ಪಾಲ್ಗುಣ ಮಾಸವ ಸಂಭ್ರಮದಿಂದ ಸ್ವಾಗತಿಸುವುದು
ಹೋಳಿ ಹುಣ್ಣಿಮೆಯಂದು ಆಚರಿಸುವ ಹಬ್ಬವಿದು
ಕಾಮನ ಹಬ್ಬವು ಎಲ್ಲರಿಗೂ ಹರುಷವನ್ನು ತರುವುದು
ರಂಗು ರಂಗಿನ ಓಕುಳಿ ಹಾಕುತಲಿ ನಲಿದಾಡುವುದು
ಕೆಂಪು ಹಳದಿ ಕೇಸರಿ ನೀಲಿ ಹಸಿರು ಬಣ್ಣ ಸುಂದರವು
ಸಂಭ್ರಮ ಸಡಗರ ನೆಮ್ಮದಿ ಪ್ರೀತಿಯನ್ನು ತರುವವು
ಸ್ನೇಹ ಬಂಧ ಬೆಸೆಯುವ ಹೋಳಿ ಹಬ್ಬ ಪವಿತ್ರವು
ವಯಸ್ಸಿನ ಭೇದಭಾವವಿಲ್ಲದೆ ಬಣ್ಣದ ಎರಚಾಟವು
ಬಣ್ಣಗಳು ಬದಲಾದರೂ ಬಂಧವ ಬಿಗಿಯುವುದು
ಶಾಂತಿಯ ಸಂದೇಶವ ಸಾರುವ ಹೋಳಿ ಹಬ್ಬವಿದು
ಬಣ್ಣಗಳಂತೆ ನಮ್ಮ ಜೀವನದಿ ಖುಷಿಯ ತರುವುದು
ಪಿಚಕಾರಿಯಲ್ಲಿ ಬಣ್ಣದ ನೀರತುಂಬಿ ಚಿಮ್ಮಿಸುವುದು
ಗೆಲುವಿನ ಸಂಭ್ರಮಕ್ಕೆ ಬಣ್ಣಗಳ ಓಕುಳಿಯಾಟವು
ಕಹಿ ನೆನಪುಗಳ ಮರೆಯುತ ಸಂತೋಷ ಪಡುವೆವು
ಪೂರ್ಣಚಂದ್ರನ ತಂಪು ತಂಗಾಳಿಯ ಆಸ್ವಾದಿಸುವೆವು
ಬದುಕಲ್ಲಿ ಬಣ್ಣದೋಕುಳಿಯ ಕಂಡು ಮನಕಾನಂದವು
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕಥೆಗಳು (Stories)
Haseena Mattu Itara Kathegalu
- Original price was: ₹750.00.₹725.00Current price is: ₹725.00.