Namma Oorina Rasikaru
₹160.00
| Book Details |
|---|
| Author : Goruru Ramaswamy Iyengar |
| Publisher : Ibh Prakashana |
| Language : Kannada |
| Paperback : 115 pages |
| ISBN-10 : 8189268287 |
| ISBN-13 : 978-8189268282 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ -ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ -ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ. ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ ; ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.
-ಪ್ರೊ. ಬರಗೂರು ರಾಮಚಂದ್ರಪ್ಪ




Reviews
There are no reviews yet.