ಅರಿವಿನ ಒಲವು ಅರಳಿದಾಗ
₹120.00
(ಚಿಂತನಗಳು)
Author : ಎಂ. ಎಚ್. ಮೊಕಾಶಿ
Publishers Name : ಸಮನ್ವಿತ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಗಿಡದಾಗ ಗಿಡಚಂದ. ಮಾವಿನ ಗಿಡಚಂದು ಹಕ್ಕಿ ಪಕ್ಕಾಗ ಗಿಳಿಚಂದ, ಆಗಸದ ಚಿಕ್ಕಾಗ ಬಲು ಚಂದ ಚಂದ್ರಾಮ||
ಎಂಬ ಕವಿವಾಣಿಯಂತೆ ರಾತ್ರಿ ಬೆಳದಿಂಗಳ ಆಕಾಶದಲ್ಲಿ ಹುಣ್ಣಿಮೆಯ ಚಂದ್ರ ಶೋಭಾಯಮಾನವಾಗಿ ಕಾಣುತ್ತಾನೆ. ಹಾಗೆ ಎಂ.ಎಚ್.ಮೊಕಾಶಿಯವರು ಸಾಹಿತ್ಯಲೋಕದಲ್ಲಿ ಶೋಭಾಯಮಾನರು.
ಇವರು ಇತಿಹಾಸ, ಕನ್ನಡ, ಶಿಕ್ಷಣಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಪ್ರವಾಸೋಧ್ಯಮ ಮತ್ತು ಆರ್ಟ್ ಹಿಸ್ಟರಿ ವಿಷಯದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಇತಿಹಾಸ ಮತ್ತು ಶಿಕ್ಷಣಶಾಸ್ತ್ರದಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಉಪನ್ಯಾಸಕ ವೃತ್ತಿಯೊಂದಿಗೆ ಸಾಹಿತ್ಯಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಿಗೆ ಪ್ರಚಲಿತ ಸಂಗತಿ, ಚಿಂತನ, ಕಥೆ, ಕವನಗಳನ್ನು ಬರೆಯುವುದರ ಜೊತೆಗೆ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ‘ಶಿಕ್ಷಣಶಾಸ್ತ್ರ’ ಕೈಪಿಡಿ ಹಾಗೂ ‘ಯಶಸ್ವಿ ಬದುಕಿನತ್ತ’ ಎಂಬ ಕೃತಿ ಪ್ರಕಟಿಸಿದ್ದಾರೆ. ಅಲ್ಲದೇ ಇವರ ಚಿಂತನಗಳು ವಿವಿಧ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ.
‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬಂತೆ ತಮ್ಮ ಕಿರು ವಯಸಿನಲ್ಲಿಯೇ ‘ಕರ್ನಾಟಕ ವಿಕಾಸ ರತ್ನ’, ‘ಬಸವ ಶಿರೋಮಣಿ’ ‘ಸರ್ ಎಂ.ವಿಶ್ವೇಶ್ವರಯ್ಯ’, ರಾಜ್ಯ ಪ್ರಶಸ್ತಿಗಳಲ್ಲದೇ ಎ.ಎಂ.ಪಿ. ಕೊಡಮಾಡುವ ‘ಎಕ್ಸಲೆನ್ಸ್ ಇನ್ ಎಜುಕೇಶನ್’ ಹಾಗೂ ‘ಭಾರತ ಜ್ಞಾನ ಜ್ಯೋತಿ’ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಸ್ತುತ ಇವರ ಈ ಕೃತಿ ನಮ್ಮ ಬದುಕಿನ ದಾರಿದೀಪವಾಗಲಿ. ಇದರಲ್ಲಿನ ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದು. ಎಂ. ಎಚ್. ಮೊಕಾಶಿಯವರು ನಿರಂತರವಾಗಿ ಹೀಗೆಯೇ ಹಲವಾರು ಕೃತಿಗಳನ್ನು ರಚಿಸಲಿ, ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲೆಂದು ಹಾರೈಸುತ್ತೇನೆ.
ಸಿದ್ದಲಿಂಗಪ್ಪ ಹದಿಮೂರ ಸಾಹಿತಿಗಳು, ವಿಜಯಪುರ




Reviews
There are no reviews yet.