+918310000414
contact@kannadabookpalace.com
+918310000414
contact@kannadabookpalace.com
₹200.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಲೇಖಕರದು ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಂಡಾರಹಳ್ಳಿ ಗ್ರಾಮ. ತಂದೆ ವೆಂಕಟೇಶಪ್ಪ, ತಾಯಿ ಅಕ್ಕಚ್ಚಮ್ಮ. ಕೃಷಿಕರ ಕುಟುಂಬ. ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮದಲ್ಲಿ, ಪ್ರೌಢಶಾಲಾ ಶಿಕ್ಷಣ ದೇವರಾಯ ಸಮುದ್ರದಲ್ಲಿ, ಪಿಯುಸಿ, ಬಿಎ ಪದವಿ ಕೋಲಾರದಲ್ಲಿ ಎಂ.ಎ (ಕನ್ನಡ), ಬಿ.ಇಡಿ (ಇತಿಹಾಸ) ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾ| ಬಿ.ವಿ. ಮುನಿರಾಜು ಪಡೆದಿದ್ದಾರೆ.
ಸಂಜೆವಾಣಿ, ಈ ಸಂಜೆ ದಿನಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕನ್ನಡ ಚಳುವಳಿ ಕೇಂದ್ರ ಸಮಿತಿಯ ಸಂಸ್ಥಾಪಕ, ರಾಜ್ಯಾಧ್ಯಕ್ಷ ರಾದ ಜಿ. ನಾರಾಯಣ ಕುಮಾರ್ ಅವರ ಕಾರ್ಯದರ್ಶಿಯಾಗಿ, ಚಳುವಳಿಯ ಮುಖ್ಯ ಹೋರಾಟಗಾರರಾಗಿ, ಕನ್ನಡ- ನಾಡು-
ನುಡಿ-ಭಾಷೆಗೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ.
ಇವರ ಶಿಕ್ಷಣ ಕ್ಷೇತ್ರದ ಸೇವಾವಧಿಯಲ್ಲಿ ಕೆಂಪೇಗೌಡ ವಿದ್ಯಾಸಂಸ್ಥೆ, ಜಾನ್ಸನ್ ಪ್ರೌಢಶಾಲೆ, ಜರಗಾನ್ ಹೈಸ್ಕೂಲ್, ನ್ಯೂ ಕೇಂಬ್ರಿಡ್ಜ್ ಹೈಸ್ಕೂಲ್, ನ್ಯೂ ಶಾಂತಿನಿಕೇತನ್ (ಬೆಂಗಳೂರು) ವಿದ್ಯಾಸಂಸ್ಥೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಇವರದು. ಇವರು ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕರಾಗಿ ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಲೇಖನ, ಕವನ, ಲಾವಣಿ, ಜನಪದಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ರಚಿಸುವ ಹವ್ಯಾಸವನ್ನು ರೂಢಿಸಿ ಕೊಂಡಿದ್ದಾರೆ.
ಸಾಹಿತ್ಯಾಭಿಮಾನಿಗಳೂ, ಚಿಂತನಾಶೀಲರೂ, ವಿಚಾರವಂತರೂ, ಆದ ಇವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ರತ್ನಶ್ರೀ, ಕರ್ನಾಟಕ ಸುಪುತ್ರ ಡಾ. ರಾಧಾಕೃಷ್ಣನ್ ರಾಜ್ಯ ಪ್ರಶಸ್ತಿ, ಮರೆಯದ ಮಾಣಿಕ್ಯ, ಪ್ರಚಾರತ್ನ, ಕುವೆಂಪು ಸದ್ಭಾವನಾ ಪ್ರಶಸ್ತಿ, ಈ ನಾಡ ರತ್ನ, ಸುವರ್ಣ ಕನ್ನಡಿಗ, ಸಾಹಿತ್ಯ ಸೇವಾರತ್ನ, ಡಾ. ಎಪಿಜೆ ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಇವರ ಶಿಕ್ಷಣ, ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ೨೦೧೯ರಲ್ಲಿ ಇಂಟರ್‌ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ, ಚೆನ್ನೈ “ಗೌರವ ಡಾಕ್ಟರೇಟ್’ ಪದವಿ ನೀಡಿ ಗೌರವಿಸಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಇವರ ಸೇವೆ ತುಂಬಾ ಅಪಾರವಾದುದು.
ಪ್ರಸ್ತುತ ಕರ್ನಾಟಕ ಮಕ್ಕಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ, ಡಾ| ಬಿ.ವಿ. ಮುನಿರಾಜುರವರು ‘ಕರ್ನಾಟಕದ ಜ್ಞಾನಸಂಪದ ಹಾಗೂ ಚೈತನ್ಯದಾಯಕ ನುಡಿಮುತ್ತುಗಳು’ ಪುಸ್ತಕದ ರಚನ ಕಾರರೂ ಹಾಗೂ ಸಂಪಾದಕರೂ ಆಗಿದ್ದಾರೆ.
ಪ್ರಕಾಶಕರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.