SKU: 14257

ಅರಿವಿನ ಪಯಣ

120.00

Author : ಡಾ. ಸಂಗಮೇಶ ಎಸ್.‌ಗಣಿ

Publishers Name : ಅಚಲ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

“ಲೋಕವನ್ನು ಗ್ರಹಿಸುವ ಮತ್ತು ಆ ಮೂಲಕ ಅರಿವನ್ನು ಹೆಚ್ಚಿಸಿಕೊಳ್ಳಲು ಇರುವ ದಾರಿಯೂ ಕೂಡ ಓದು, ಇದು ನನ್ನನ್ನು ನಾನು ಕಂಡುಕೊಳ್ಳಲು ಇರುವ ಮಾರ್ಗ* ಎಂದಿದ್ದಾರೆ ಈ ಕೃತಿಯ ಲೇಖಕರು, ಇಷ್ಟು ಸಾಕು ‘ಅರಿವಿನ ಪಯಣ’ ಕೃತಿ ಪ್ರವೇಶಿಸಲು.

ಕಾವ್ಯವನ್ನು ಅಧ್ಯಯನಿಸಿ ಸಂಶೋಧಿಸಿ ಬರೆದ ಡಿ.ಆರ್. ನಾಗರಾಜ್ ಅವರ ಕೃತಿ ‘ಶಕ್ತಿ ಶಾರದೆಯ ಮೇಳ’ ದಿಂದ ಮೊದಲುಮಾಡಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರು ಸಾಮಾಜಿಕ ಮತ್ತು ನ್ಯಾಯಪರ ಕಾಳಜಿ ಮತ್ತು ಕಳಕಳಿಯನ್ನು ಇರಿಸಿಕೊಂಡು ಆಮೂಲಾಗ್ರವಾಗಿ ಬರೆದ ‘ಅರಿವು ಬೆಳಕು’ ಮತ್ತು ‘ಸಂವಿಧಾನ ಓದು’, ಕೃತಿಗಳಲ್ಲದೆ; ಕೊನೆಸಾಗರ, ಎಂ.ಎಂ. ಶಿವಪ್ರಕಾಶ್, ಡಾ. ಸುಭಾಷ್ ರಾಜಮಾನೆ, ದಾನೇಶ್ವರಿ ಸಾರಂಗಮಠ, ಸಿದ್ದಲಿಂಗಪ್ಪ ಬೀಳಗಿ, ಕೆ.ಬಿ. ವೀರಲಿಂಗನಗೌಡ್ರು, ಮಹಾದೇವ ಬಸರಕೋಡ, ಸದಾಶಿವ ದೊಡಮನಿ, ಶ್ರೀಹರಿ ಧೂಪದ ಈ ಎಲ್ಲರ ಕೃತಿಗಳನ್ನು ತಮ್ಮ ಓದಿನ ಹರವಿನಲ್ಲಿ ಹಿಡಿದಿಟ್ಟು ಅಲ್ಲಿರುವ ಅಂಶಗಳನ್ನು, ಹೂರಣವನ್ನು ರುಚಿಕಟ್ಟಾಗಿ, ಜ್ಞಾನಕ್ಕೆ ಒರೆಹಚ್ಚುವ ರೀತಿಯಲ್ಲಿ ತುಂಬಾ ಪ್ರಬುದ್ಧವಾಗಿ ದಾಖಲಿಸಿದ ಬರೆಹಗಳ ಗಂಟು ಈ ಹೊತ್ತಿಗೆ ಡಾ.ವಿ.ಎಸ್. ಕಟಗಿಹಳ್ಳಿಮಠ, ಡಾ. ಕೆ. ರವೀಂದ್ರನಾಥ್, ಎಸ್ಕೆ.

ಎಷ್ಟೋ ಕೃತಿಗಳನ್ನು ಓದಿರದ ಓದುಗನಿಗೆ. ಸಾಹಿತ್ಯಾಸಕ್ತರಿಗೆ ‘ಅರಿವಿನ ಪಯಣ’ ಕೃತಿ ಆಯಾಯ ಲೇಖಕರನ್ನು ಪರಿಚಯಿಸುವುದಲ್ಲದೇ ಮೂಲ ಕೃತಿಗಳನ್ನು ಹುಡುಕಿ ಓದುವಂತೆ ಇಲ್ಲಿನ ಲೇಖನಗಳು ಪ್ರೇರೇಪಿಸುತ್ತವೆ. ಅಧ್ಯಯನ, ಬರೆಹ, ವಿಮರ್ಶೆ ಮಾಡಿದ ಕಾರಣಕ್ಕಾಗಿ ಪ್ರಕೃತ ಕೃತಿಯ ಲೇಖಕ ಡಾ. ಸಂಗಮೇಶ ಎಸ್. ಗಣಿ ಅವರನ್ನು ಹಾರ್ದಿಕವಾಗಿ ಅಭಿನಂದಿಸುವೆ. ಸಾಹಿತ್ಯ ಲೋಕಕ್ಕೆ ಹೊಸ ವಿಮರ್ಶಕನ ಪರಿಚಯ ಈ ಕೃತಿಯ ಮೂಲಕ ಆದಂತಾಗಿದೆ.

ಅಕ್ಟರ್ ಸಿ. ಕಾಲಿಮಿರ್ಚಿ

ಸಾಹಿತಿಗಳು, ಕೊಪ್ಪಳ

Rating This Book

Reviews

There are no reviews yet.

Be the first to review “ಅರಿವಿನ ಪಯಣ”

Your email address will not be published. Required fields are marked *

Top Books