+918310000414
contact@kannadabookpalace.com
+918310000414
contact@kannadabookpalace.com
₹100.00 Original price was: ₹100.00.₹90.00Current price is: ₹90.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಸುಸಂಸ್ಕೃತ ಮಹಿಳೆ ಆದರ್ಶ ಸಮಾಜದ ಕಣ್ಣು, ಹೊಸ ವಾತಾವರಣ ನಿರ್ಮಿಸಬಲ್ಲಳು. ಅಕ್ಷರದ ದೀವಿಗೆ ಹಿಡಿದಾಗ ಅದಕ್ಕೆ ಮತ್ತಷ್ಟು ಕಳೆ ತುಂಬುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕಿಯರಾದ ಶ್ರೀಮತಿ ಶೈಲಾ ಎಸ್. ಹಿಟ್ನಳ್ಳಿ ಅವರು ಪ್ರತಿಭಾವಂತ ಕವಯತ್ರಿ, ಶಿಕ್ಷಣ ಮತ್ತು ಸಾಹಿತ್ಯಗಳೆರಡು -ಪೂರಕವಾಗಿಸಿ ಸಮಾಜ ಕಟ್ಟುವ ಕನಸು ಹೊಂದಿದ್ದಾರೆ. ಆದರ್ಶ ಶಿಕ್ಷಕರಿಂದಲೇ ಬದಲಾವಣೆ ಸಾಧ್ಯ. ಇಂತಹ ಬದಲಾವಣೆಯ ಹಾದಿಯಲ್ಲಿ ಅಕ್ಷರದ ಬೀಜಗಳು ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಮಕ್ಕಳಂತೆ ಮಕ್ಕಳಾಗಿ ಪಾಠ ಮಾಡುವ ಪರಿ ಕಾಯಕದಲ್ಲಿ ತೊಡಗಿಸಿ ಕೊಂಡಿರುವರು.
ಬದುಕು ಮತ್ತು ಬರಹ ಜೊತೆಯಾಗಿಸಿದ್ದಾರೆ. ಅಲ್ಲದೆ ಬದುಕಿನ ಸವಾಲುಗಳನ್ನು ಸಮಾನವಾಗಿ ಸ್ವೀಕರಿಸಿ, ಅವುಗಳಿಗೆ ಅಕ್ಷರದ ರೂಪ ಕೊಟ್ಟಿದ್ದಾರೆ. ಬುದ್ಧ, ಬಸವ, ಅಂಬೇಡ್ಕರವರ ಚಿಂತನೆಗಳನ್ನು ಎಲ್ಲಾ ಕವನಗಳಲ್ಲಿ ಅಭಿವ್ಯಕ್ತಗೊಳಿಸಿರುತ್ತಾರೆ. ಸ್ತ್ರೀ ಸಂವೇದನೆ, ಲಿಂಗ ತಾರತಮ್ಯ ನಿವಾರಣೆ ಸೇರಿ ಕಾವ್ಯ ಸ್ವರೂಪದ ಆಶಯ ಮೂಡಿಸಿದ್ದಾರೆ. ಅವರ ಕಾವ್ಯ ಸೃಷ್ಟಿ ನಿರಂತರವಾದುದು. ಚಲನಶೀಲತೆ ಎಲ್ಲಾ ಕವನಗಳಲ್ಲೂ ಕಾಣುತ್ತೇವೆ. ಅವುಗಳಲ್ಲಿ ಹಿತಾನುಭವವೂ ಇದೆ.
ಜೀವನದ ಕ್ಷಣಗಳನ್ನು ಉಸಿರಾಗಿಸಿಕೊಂಡಾಗ ಸಾರ್ಥಕ ಎನ್ನಲಿಕ್ಕೆ “ಕಾಡತಾವ ನೆನಪ” ಈ ಕೃತಿಯೇ ಸಾಕ್ಷಿ. ಅಕ್ಷರ ಪೋಣಿಸಿ ಕಾವ್ಯ ಕಟ್ಟುವ ಕಲೆಯೊಂದು ಶೈಲಾ ಹಿಟ್ನಳ್ಳಿಯವರಲ್ಲಿ ವಿಭಿನ್ನವಾಗಿ ನೋಡುತ್ತೇವೆ. ಕಷ್ಟ- ಸುಖಗಳ ಪ್ರೀತಿಯ ಒಲುಮೆ ಇದೆ. ಬಳಲಿದ ಮನಸುಗಳಿಗೆ ಸ್ಫೂರ್ತಿ ತುಂಬುವ ನುಡಿಗಳಿವೆ. ತುಡಿತ ಮಿಡಿತಗಳು ಕೃತಿಯಲ್ಲಿವೆ. ಭರವಸೆಯ ಕವಿಯಾಗಿ ಬೆಳೆಯುವ ಎಲ್ಲ ಅವಕಾಶಗಳು ಒದಗಿ ಬರಲಿ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.