SKU: 14966

ಬೆವರ ಹನಿಗಳು

Out of stock

100.00

Author : ಶಿವರಾಜ್ ಅರಳಿ

Publishers Name : ಅಪ್ಪಾಜಿ ಪ್ರಕಾಶನ 

(1 customer review)

Out of stock

🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಯುವಕವಿ ಶಿವರಾಜ ಅವರ ಚೊಚ್ಚಲ ಕೃತಿ “ಬೆವರ ಹನಿಗಳು” ಇದು ಅತ್ಯಂತ ಸಮೃದ್ಧವಾದ ಕವನ ಸಂಕಲನ, ಕಾವ್ಯವೆಂದರೆ ಮಾತನಾಡುವ ಚಿತ್ರ ಎಂಬ ಮಾತು ಸತ್ಯವಾದದು. ನಿಜವಾದ ಕಾವ್ಯ ಶಬ್ದಚಿತ್ರಗಳ ಮೂಲಕ ಮನಸ್ಸನ್ನು ಸ್ಪರ್ಶಿಸುತ್ತದೆ. ಹೊಸದನ್ನು ಕಂಡು, ಹೊಸದನ್ನು ಆಲೋಚಿಸಿ, ಹೊಸ ಭಾಷೆಯಲ್ಲಿ ಜೀವನಾನುಭವ ಕಟ್ಟಿಕೊಡುವ ಮಾಂತ್ರಿಕ, ಕವಿ ಶಿವರಾಜ ಅರಳಿ ಅವರ 50ಕ್ಕೂ ಹೆಚ್ಚು ಕವಿತೆಗಳು ವಿಭಿನ್ನವಾಗಿ “ಬೆವರ ಹನಿಗಳು” ಎಂಬ ಕವನ ಸಂಕಲನದಲ್ಲಿ ಮೂಡಿ ಬಂದಿವೆ. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾದರೂ ಪ್ರವೃತ್ತಿಯಿಂದ ಸಾಹಿತ್ಯವನ್ನು ಪ್ರೀತಿಸಿದವರು. “ಬೆವರ ಹನಿಗಳು” ಕವನ ಸಂಕಲನದ ಪ್ರತಿ ಕವಿತೆಯು ಶಿವರಾಜ ಅವರ ಶುದ್ಧಭಾವದ ಚಿಂತನೆಯ ಹನಿಗಳೆಂದು ಕರೆಯಬಹುದು, ಯುವಕವಿ ಶಿವರಾಜ ಅವರನ್ನು ಮಾಗಿದ-ಬಾಗಿದ ವ್ಯಕ್ತಿತ್ವ ಆಗಿರುವುದರಿಂದ ಆ ಛಾಯೆಯ ಪ್ರತಿರೂಪವನ್ನು ಅವರ ಕವಿತೆಗಳಲ್ಲಿ ಕಾಣಬಹುದು. ಯುವಕವಿ ಬರೆದ ಕವನಗಳು ಓದುಗರಿಗೆ ಆಕರ್ಷಣೆ ಮೂಡಿಸಿ, ಬೆಳಕಿನಡೆಗೆ ಕೊಂಡೊಯಲಿ, ಅವರ ಸಾಹಿತ್ಯ ಕೃಷಿಗೆ ಶುಭವಾಗಲಿ, ಪ್ರೀತಿಯಿಂದ ಸಹೃದಯ ಬಳಗ “ಬೆವರ ಹನಿಗಳು” ಕವನ ಸಂಕಲನಕ್ಕೆ ಗೌರವ ನೀಡಲಿ.

Rating This Book

1 review for ಬೆವರ ಹನಿಗಳು

  1. ಶಿವು ಬ ಹಾದಿಮನಿ

    Review for ಬೆವರ ಹನಿಗಳು
    ★ ★ ★ ★ ★

Add a review

Your email address will not be published. Required fields are marked *

Top Books