+918310000414
contact@kannadabookpalace.com
+918310000414
contact@kannadabookpalace.com
₹90.00
Book Details |
---|
Author : Dr. H.M. Marulasiddaiah |
Publisher : IBH Prakashana |
ASIN : B00EBRG89K |
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ವಿಶ್ವದಲ್ಲಿನ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರಗಳನ್ನು ಕಂಡುಕೊಳ್ಳಲು ಬೇಕಾದ ಸಂಪನ್ಮೂಲಗಳು ಮತ್ತು ಮಾನವೇತರ ವೈಶ್ವಿಕ ಪ್ರಕಾರಗಳಲ್ಲಿ ಯಥೇಚ್ಛವಾಗಿ ಇವೆ. ಆದರೆ, ಸಮಸ್ಯೆಗಳನ್ನು ಸೃಷ್ಟಿಮಾಡಿಕೊಳ್ಳುತ್ತಲೇ ಸಾಗುತ್ತಿರುವ ಮತ್ತು ಮಾನವೇತರ ವೈಶ್ವಿಕ ಪ್ರಕಾರಗಳಲ್ಲಿಯೂ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿರುವ ಮಾನವನು ಬಿಡಿಸಿಕೊಳ್ಳಲಾರದ ಸಮಸ್ಯೆಗಳ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದಕ್ಕೆ ಕಾರಣಗಳು ಆಶ್ಚರ್ಯಕರವಾಗಿ ಕಾಣಿಸುವಂಥ ಎರಡು ಸಂಗತಿಗಳು. ಒಂದು, ಮಾನವನು ತನ್ನ ಒಳಗಿರುವ ಸತ್ವವನ್ನು ಸರಿಯಾಗಿ ತಿಳಿದುಕೊಳ್ಳದೆ ಅದನ್ನು ಊರ್ಜಿತಗೊಳಿಸದೆ ದುರುಪಯೋಗಪಡಿಸಿಕೊಳ್ಳುವುದು. ಎರಡು, ಇದೇ ಮನುಷ್ಯನು ಮನುಷ್ಯತರ ವೈಶ್ವಿಕ ಪ್ರಕಾರಗಳಲ್ಲಿನ ಸಂಪನ್ಮೂಲಗಳನ್ನು ಎಚ್ಚರಿಕೆಯಿಲ್ಲದೆ ದುರುಪಯೋಗಪಡಿಸಿಕೊಳ್ಳುತ್ತಿರುವುದು. ಆಧುನಿಕ ಸಮಾಜದ ಮಾನವನು ತಾನು ಎಷ್ಟು ಪ್ರಗತಿಯನ್ನು ಹೊಂದಿದ್ದೇನೆ ಎಂದು ತಿಳಿದುಕೊಂಡಿರುವನೋ, ಅದೇ ಪ್ರಮಾಣದಲ್ಲಿ ಸರಿಯಾಗಿ ಹೇಳುವುದಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಗತಿಯ ಪಾತಾಳಕ್ಕೆ ಕುಸಿಯುತ್ತಿದ್ದಾನೆ. ತಾನು ಇಡೀ ವಿಶ್ವವನ್ನೇ ತನ್ನ ಅಂತೆಯಲ್ಲಿ ಇಟ್ಟುಕೊಂಡು ಆಳಬಲ್ಲೆ ಎನ್ನುವ ಭ್ರಮೆಯಲ್ಲಿ ತಾನೇ ತಾನು ಸೃಷ್ಟಿಸಿಕೊಂಡ ಯಂತ್ರ ಮತ್ತಿತರ ತಾಂತ್ರಿಕ ವ್ಯವಸ್ಥೆಯ ಅಡಿಯಾಳಾಗಿದ್ದಾನೆ. ಮನುಷ್ಯನು ನಿಜವಾದ ಮಾನವನ ಜೀವನವನ್ನು ನಡೆಸಬೇಕಾದರೆ ಸುಜ್ಞಾನಭರಿತ ಶಿಕ್ಷಣವನ್ನು ಪಡೆದು ತನ್ನ ಒಳಗಿನ ಸಂಪನ್ಮೂಲಗಳನ್ನು ಉತ್ಥಾನಗೊಳಿಸಿಕೊಂಡು ಇತರ ವೈಶ್ವಿಕ ಪ್ರಕಾರಗಳಲ್ಲಿನ ಸಂಪನ್ಮೂಲಗಳನ್ನು ಗೌರವಯುತವಾಗಿ ಬಳಸಿಕೊಳ್ಳುವುದು ಅತ್ಯಂತ ಅವಸರದ ಕ್ರಮವಾಗಿದೆ. ಇಂಥ ಕ್ರಮದ ವಿಶ್ಲೇಷಣಾತ್ಮಕ ಚರ್ಚೆಯನ್ನು ಈ ಕೃತಿಯಲ್ಲಿ ನೀಡಲಾಗಿದೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.