SKU: 14985

ಗಾಂಧಿ ನಾನು ಅರಿತಂತೆ

130.00

ನಾನು ಅರಿತಂತೆ

Author : ಡಾ. ಮಹಾಬಲೇಶ್ವರ ರಾವ್‌

Publishers Name : ಕದಂಬ ಪ್ರಕಾಶನ 

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ. ಹಳೆಯ ಕಾಲದ ಆರಾಧನೆ ಹಿಂದೆ ಸರಿದು ವಸ್ತು ನಿಷ್ಠವಾಗಿ, ನಿರ್ದಾಕ್ಷಿಣ್ಯವಾಗಿ, ಕೆಲವೊಮ್ಮೆ ತೀರ ಕಟುವಾಗಿ ಗಾಂಧಿ ಜೀವನ ಮತ್ತು ದರ್ಶನವನ್ನು ವಿಮರ್ಶಿಸುವ ಪರಿಪಾಠ ಬೆಳೆದಿದೆ. ಅಂತೆಯೇ ಮುಸಲ್ಮಾನರ ಪರ, ಹಿಂದೂ ವಿರೋಧಿ ಎಂಬ ನೆಲೆಯಲ್ಲಿ ಗಾಂಧಿಯವರ ಬಗ್ಗೆ ಕಡುದ್ವೇಷವನ್ನು ಬೆಳೆಸುವ ಮತ್ತು ಹಂತಕ ಗೋಡೆಯನ್ನು ಆರಾಧಿಸುವ ಪರಂಪರೆಗೆ ಚಾಲನೆ ನೀಡಲಾಗಿದೆ. ಡಾ. ಮಹಾಬಲೇಶ್ವರ ರಾವ್ ಈ ಎರಡೂ ಚಿಂತನಧಾರೆಗಳನ್ನು ಮತ್ತು ಗಾಂಧಿ ಪ್ರತಿಪಾದಿಸಿದ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ, ಸ್ವರಾಜ್ಯ, ಚರಕ ಮೊದಲಾದ ಪರಿಕಲ್ಪನೆಗಳನ್ನು ಪರಾಮರ್ಶಿಸುತ್ತಾರೆ. ಗಾಂಧಿ ಕೊಲೆಯ ಆರಂಭಿಕ ವಿಫಲಯತ್ನಗಳು ಮತ್ತು ಹತ್ಯೆಯ ಹಿಂದಿನ ಕಾರಣಗಳ ಮೇಲೆ ಕ್ಷಕಿರಣ ಬೀರುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷದ ಸಂವಾದದ ಸಂಬಂಧವನ್ನು ವಿವರಗಳ ಮೂಲಕ ಕಟ್ಟಿಕೊಡುತ್ತಾರೆ.

ಈ ಸಂಕಲನ ಗಾಂಧಿಚಿಂತನ ಸಂಕಥನಗಳ ಮಾಲೆಗೆ ಡಾ. ಮಹಾಬಲೇಶ್ವರ ರಾವ್ ನೀಡಿರುವ ಸಮದರ್ಶಿತ್ವದ ಕೊಡುಗೆ.

Rating This Book

Reviews

There are no reviews yet.

Be the first to review “ಗಾಂಧಿ ನಾನು ಅರಿತಂತೆ”

Your email address will not be published. Required fields are marked *

Top Books

Hemavathi

Original price was: ₹200.00.Current price is: ₹190.00.

Dhyanasiddha

110.00

Nannuru

Original price was: ₹300.00.Current price is: ₹280.00.

Vaishaaka

380.00