ಚೆಲುವಿ ಚಂದ್ರಿ
₹120.00
ಕಥಾ ಸಂಕಲನ
Author : ಡಾ. ಪ್ರಕಾಶ ಗ. ಖಾಡೆ
Publishers Name : ಯಾಜಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಡಾ.ಪ್ರಕಾಶ ಗ. ಖಾಡೆಯವರು ಕಥೆಗಳನ್ನು ಕಟ್ಟಿ ಕೊಡುವ ಶೈಲಿ, ಅವರ ಚಿತ್ರಕ ಭಾಷೆ ನಿಜಕ್ಕೂ ಮುದ ನೀಡುವಂಥದು, ಉತ್ತರ ಕರ್ನಾಟಕದ ಭಾಷೆಯನ್ನು ದುಡಿಸಿಕೊಂಡ ರೀತಿಯೂ ಇವರ ಕಥೆಗಳಿಗೆ ಹೆಚ್ಚಿನ ಮೆರಗು ನೀಡಿದೆ. ಇಲ್ಲಿನ ಎಲ್ಲ ಕಥೆಗಳ ಪರಿಸರ ಹಳ್ಳಿಯ ಪರಿಸರವೇ. ಅಲ್ಲಿನ ಮೌಲಿಕ ಸುಂದರ ಬದುಕು, ಅದೂ ಆಧುನಿಕತೆಯಿಂದ ಆಗಾಗ ತಲ್ಲಣಗೊಳ್ಳುವ ಆತಂಕ, ಅಲ್ಲೊಂದು ಇಲ್ಲೊಂದು ಜೀವ ಕೊಲ್ಲುವ ಘಟನೆಗಳ ಜೊತೆಗೆ ಸೂಕ್ಷ್ಮವಾಗಿ ಹಳ್ಳಿ ಪರಿಸರದ ವಿವರಗಳನ್ನು ಕಟ್ಟಿಕೊಡುತ್ತಾರೆ. ಬಹುತೇಕ ನಮ್ಮ ತಲೆಮಾರಿನ ಎಲ್ಲ ಕತೆಗಾರರು ತಮ್ಮ ಮೂಲದ್ರವ್ಯವಾಗಿರುವ ಇಂತಹ ಹಳ್ಳಿಯ ಪರಿಸರವನ್ನೇ ನೆಚ್ಚಿರುವದು, ಅದಕ್ಕೆ ಡಾ.ಖಾಡೆಯವರು ಹೊರತಾಗದಿರುವದರ ಸಂಕೇತವಾಗಿ ಈ ಸಂಕಲನ ನಿಲ್ಲುತ್ತದೆ.
-ಡಾ.ವೈ.ಎಂ.ಯಾಕೊಳ್ಳಿ
ಡಾ. ಪ್ರಕಾಶ ಗ. ಖಾಡೆ ಅವರಿಗೆ ಕಥೆ ಕಟ್ಟುವ ಕಲೆ ದಕ್ಕಿದೆ. ಬಾಗಲಕೋಟೆ ನೆಲದ ಬನಿವುಳ್ಳ ಭಾಷೆಯ ಸೊಖಗನ್ನು ತಮ್ಮ ಕಥೆಗಳಲ್ಲಿ ಹಿಡಿದಿಡುವಲ್ಲಿ ಕಥೆಗಾರ ಗೆದ್ದಿದ್ದಾರೆ. ಇಲ್ಲಿನ ಬಹುತೇಕ ಕಥೆಗಳು ಸಾಮಾಜಿಕ ಅಂತಃಕರಣದ ಬದುಕಿಗೆ ಮಿಡಿಯುವ, ಮನುಷ್ಯ ಸ್ವಭಾವದ ಎಲ್ಲೆಗಳನ್ನು ಸ್ಪರ್ಶಿಸುವ ಗುಣ ಹೊಂದಿವೆ. ಕಥೆಗಳ ಹಲವು, ಭಾಷೆಯ ಸೊಗಡು, ಸಶಕ್ತ ನಿರೂಪಣಾ ಶೈಲಿಯಿಂದ ‘ಚೆಲುವಿ ಚಂದ್ರಿ’ ಸಂಕಲನದ ಕಥೆಗಳು ಓದುಗರಿಗೆ ತುಂಬಾ ಆಪ್ತವಾಗುತ್ತವೆ.
-ತಿರುಪತಿ ಭಂಗಿ




Reviews
There are no reviews yet.