You are currently viewing ಬಸವ ಗುರು

ಬಸವ ಗುರು

ಅಣ್ಣ ಎಂದರೆ ಬಸವಣ್ಣ
ವಚನ ಸಾರಥಿ ಬಸವಣ್ಣ
ವಿಭೂತಿಗೆ ಅರ್ಥ ಕೊಟ್ಟವ
ಜನಿವಾರ ತೊರೆದು
ಲಿಂಗವ ಧರಿಸಿದ ಬಸವಣ್ಣ

12ನೇ ಶತಮಾನದ ಕಳಶ
ನಮ್ಮ ಅಣ್ಣ ಬಸವಣ್ಣ
ಜಂಗಮ ಎಂದರೆ ಶಿವ ಎಂದು ಸಾರಿದ ಬಸವಣ್ಣ
ಶರಣರ ಜಂಗಮರ ಮಾರ್ಗದರ್ಶಕ ಬಸವಣ್ಣ

ಶರಣರಿಗೆ ಅಂದೆ ವೇದಿಕೆ ಕಲ್ಪಿಸಿ ಕೊಟ್ಟ
ಬಸವಣ್ಣ ಗುರುವಾದರೂ ಶರಣರಿಗೆ
ಸಮಾಜದಲ್ಲಾಗುವ ಅನ್ಯಾಯ, ಅಕ್ರಮ,
ಜಾತಿನಿಂದನೆಯನ್ನು ವಚನ ಸಾರುವ ಮೂಲಕ

ತಿದ್ದುವ ಮಾರ್ಗದರ್ಶಕರಾದರು ಬಸವಣ್ಣ
ಶರಣರ ಪಾಲಿಗೆ ನಂದಾದೀಪವಾದ ಅಣ್ಣ ಬಸವಣ್ಣ
ಕೂಡಲಸಂಗಮದೇವರ ಸಾನಿಧ್ಯದಲ್ಲಿ ಐಕ್ಯರಾದ ಬಸವಣ್ಣ

ನಮ್ಮ ವಿಶ್ವಗುರು ಬಸವಣ್ಣ

ಈರಮ್ಮ ಎಸ್ ಶಂಕಿನಮಠ
ಉಪನ್ಯಾಸಕರು ಕನ್ನಡ
ಬಸವೇಶ್ವರ ವಿಜ್ಞಾನ ಪದವಿಪೂರ್ವ
ಮಹಾವಿದ್ಯಾಲಯ ಬಾಗಲಕೋಟ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply