ಮಕ್ಕಳ ಐದು ನಾಟಕಗಳು
₹150.00
Author : ಗುರುಸ್ವಾಮಿ ಗಣಾಚಾರಿ
Publishers Name : ವೀರೇಶ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಮುನ್ನುಡಿಯಿಂದ…..
ಪ್ರತಿ ನಾಟಕದಲ್ಲೂ ಪುರುಷ ಹಾಗೂ ಸ್ತ್ರೀಪಾತ್ರಗಳಿಗೆ ಸೂಕ್ತ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ. ಕಥಾನಾಯಕ ನಾಯಕಿಯರಲ್ಲದೆ ನಾಟಕಕಾರರು ತಮ್ಮ ವಿಚಾರ ಸರಣಿ ಚಿಂತನೆಯನ್ನು ಹರಿಯಬಿಡಲು ಯೋಗ್ಯವೆನಿಸುವಂತೆ ಪೋಷಕ ಪೂರಕ ಪಾತ್ರಗಳನ್ನು ಸೃಷ್ಟಿ ಮಾಡಿಕೊಂಡು ಓದುಗರನ್ನು ಸೆಳೆದಿಟ್ಟುಕೊಳ್ಳು ವಂತೆ ಕ್ರಿಯಾತ್ಮಕವಾದ ಚರ್ಚೆಯಲ್ಲಿ ಇಲ್ಲಿ ಪಾತ್ರಗಳು ತೊಡಗಿಕೊಂಡಿರುವುದು ಕಂಡು ಬರುತ್ತದೆ. ಈ ದಿಸೆಯಲ್ಲಿ ನೋಡುವಾಗ ಒಂಭತ್ತು ನೂರು ವರ್ಷಗಳ ಹಿಂದೆ ಸ್ತ್ರೀಧ್ವನಿಯೇ ಇಲ್ಲದ ಆಗಿನ ದಿನಗಳಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ವಾದಿಸಿದ, ನಿಲ್ಲಲು ನೆಲೆಯೇ ಇಲ್ಲದ, ಬದುಕಿಗೆ ಬೆಲೆಯೇ ಇಲ್ಲದ ಆ ಕಾಲದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಸೆಣಸಾಡಿದ ‘ಬಾಲಕಿ ಮಹಾದೇವಿ’ ಕತೆ ಚೆನ್ನಾಗಿ ಬಿಂಬಿತವಾಗಿದೆ. ಗುರುಭಕ್ತಿ ಆಧ್ಯಾತ್ಮಿಕ ಒಲವು ಅವಳ ಗೆಳತಿಯರು, ತಂದೆ ತಾಯಿಯವರ ಪ್ರೋತ್ಸಾಹವೆಲ್ಲ ಬೆನ್ನಿಗೆ ಇದೆ. ಮುಖ್ಯವಾಗಿ ಅಂದಿನ ಶೈಕ್ಷಣಿಕ ಕೇಂದ್ರ ಬಳ್ಳಿಗಾವಿಯ ನೆರಳಿರಬಹುದಾದ ಉಡುತಡಿಯ ಮಣ್ಣಿನ ಗುಣ ಅದಾಗಿದೆ. ಹಾಗೆಂದೇ ಮಹಾದೇವಿ ಅಣ್ಣಂದಿರಿಗೆಲ್ಲ ಅಕ್ಕನಾದಳು, ವೀರ ವಿರಾಗಿಣಿಯಾಗಿ ಬದುಕಿ ಮತ್ತು ವೈರಾಗ್ಯನಿಧಿಯಾಗಿ ಬೆಳೆದು ಸಾಧನೆಯ ಗಿರಿಶಿಖರ ತಲುಪಿದ್ದು.
ಎಸ್. ಜಿ. ಕೋಟಿ



Reviews
There are no reviews yet.