You are currently viewing ಕ್ರಾಂತಿಕಾರಿ ಸುಲ್ತಾನರು

ಕ್ರಾಂತಿಕಾರಿ ಸುಲ್ತಾನರು

ಮೈಸೂರು ಸೇನಾಧಿಕಾರಿ ಹೈದರಾಲಿಯ ಸುಪುತ್ರರಿವರು
ಅರೇಬಿಕ್ ಉರ್ದು, ಕನ್ನಡ ಪರ್ಷಿಯನ್ ಭಾಷಾ ಪ್ರವೀಣರು
ಕುದುರೆ ಸವಾರಿ ಮತ್ತು ಕತ್ತಿವರಸೆಯಲ್ಲಿ ಪರಿಣಿತರು
ಧೈರ್ಯ ಶಾಲಿ, ಬುದ್ಧಿವಂತ, ರಾಜನೆಂದು ಪ್ರಖ್ಯಾತರು

ಮೈಸೂರನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಿದವರು
ಆಧುನಿಕ ರಾಕೆಟ್ ಯುದ್ಧ ತಂತ್ರಗಳನ್ನು ಪರಿಚಯಿಸಿದವರು.
ಮೈಸೂರು ರಾಜ್ಯವನ್ನು ವಿಸ್ತರಿಸಿ ಆಡಳಿತದಲ್ಲಿ ಸುಧಾರಣೆಗಳನ್ನು ತಂದವರು
ಮೈಸೂರು ಸಾಮ್ರಾಜ್ಯದ ಆಡಳಿತಗಾರರಾಗಿ ಸೇವೆಗೈದವರು

ಸಾವಿರ ವರ್ಷ ಕುರಿಯಂತೆ ಬದುಕಬಾರದೆಂದವರು
ಹುಲಿಯೊಂದಿಗೆ ಕಾದಾಡಿ ಮೈಸೂರು ಹುಲಿಯೆಂದು ಪ್ರಖ್ಯಾತರಾದವರು
ಒಂದು ದಿನ ಹುಲಿಯಂತೆ ಬದುಕುವುದು ಉತ್ತಮವೆಂದವರು
ನಮ್ಮ ದೇಶಕ್ಕಾಗಿ ಹೋರಾಡಿದ ಅನನ್ಯ ದೇಶಭಕ್ತರಿವರು

ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದವರು
ದಲಿತರ ಮೇಲಿನ ಬಹಿಷ್ಕಾರವನ್ನು ತೊಡೆದು ಹಾಕಿದವರು
ಹೊಸ ಭೂಕಂದಾಯ ನೀತಿಯನ್ನು ಜಾರಿಗೆ ತಂದವರು
ಅನನ್ಯ ದೇಶಪ್ರೇಮಿ ಕ್ರಾಂತಿಕಾರಿ ಟಿಪ್ಪುಸುಲ್ತಾನರವರು

ಪೂರ್ಣಿಮಾ ರಾಜೇಶ್