SKU: 9193

ಬದುಕಿನೊಳಗಿನ ಭಾವಗಳು

Original price was: ₹200.00.Current price is: ₹190.00.

Author : ಡಾ. ನವೀನಕುಮಾರ್ ತಿಪ್ಪಾ ಮತ್ತು ಹುಸೇನಸಾಬ ವಣಗೇರಿ

PUBLISHERS NAME: ಡಾ. ನವೀನಕುಮಾರ್ ತಿಪ್ಪಾ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕನ್ನಡ ಸಾಹಿತ್ಯ ಶರದಿಗೆ ಸೇರುತ್ತಿರುವ ‘ಬದುಕಿನೊಳಗಿನ ಭಾವಗಳು’ ಎಂಬ ಸಂಪಾದಿತ ಕವನ ಸಂಕಲನವು ನಾಡಿನ ಮೂಲೆ ಮೂಲೆಗಳಿಂದ ಯುವ ಬರಹಗಾರರ, ಸಾಹಿತಿಗಳ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಬದುಕಿನ ಕವಿತೆಗಳನ್ನು ಹೊತ್ತು ತಂದು ನಿಂತಿದೆ. ಕವನಗಳು ಬದುಕಿನ ದುಗುಡ ದುಮ್ಮಾನಗಳನ್ನು ನಿವಾರಿಸುವುದರ ಜೊತೆಗೆ ಜೀವನದಲ್ಲಿ ನೊಂದು ಬೆಂದವರಿಗೆ ಸಾಂತ್ವಾನ ನೀಡಿ ಅವರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡುತ್ತವೆ. ಆ ದೃಷ್ಟಿಕೋನದಿಂದ ಹೆಚ್ಚು ಬರಹಗಾರರು ಕವಿತೆ ಬರೆಯುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯುವ ಬರಹಗಾರರ ಬದುಕಿನಲ್ಲಿನ ಭಾವನೆಗಳಿಗೆ ಅಕ್ಷರರೂಪ ಕೊಟ್ಟು ತಮ್ಮ ಜೀವನದಲ್ಲಿನ ತುಡಿತ ಮತ್ತು ಮಿಡಿತಗಳನ್ನು ಕವಿತೆಗಳಲ್ಲಿ ಕಟ್ಟಿಕೊಟ್ಟಿರುವುದರಿಂದ ಈ ಹೊತ್ತಿಗೆಯು ಬದುಕಿನೊಳಗಿನ ಭಾವಗಳು ಎಂಬ ಶೀರ್ಷಿಕೆಯನ್ನು ಪಡೆದುಕೊಂಡು ಕನ್ನಡ ನಾಡಿನ ಸಮಸ್ತ ಓದುಗರ ಎದೆಯಲ್ಲಿ ಅದರ ಘಮಲನ್ನು ಹರಡಲು ಪಯಣಿಸುತ್ತಿದೆ.

ಈ ಕೃತಿಯಲ್ಲಿನ ಪ್ರತಿಯೊಂದು ಕವಿತೆಗಳು ನೈಜತೆಯಿಂದ ಕೂಡಿಟ್ಟು, ಓದುಗರನ್ನು ಚಿಂತನೆಗೆ ಹಚ್ಚಿಸುತ್ತವೆ. ಜೀವನದಲ್ಲಿನ ಪ್ರತಿಯೊಂದು ಕ್ಷಣವು ಮೌಲ್ಯಯುತವಾಗಿರುವುದರಿಂದ ಬದುಕಿನಲ್ಲಿನ ಭಾವನೆಗಳನ್ನು ಅಕ್ಷರರೂಪದಲ್ಲಿ ಪೋಣಿಸಿ, ಅದಕ್ಕೊಂದು ಸುಂದರವಾದ ಮೆರಗನ್ನು ಕೊಟ್ಟು ಈ ಕೃತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಸೃಜನಾತ್ಮಕ ಕಾರ್ಯವು ಕನ್ನಡ ನಾಡು-ನುಡಿಯ ಆಶೋತ್ತರಕ್ಕೆ ಪೂರಕವಾಗಿ ಪರಿಣಮಿಸಲಿದೆ ಎನ್ನುವ ಸಕಾರಾತ್ಮಕ ಆಶಯ ದೊಂದಿಗೆ ಮೌಲ್ಯಯುತವಾದ ಈ ಕೃತಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ.

Rating This Book

Reviews

There are no reviews yet.

Be the first to review “ಬದುಕಿನೊಳಗಿನ ಭಾವಗಳು”

Your email address will not be published. Required fields are marked *

Top Books