+918310000414
contact@kannadabookpalace.com
+918310000414
contact@kannadabookpalace.com
₹60.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಕನ್ನಡದಲ್ಲಿ ಹಿರಿಯರ ಕಾದಂಬರಿ ಸಾಹಿತ್ಯ ಹುಲುಸಾಗಿ ಬೆಳೆದಂತೆ ಮಕ್ಕಳ ಕಾದಂಬರಿಗಳು ಬಂದಿಲ್ಲ. ಬಂದರೂ ಸಂಖ್ಯೆ ತೀರಾಕಡಿಮೆ. ಆದರೆ ಈ ಎರಡೂರು ವರ್ಷಗಳಲ್ಲಿ ಕವನ, ಕಥಾ ಸಂಕಲನಗಳ ಫಸಲು ಸ್ವಲ್ಪ ಕಡಿಮೆಯಾಗಿ ಕಾದಂಬರಿಗಳ ಸುಗ್ಗಿ ಕಾಲ ಆರಂಭವಾಗಿರುವುದು ಕನ್ನಡ ಮಕ್ಕಳ ಸಾಹಿತ್ಯದ ಬೆಳವಣಿಗೆಯ ಪರ್ವಕಾಲ ಎಂದೇ ನಾನು ಭಾವಿಸುತ್ತೇನೆ. ಕೆಲ ಮಿತ್ರರು ಇತ್ತೀಚೆಗೆ ಹೊಸಕಾಲದ ಮಕ್ಕಳಿಗಾಗಿ ನವೀನ ತಂತ್ರಗಳನ್ನು ಒಳಗೊಂಡ ರೋಚಕ ಕಾದಂಬರಿಗಳನ್ನು ನೀಡುತ್ತಿದ್ದಾರೆ. ಆ ಸಾಲಿಗೆ ಸೇರುತ್ತಿರುವ ಮಕ್ಕಳ ಸಾಹಿತಿ ಸತೀಶ ಕಂಚುಗಾರನಹಳ್ಳಿ ಅವರ ಈ ಕಾದಂಬರಿ ಮಕ್ಕಳ ಮನ ಅರಳಿಸುತ್ತ. ಮುದಗೊಳಿಸುತ್ತ, ಪ್ರಾಣಿ-ಪರಿಸರ ಪ್ರೇಮವನ್ನು ಮೂಡಿಸುತ್ತ ನಿಜವಾದ ಜೀವನ ಮೌಲ್ಯಗಳನ್ನು ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.
ಈಗಾಗಲೇ ಸ್ಥಾನಿಟರಿ ಪ್ಯಾಡ್ (ಕಾದಂಬರಿ), ಬಂಗಾರದ ಹನಿಗಳು (ಕವನ ಸಂಕಲನ), ಮುಂದೇನಾಯ್ತು (ಕಥಾ ಸಂಕಲನ) ಎಂಬ ವಿಶಿಷ್ಟ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಸತೀಶ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದರೂ ಕಳೆದ ಹದಿಮೂರು ವರ್ಷಗಳಿಂದ ಬಂಡಾಯದ ನಾಡು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತ ಸಕ್ರೀಯ ಬರವಣಿಗೆಯಲ್ಲಿ ತೊಡಗಿದ್ದಾರೆ.
ಮಲೆನಾಡಿನಲ್ಲಿ ಬೆಳೆದು ಬಂದ ಸತೀಶ ಅಲ್ಲಿನ ವರಿಸಳವನ್ನು ಆಯ್ದುಕೊಂಡು ತುಂಬಾ ಚೇತೋಹಾರಿಯಾದ ಕಲ್ಲನೆ, ಸರಳ ಭಾಷೆ ಹಾಗೂ ಎಳೆಯ ಮನಸ್ಸನ್ನು ಹಿಡಿದಿಡುವ ಕಥಾ ವಸ್ತುವಿನ ಮೂಲಕ ನಂಟು-ಪಿಂಟು ಮತ್ತು ಮಿಂಚುವಿನ ಸಂಚಲನ” ಎಂಬ ಕಾದಂಬರಿಯನ್ನು ಚಿಣ್ಣರಿಗಾಗಿ ನೀಡುತ್ತಿದ್ದಾರೆ. ಈ ಕೃತಿಯಲ್ಲಿ ಚಿಂಟು ಮತ್ತು ಪಿಂಟು ಎಂಬ ಇಬ್ಬರು ಸಹೋದರರ ಸಾಹಸಗಾಥೆ ಇದೆ. ಮಿಂಚು ಎಂಬ ಮುದ್ದು ಮೊಲದ ಸ್ನೇಹದ ಮೂಲಕ ಕಾಡಿನಲ್ಲಿಯ ಎಲ್ಲಾ ಪ್ರಾಣಿಗಳಿಗೆ ಕಷ್ಟಪಟ್ಟು ತರಬೇತಿ ಕೊಡಿಸಿ ಅವುಗಳಿಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಮೂಲಕ ಸರ್ವರ ಹಾಗೂ ಸರಕಾರದ ಪ್ರಶಂಸೆಗೆ ಪಾತ್ರರಾಗುವ ಹಾಗೆಯೇ ಮನುಷ್ಯತರ ಜೀವಿಗಳಿಗೆ ಅಂತಃಕರಣ ಮಿಡಿಯುವ ಸನ್ನಿವೇಶಗಳು ಸೊಗಸಾಗಿ ಮೂಡಿಬಂದಿವೆ.
ಜೀವಪರ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಎಳೆಯ ಓದುಗರ ಮನಸ್ಸನ್ನು ಉತ್ತಮವಾಗಿ ಪ್ರಭಾವಿಸಬಲ್ಲ ಶಕ್ತಿ ಹೊಂದಿದ ಇಂತಹ ಅಪರೂಪದ ಕಾದಂಬರಿ ಬರೆದ ಸತೀಶರನ್ನು ಎಷ್ಟು ಅಭಿನಂದಿಸಿದರೂ ಸಾಲದು.
ಡಾ. ರಾಜೇಂದ್ರ, ಎಸ್. ಗಡಾದ
ಎಂ. ಎ. ಪಿ ಎಚ್ ಡಿ
ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಗದಗ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.