+918310000414
contact@kannadabookpalace.com
+918310000414
contact@kannadabookpalace.com
₹200.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಭಾರತೀಯ ಸನಾತನ ಧರ್ಮಕ್ಕೆ ಬಹುದೊಡ್ಡ ಇತಿಹಾಸವಿದೆ. ಮಾನವ ದೇವಮಾನವನಾಗಲು ಆಧ್ಯಾತ್ಮವು ದಿವ್ಯಪ್ರೇರಣೆ ನೀಡುತ್ತದೆ. ಸನಾತನ ಧರ್ಮದ ಮುಖ್ಯ ಕಣಜವೇ ಆಧಾತ್ಮ. ಮೋಕ್ಷ ಸಾಧನೆಗೆ ಸೋಪಾನವಾಗಬಲ್ಲ ಆಧ್ಯಾತ್ಮ ಹಾಗೂ ಭಕ್ತಿಯು ಭಾರತೀಯ ಋಷಿಮುನಿಗಳ ಕೊಡುಗೆ. ಭಕ್ತಿಯಲ್ಲಿ ಶಕ್ತಿ ಇದೆ ಎಂದು ಹನುಮಂತ ತೋರಿಸಿಕೊಟ್ಟಿದ್ದಾನೆ. ಇಂಥ ಅಮೂಲ್ಯವಾದ ಆಧ್ಯಾತ್ಮ ಹಾಗೂ ಭಕ್ತಿಗೆ ಒಲಿದು ಬದುಕನ್ನು ದಿವ್ಯವಾಗಿಸಿಕೊಂಡವರು ಹಿರಿಯ ಸಾಹಿತಿಗಳಾದ ಗುರುಸ್ವಾಮಿ ಗಣಾಚಾರಿಯವರು.
ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಗುರುಸ್ವಾಮಿ ಗಣಾಚಾರಿಯವರು ಕತೆ, ಕಾದಂಬರಿ, ನಾಟಕ, ಕಾವ್ಯ, ವಚನೆಗಳು, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಪ್ರಕಾರ ಗಳಲ್ಲಿಯೂ ೧೦೫ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆ. ಗುರುಸ್ವಾಮಿಯವರು ಎಂಭತ್ತರ ಇಳಿ ವಯಸ್ಸಿನಲ್ಲಿಯೂ ದಣಿವರಿಯ ದಂತೆ ಬರೆಯುತ್ತಿರು ವುದು ಸೋಜಿಗವೇ ಸರಿ. ‘ಅವರು ಎರಡೂ ಕೈಗಳಿಂದ ಬರೆಯುತ್ತಾರೆಯೇ?’ ಎಂದು ಅವರ ಆತ್ಮೀಯರೆಲ್ಲರಿಗೆ ಅನಿಸದೇ ಇರದು. ಈಗ ಅವರು ‘ಗುರುಸ್ವಾಮಿಯವರ ತತ್ವಪದಗಳು’ ಎಂಬ ಅಪರೂಪದ ಕೃತಿ ಹೊರ ತಂದಿದ್ದಾರೆ. ಈ ಸಂಕಲನದಲ್ಲಿ ೧೫೩ ಕವನಗಳಿವೆ. ಇವೆಲ್ಲವೂ ಅಮೂಲ್ಯ ರತ್ನಗಳಿದ್ದಂತೆ. ಮಾನವರನ್ನು ಸರಿದಾರಿಗೆ ಕರೆದುಕೊಂಡು ಹೋಗುವ ದಿವ್ಯಶಕ್ತಿಯ ಗುಣ ಹೊಂದಿವೆ. ಭಕ್ತಿ, ಜ್ಞಾನ, ಆಧ್ಯಾತ್ಮಿಕತೆ, ಗುರುವಿನ ಮಹತ್ವ, ದೇವರು, ಜೀವನ ಪ್ರೀತಿ, ಬದುಕಿನ ರೀತಿ, ದೈವ ಪ್ರೇರಣೆ, ವಿನಯಶೀಲತೆ, ನೈತಿಕತೆ ಮುಂತಾದ ವಿಷಯಗಳು ಕವನಗಳಾಗಿ ರೂಪುಗೊಂಡು ಸಾಲುದೀಪಗಳಂತೆ ಕಂಗೊಳಿಸುತ್ತವೆ. ಕೃತಿಗೂ ಘನವಂತಿಕೆಯನ್ನು ತಂದುಕೊಟ್ಟಿವೆ.
ಬಹುತೇಕ ಪದ್ಯಗಳು ಜನಪದ ಸಾಹಿತ್ಯದ ಭಾಗವಾದ ಭಜನಾ ಪದಗಳಾಗಿರುವುದು ವಿಶೇಷ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಂಡಿತರಾದ ಗುರುಸ್ವಾಮಿಯವರು ಪ್ರತಿಯೊಂದು ಕವನಕ್ಕೆ ರಾಗವನ್ನು ಸೂಚಿಸಿದ್ದಾರೆ. ಆಧ್ಯಾತ್ಮದ ಬೆಳಕು ಈ ಕೃತಿಯ ಬಹುತೇಕ ಕವನಗಳಲ್ಲಿ ಎದ್ದು ಕಾಣುತ್ತದೆ. ಆ ಬೆಳಕಿನಲ್ಲಿ ಸಾಗಿ ನಾವೆಲ್ಲ ಪುನೀತರಾಗಬೇಕಾಗಿದೆ.
`ಗುರುಸ್ವಾಮಿಯವರು ಪ್ರಪಂಚದಲ್ಲಿದ್ದು ಪಾರಮಾರ್ಥ ಗೆದ್ದವರು. ಅವರು ಸಂತೆಯಲ್ಲಿರುವ ಸಂತರಂತೆ ಸಂಸಾರದ ತಾಪತ್ರಯಗಳನ್ನು ಹಚ್ಚಿಕೊಳ್ಳದೆ ಪಾರಮಾರ್ಥದ ಸಾಧನೆ ಮಾಡಿದವರು. ಅಂತೆಯೇ ಇಂಥ ಕೃತಿ ರಚನೆಗೆ ಸಾಧ್ಯವಾಗಿದೆ. ಅಂಥ ದಿವ್ಯಶಕ್ತಿಯನ್ನು ಗಣಾಚಾರಿಯವರು ಪಡೆದುಕೊಂಡಿದ್ದಾರೆ. ಸಾಹಿತ್ಯದ ಕೆಲಸವೆಂದರೆ ಅವರಿಗೆ ಇನ್ನೂ ಹೆಚ್ಚು ಪ್ರೀತಿ, ಅವರ ಆಧ್ಯಾತ್ಮದ ಅಪಾರ ಸಾಧನೆ ಇಂಥ ಅಪೂರ್ವ ಕೃತಿಗೆ ಸಾಕ್ಷಿಯಾಗಿದೆ.
ಎಸ್. ಎಸ್. ಹಳ್ಳೂರ, ಸಾಹಿತಿಗಳು, ಬಾಗಲಕೋಟೆ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.