ಬೇಂದ್ರೆ ಕಾವ್ಯದ ದೇಸಿಯತೆ
₹80.00
Author : ಡಾ. ಪ್ರಕಾಶ ಗ. ಖಾಡೆ
Publishers Name : ಯಾಜಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಡಾ. ಪ್ರಕಾಶ ಗ. ಖಾಡೆ ಅವರ ‘ಬೇಂದ್ರೆ ಕಾವ್ಯದ ದೇಸಿಯತೆ’ ಕನ್ನಡ ವಿಮರ್ಶಾಲೋಕದ ಬಹುಮುಖ್ಯವಾದ ಕೃತಿ. ಉನ್ಮತ್ತತೆಯನ್ನು, ಉತ್ಕಟತೆಯನ್ನು ತಂದುಕೊಟ್ಟವರಲ್ಲಿ ಬೇಂದ್ರೆ ಅಗ್ರಗಣ್ಯರಾಗಿದ್ದಾರೆ. ಜೀವನದ ಸುಖ-ದು:ಖ, ಸೋಲು-ಗೆಲುವು, ಉತ್ಸಾಹ-ನಿರುತ್ಸಾಹಗಳನ್ನು ಅವರಂತೆ ಅಭಿವ್ಯಕ್ತಿಸಿದವರು ವಿರಳ, ತಮ್ಮ ಕಾವ್ಯಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಯನ್ನು ಬೇಂದ್ರೆಯವರು ಅನೇಕ ಮೂಲಗಳಿಂದ ಪಡೆದರು. ಅನೇಕ ಭಾಷೆಗಳನ್ನು ಬಿಟ್ಟೂಬಿಡದೆ ಓದಿದರು. ಅನೇಕ ದೇಶಗಳ ಕಾವ್ಯಗಳನ್ನು ಅರಗಿಸಿಕೊಂಡರು,ಅಷ್ಟೆಲ್ಲ ಹೊರಗಿನ ಪ್ರಭಾವವಿದ್ದರೂ ಬೇಂದ್ರೆಯವರು ಕನಕ, ಕುಮಾರವ್ಯಾಸ, ಶರೀಫ, ಸರ್ವಜ್ಞ ಮುಂತಾದ ಕವಿಗಳಿದ ಪ್ರೇರಿತವಾದ ದೇಸಿಯತೆಯನ್ನು ಮುರಿದು ಕಟ್ಟಿದರು. ಕನ್ನಡ ಜಾನಪದದ ಸೊಗಡು- ಸ್ವಾರಸ್ಯಗಳನ್ನು ಬೇಂದ್ರೆಯವರು ವಿಪುಲವಾಗಿ ಬಳಸಿಕೊಂಡರು. ದೇಸಿಯತೆ ಹೇಗೆ ಬೇಂದ್ರೆ ಕಾವ್ಯದ ಒಂದು ಮುಖ್ಯ ಗುಣವಾಗಿದೆ ಎಂಬುದನ್ನು ಡಾ.ಪ್ರಕಾಶ ಖಾಡೆ ಅವರ ಈ ಕೃತಿ ಅರ್ಥಪೂಣವಾಗಿ ಚರ್ಚಿಸುತ್ತದೆ. ಬೇಂದ್ರೆಯವರು ತರುಣರಾಗಿದ್ದಾಗ ಹೆಗೆ ಅವರು ಮರಾಠಿ ಸೇರಿದಂತೆ ಆನೇಕ ಭಾಷೆಗಳ ಕಾವ್ಯದಿಂದ ಪ್ರೇರಣೆಗೊಂಡರು ಎಂಬುದನ್ನು ತಿಳಿಸುವದಲ್ಲದೆ ಅವರ ಕಾವ್ಯದೊಳಗಿನ ಜನಪದದ ಲಯ-ವಿಸ್ತಾರಗಳನ್ನು ಮುನ್ನೆಲೆಗೆ ತರುತ್ತಾರೆ. ತಮ್ಮ ಅನೇಕ ಕ್ರಿಯಾಶೀಲ ಚಟುವಟಿಕೆ ಮತ್ತು ಪುಸ್ತಕ ಪ್ರಕಟನೆಗಳಿಂದ ಬಾಗಲಕೋಟೆ ಸೀಮೆಯ ಸೀಮೆಗಳನ್ನು ವಿಶ್ವವ್ಯಾಪಿ ಹಿಗ್ಗಿಸುವುದರಲ್ಲಿ ನಿರತರಾಗಿರುವ ಡಾ.ಪ್ರಕಾಶ ಭಾಷೆ ಅವರನ್ನು ಅಭಿನಂದಿಸುತ್ತೇನೆ.




Reviews
There are no reviews yet.