ಭೈರ
₹100.00
Author : ಕಂಸ (ಕಂಚುಗಾರನಹಳ್ಳಿ ಸತೀಶ್ )
Publishers Name : ಸಾಗರಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಆನೆ ಬಂತೊಂದಾನೆ, ಯಾವೂರಾನೆ ಇಲ್ಲಿಗ್ಯಾಕೆ ಬಂತು? ತಾಯಿ ಹುಡುಕಿಕೊಂಡು ಬಂತು, ತಾಯಿ ಸಿಗದೆ ಬೇಜಾರಾಗಿ, ಬಾಲ ಅಲ್ಲಾಡಿಸ್ಕೊಂಡು ಹೋಯ್ತು…… ಎನ್ನುವ ಶಿಶುಗೀತೆಯನ್ನು ಗುಣುಗುಡುತ್ತಾ “ಭೈರ” ಎಂಬ ಈ ಮಕ್ಕಳ ಕಾದಂಬರಿ “ಭೈರಾಪುರ”ದ ಆನೆಯ ಹಿಂಡಿನ ಸುತ್ತಮುತ್ತ ಹೆಣೆದಿರುವ ಕಥಾನಕವಿದು. ನಮ್ಮ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಭೈರಾಪುರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವಾಗಲೂ ಆನೆಗಳ ಹಿಂಡಿನ ಹಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಕಂಚುಗಾರನಹಳ್ಳಿ ಸತೀಶ್ ಪರಿಸರ ಕಾಳಜಿಯುಳ್ಳ ಕಾದಂಬರಿಯನ್ನು ಹೊರತಂದಿದ್ದಾರೆ. ಶ್ರೀಯುತರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಸಹ ಪ್ರವೃತ್ತಿಯಲ್ಲಿ ಸಾಹಿತ್ಯದ ಗೀಳನ್ನು ಬೆಳೆಸಿಕೊಂಡಿರುವುದು ತುಂಬಾ ಸಂತೋಷದ ವಿಷಯ. ಕಂಸ ಅವರ ಲೇಖನಿಯಿಂದ ಈಗಾಗಲೇ ಸ್ಯಾನಿಟರಿ ಪ್ಯಾಡ್, ಬಂಗಾರದ ಹನಿಗಳು, ಮುಂದೇನಾಯ್ತು?, ಚಿಂಟು ಪಿಂಟು ಮತ್ತು ಮಿಂಚುವಿನ ಸಂಚಲನ ಮತ್ತು ನನ್ನವಳು ನಕ್ಕಾಗ ಎಂಬ ಕೃತಿಗಳು ಬಿಡುಗಡೆಯಾಗಿ ಓದುಗರ ಮನ ಸೂರೆಗೊಂಡಿವೆ. ಕಂಚುಗಾರನಹಳ್ಳಿ ಸತೀಶ್ ಅವರು ನಮ್ಮ ಜಿಲ್ಲೆಯ ನಮ್ಮ ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಪುಟ್ಟ ಗ್ರಾಮವಾದ ಕಂಚುಗಾರನಹಳ್ಳಿಯವರು. ಶ್ರೀಯುತರು ಪ್ರಸ್ತುತ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಬೆನಕನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ಸುರೇಶ ಎಲ್.ರಾಜಮಾನೆ (verified owner) –
ಮಲೆನಾಡಿನ ಅದ್ಭುತವಾದ ಪರಿಸರದ ಜೊತೆ ವನ್ಯಪ್ರಾಣಿಗಳ ಒಡನಾಟ ಮತ್ತು ಭವ್ಯವಾದ ಬಾಲ್ಯವನ್ನು ಹಾಗೂ ಬೃಹತ್ತಾದ ಕಾರ್ಯವೊಂದು ಮಕ್ಕಳ ಮೂಲಕ ಸಾಕಾರಗೊಂಡಿದ್ದು. ಕಾದಂಬರಿಯ ಜೀವಾಳವಾಗಿದೆ. ಸಿಂಪಿ ಅನ್ನೊ ಸಣ್ಣ ಗುಬ್ಬಚ್ಚಿಯ ಪಾತ್ರವೂ ಕೂಡಾ ಮರೆಯದಂತೆ ಕಣ್ಮುಂದೆ ನಿಲ್ಲುತ್ತದೆ. ಸರ್ವರಿಗೂ ತೊಂದರೆ ಕೊಡುವ ಸಲಗ ಸರ್ವರಿಗೂ ಸಹಾಯ ಮಾಡುವ ಬೈರನಾಗುವ ಪರಿ ತುಂಬಾ ಸೊಗಸಾಗಿದೆ. ಮಕ್ಕಳ ಮನಸ್ಸನ್ನು ಎಲ್ಲಿಯೂ ಅಪಘಾತಕ್ಕೀಡುಮಾಡದಂತೆ ಓದಿಸಿಕೊಂಡು ಹೋಗುವ ಕಾದಂಬರಿ ಇದಾಗಿದೆ.