಿಕ ಸ್ಥಳಗಳಲ್ಲಿ, ದೈನಂದಿನ ವೃತ್ತಪತ್ರಿಕೆಗಳಲ್ಲಿ ಪ್ರಸ್ತುತಪಡಿಸಬೇಕು.

ಶ್ರೀ ಸಕ್ರೋಜಿಯವರು ನಮ್ಮ ಕನ್ನಡ ಸಂಘ ಪುಣೆಯ ಸದಸ್ಯರು. ಸಂಘದ ಹಾಗೂ ಶಾಲೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಲಿರುತ್ತಾರೆ. ಗಣಪತಿ ಹಬ್ಬದಲ್ಲಿಯಂತೂ ಅಲಂಕಾರಿಕ ಮಂಟಪ ರಚನೆಗಳಲ್ಲಿ ಇವರದು ಎತ್ತಿದ ಕೈ. ಪ್ರತಿವರ್ಷ ಇವರು ಪ್ರಸ್ತುತಪಡಿಸಿದ ಪೌರಾಣಿಕ ದೃಶ್ಯಗಳಿಂದ ಆಧುನಿಕ ಮಕ್ಕಳಿಗೆ ಹಾಗೂ ಜನತೆಗೆ ಹೊಸ ಜ್ಞಾನ ಸಿಗುತ್ತಲಿದೆ. ಇದೇ ರೀತಿ ಇವರ ಕೃತಿಗಳಿಂದ ಕನ್ನಡ ಸಂಘಕ್ಕೆ, ಕನ್ನಡ ಸಾಹಿತ್ಯಕ್ಕೆ, ಕನ್ನಡ ಶಿಕ್ಷಣ ಕ್ಷೇತ್ರಕ್ಕೆ ಇವರ ಯೋಗದಾನ ದೊರೆಯಲಿ, ಹಾಗೂ ಇಂತಹ ಇನ್ನೂ ಹೆಚ್ಚಿಗೆ ಕೃತಿಗಳು ಹೊರಬರಲೆಂದು ಕಾವೇರಿ ಗ್ರುಪ್ ಹಾಗೂ ಕನ್ನಡ ಸಂಘದ ಪರವಾಗಿ ಹಾರೈಸುತ್ತೇನೆ.
ಚಂದ್ರಕಾಂತ ಹಾರಕುಡೆ. (ಹೆಡ್ ಮಾಸ್ತರ).
ಡಾ. ಕಲ್ಮಾಡಿ ಶಾಮರಾವ್ ಹೈಸ್ಕೂಲ್. (ಕನ್ನಡ ಮಾಧ್ಯಮ)
ಪುಣೆ.

Rating This Book

Reviews

There are no reviews yet.

Be the first to review “ಇತಿಹಾಸದ ಪುಟಗಳಿಂದ ಸ್ವತಂತ್ರ ಪೂರ್ವದ ಹಸ್ತ ಪ್ರತಿಗಳು”

Your email address will not be published. Required fields are marked *

Top Books