You are currently viewing ಎಸ್ ಎಸ್ ಎಲ್ ಸಿ ಪರೀಕ್ಷಾ ತೊಶಾ (परीक्षा तोशा) ಪುಸ್ತಕದ ಕಿರು ಪರಿಚಯ.

ಎಸ್ ಎಸ್ ಎಲ್ ಸಿ ಪರೀಕ್ಷಾ ತೊಶಾ (परीक्षा तोशा) ಪುಸ್ತಕದ ಕಿರು ಪರಿಚಯ.

ಸುಂದರವಾದ ಮನೆಯನ್ನು ಕಟ್ಟಿ ಅದನ್ನು ಅಲಂಕರಿಸಿದಾಗ ಗ್ರಹ ಪ್ರವೇಶ ಇಲ್ಲಿ
ಪರೀಕ್ಷಾ ತೊಶಾ (परीक्षा तोशा) ಎಂಬ ಅರ್ಥಗರ್ಭಿತ ಕೈಪಿಡಿಯನ್ನು ಓದಿ ಗ್ರಹಿಸಿ ಕೊಂಡಾಗ ಉಜ್ವಲ ಭವಿಷ್ಯ. ಎನ್ನುವಂತೆ ಮಕ್ಕಳಿಗೆ ಅತಿ ಉಪಯುಕ್ತವಾದ ಕಡಿಮೆ ಸಮಯದ ಓದಿನಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆಯನ್ನು ಉಂಟುಮಾಡುವ ಮತ್ತು ಓದಲು ಕ್ಷಣ ಕ್ಷಣ ಅಭಿರುಚಿ ನೀಡುವ ಪುಸ್ತಕವನ್ನು. ಶ್ರೀ ಎನ್ ಎಫ್ ಕಿತ್ತೂರ ಹಿಂದಿ ಶಿಕ್ಷಕರು ಬೆಳಗಾವಿ. ಅವರು ಹೊರ ತಂದಿರುವ ಬಹಳ ಅಮೂಲ್ಯವಾದ ಗ್ರಂಥವಿದು.

ಈ ಪುಸ್ತಕದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ

ಭಾಗ-ಒಂದು ಕಡಿಮೆ ಉತ್ತರದ ಪ್ರಶ್ನೆಗಳು, ಇದರಲ್ಲಿ ಒಂದು ಮತ್ತು ಎರಡು- ಮೂರು ವಾಕ್ಯಗಳ ಪ್ರಶ್ನೆಗಳು ಉತ್ತರದೊಂದಿಗೆ ಮತ್ತು ಅನುರೂಪತಾ ದ ಬಹಳ ಮಹತ್ವಪೂರ್ಣ ಪ್ರಶ್ನೆಗಳು ಉತ್ತರ ಸಹಿತ ಮತ್ತು ನಾಲ್ಕು ಉತ್ತರಗಳ ಬಹು ವಿಕಲ್ಪಿಯ ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಪ್ರಶ್ನೆಗಳನ್ನೂ ಕೂಡ ಸರಳ ರೂಪದಲ್ಲಿ ಉತ್ತರ ಸಹಿತ ವಿವರಿಸಲಾಗಿದೆ.
ಭಾಗ ಎರಡರಲ್ಲಿ ನಾಲ್ಕರಿಂದ ಆರು ವಾಕ್ಯಗಳ ಪ್ರಶ್ನೆಗಳ ಉತ್ತರಗಳು ಇದರಲ್ಲಿ ಹಿಂದಿ ಪದ್ಯ ಭಾಗ, ಹಿಂದಿ ಪದ್ಯದ ಭಾವಾರ್ಥ, ಅ ಪಠಿತ ಗದ್ಯದ ಪ್ಯಾರಾಗ್ರಾಫ್ ಮತ್ತು ಉತ್ತರಗಳು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಅನುವಾದ, ನಿಬಂಧ, ಪತ್ರ ಹೀಗೆ ಎರಡೂ ಭಾಗಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಕ್ಕಳಿಗೆ ಉತ್ತಮ ಅಂಕ ತೆಗೆದು ಕೊಂಡು ಪಾಸ್ ಆಗಲು ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆಯಲು ಸರಳ ರೂಪದಲ್ಲಿ ಬರೆದಿದ್ದಾರೆ. ಎಲ್ಲಕ್ಕಿಂತ ಮೇಲಾಗಿ ಸ್ಕೋರಿಂಗ್ ಪ್ಯಾಕೇಜ್ ಕೂಡ ರಾಮ-ಬಾಣದಂತಿದೆ ಇದರಿಂದ ಪರೀಕ್ಷೆಗೆ ಕುಳಿತ ಎಲ್ಲ ಮಕ್ಕಳು ಬಹಳಷ್ಟು ವಿಷಯಗಳನ್ನು ಹಂಚಿಕೊಳ್ಳಬಹುದು.



