SKU: 17587

ಜಯಂತಿಪುರದ ಕತೆಗಳು

300.00

Book Details
Author : Shreedhara Banavsi
Publisher - ಪಂಚಮಿ ಪಬ್ಲಿಕೇಷನ್ಸ್
Pages - 272

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಪ್ರಿಯ ಶ್ರೀಧರ ಬನವಾಸಿ,

ನಿಮ್ಮ ‘ಜಯಂತಿಪುರದ ಕಥೆಗಳು’ ಒಂದು ಕಾದಂಬರಿಯನ್ನು ಓದಿದ ಅನುಭವ ಕೊಡುತ್ತವೆ. ಒಂದೇ ಊರಿನಲ್ಲಿ ಕಾಲಾಂತರದಲ್ಲಿ ಸಂಭವಿಸಿದ ಘಟನೆಗಳನ್ನು ನೀವು ಬಿಡಿಬಿಡಿಯಾಗಿ ಕತೆಗಳ ರೂಪದಲ್ಲಿ ನಿರೂಪಿಸಿದ್ದರೂ, ಅವುಗಳೆಲ್ಲಾ ಜಯಂತಿಪುರದ ಮಡಿಲಲ್ಲಿವೆ. ಎಲ್ಲೋ ನಡೆದ ಕತೆಗಳಾಗಿದ್ದರೂ ಒಂದೂರಿಗೆ ತಂದು ಚಿತ್ರಿಸುವುದು ಕತೆಗಾರರಿಗೆ ಒಲಿಯುವ ಸಹಜ ಧ್ಯಾನ. ಈ ಜಯಂತಿಪುರದಲ್ಲಿ ಮಧುಕೇಶ್ವರ, ಮಾರಮ್ಮ, ಊರುಕೇರಿಯ ದೈವಗಳಾಗಿ ನಿಂತು ಸಮಸ್ತರ ನಂಬಿಕೆಯನ್ನು ಸುಸ್ಥಿರವಾಗಿಸಿವೆ. ವರದಾ ನದಿಯು ಸಕಲ ದೈವಸ್ಥರ ಜೀವನಾಡಿಯಾಗಿ ಪರಿಣಮಿಸಿದೆ.

-ಅಮರೇಶ್ ನುಗಡೋಣಿ

ಜಯಂತಿಪುರವೆಂಬುದು ಬೃಹತ್ಕಥೆ ಅಥವಾ ಕಾದಂಬರಿಯ ಬಿಡಿ ಅಧ್ಯಾಯಗಳು. ಒಂದು ಅಧ್ಯಾಯ ಮುಂದಿನ ಅಧ್ಯಾಯಕ್ಕೆ ಪೂರಕವಾಗಿರುವಂತೆ ರೂಪಿಸಲ್ಪಟ್ಟಿದೆ. ಒಂದೊಂದೇ ಕಥೆ ಜಯಂತಿಪುರದ ಅಧ್ಯಾಯಗಳನ್ನು ತೆರೆದಿಡುತ್ತ ಕೊನೆಯಲ್ಲಿ ಜಯಂತಿಪುರದ ಒಂದು ಸಮಗ್ರ ಚಿತ್ರಣ ಅನಾವರಣಗೊಳ್ಳುತ್ತದೆ. ಗೋರೂರು ರಾಮಸ್ವಾಮಿ ಅಯ್ಯಂಗಾರರ ‘ನಮ್ಮೂರಿನ ರಸಿಕರು’, ಆರ್.ಕೆ.ನಾರಾಯಣ್‌ರ ‘ಮಾಲ್ಗುಡಿ ಡೇಸ್’ ನಂತೆ ಈ ಪ್ರಕಾರದಲ್ಲಿ ಇದು ಒಂದು ಯಶಸ್ವಿ ಪ್ರಯತ್ನ.

-ಬನವಾಸಿ ವೆಂಕಟೇಶ ದೀಕ್ಷಿತ್

Rating This Book

Reviews

There are no reviews yet.

Be the first to review “ಜಯಂತಿಪುರದ ಕತೆಗಳು”

Your email address will not be published. Required fields are marked *

Top Books