ಆಶಯ ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿ/ನಿಯರಿಗೆ ಮುಂಚಿತವಾಗಿ ಅಭಿನಂದನೆಗಳು. ಮಕ್ಕಳೇ ನಾನು ಹೇಳುವ ಕೆಲವು ಮಾತುಗಳನ್ನು ಶ್ರದ್ದೆ ಮತ್ತು ಅಭಿಮಾನದಿಂದ ಕೇಳಿದರೆ ಮುಂದೆ ನಿಮ್ಮ ಭವಿಷ್ಯ ಉಜ್ವಲ ವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮೊದಲನೆಯದಾಗಿ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಿ. ನಾವು ಗೆದ್ದೇ ಗೆಲ್ಲುತ್ತೇವೆಂದು ಇನ್ನು ಎರಡನೇದಾಗಿ ಹಾರ್ಡ್ ವರ್ಕ್ (ಸತತ ಪರಿಶ್ರಮ) (ಓದು-ಬರಹ) ದಿನಕ್ಕೆ ಇಂತಿಷ್ಟು ಗಂಟೆ (ತಮ್ಮ ಇಚ್ಛೆಯ ಪ್ರಕಾರ ) ತಪ್ಪದೇ ಅಧ್ಯಯನ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿಕೊಳ್ಳಬೇಕು. ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ ಎನ್ನುವಂತೆ ದಿನಾಲು ವೇಳೆ ಗನುಸಾರವಾಗಿ ಎಲ್ಲ ವಿಷಯದ ಒಂದೊಂದು ಅಥವಾ ಎರಡೆರಡು ಉತ್ತರ ಅಥವಾ ಸಮಸ್ಯೆ ಹೀಗೆ ತದೇಕಚಿತ್ತದಿಂದ ಅಧ್ಯಯನ ಮಾಡುತ್ತಾ ಹೋದರೆ ತಾವೇ ಊಹಿಸಿ.. ಆದ್ದರಿಂದ ತಜ್ಞರು ಹೇಳುತ್ತಾರೆ ಪರೀಕ್ಷೆಗೆ ನಾವು ಹೆದರಬಾರದು ಪರೀಕ್ಷೆ ನಮಗೆ ಹೆದರಬೇಕು ಎಂದು ಪರೀಕ್ಷೆ ಹೆದರುವುದರ ಅರ್ಥ ಏನೆಂದರೆ ಪರೀಕ್ಷೆಯೇ ಭಯಪಟ್ಟು ಯಾವ ಪ್ರಶ್ನೆ ವಿದ್ಯಾರ್ಥಿಗಳಿಗೆ ಕೊಡಬೇಕೆಂದು? ಮೂರನೆಯದಾಗಿ ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯವನ್ನು ಚೆನ್ನಾಗಿ ಸಮತೋಲನದಲ್ಲಿ ಇಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ಈ ಮೂರು ಅಂಶಗಳನ್ನು ಚೆನ್ನಾಗಿ ಚಾಚು ತಪ್ಪದೇ ಪಾಲಿಸಿದರೆ ನಿಮ್ಮ ಬಾಳು ಮುಂದೆ ನಂದನವನವಾಗುತ್ತದೆ. ನಾನಿಲ್ಲಿ ಹಿಂದಿ ಪರೀಕ್ಷಾ ತೋಶಾ ಎಂಬ ಕೈಪಿಡಿಯನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಿಂದಿ ವಿಷಯದ ಪರೀಕ್ಷೆಯ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು. ತಾವು ಈ ಕೈಪಿಡಿಯನ್ನು ಮನಸಿಟ್ಟು ಓದಿದರೆ ಹೆಚ್ಚೆಚ್ಚು ಅಂಕ ತೆಗೆದುಕೊಳ್ಳುವಲ್ಲಿ ಯಾವ ಸಂದೇಹವೂ ಇಲ್ಲ.ಬೆಸ್ಟ್ ಆಫ್ ಲಕ್. ಈ ಹಿಂದಿ ಕೈಪಿಡಿ ಪ್ರಕಟವಾಗುವಲ್ಲಿ ಸಾಕಷ್ಟು ನನ್ನ ಶಿಷ್ಯರು ಹಾಗೂ ನನ್ನ ಆತ್ಮೀಯ ಗೆಳೆಯರು ಸಹಕರಿಸಿದ್ದಾರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಹಸ್ರಧನ್ಯವಾದಗಳೊಂದಿಗೆ.
ಎನ್ ಎಫ್ ಕಿತ್ತೂರ
ಶಿಕ್ಷಕರು. ನೋಮಾನಿಯ ಶಾಲೆ ಆಜಮ್ ನಗರ ಬೆಳಗಾವಿ
ಮೋ.9341644495