ಶ್ರೀಮಂತ ಕುಟುಂಬದ ಕುವರರು
ಅಹಂ ಇಲ್ಲ ಅಹಂಕಾರ ಇಲ್ಲದವರು
ಬಾಲ್ಯ ಜೀವನ ಕಳೆದ ಸುಂದರರು
ಪುಣ್ಯ ಭೂಮಿಯ ತತ್ವ ಅರಿತವರು
ಆದರ್ಶ ಚಿಂತನೆ ನಡೆಸಿದ ಗುರುವಿನ ಆತ್ಮ
ಅಭಿವೃದ್ಧಿ ಏಕೀಕರ ಚಳುವಳಿಯ ಸ್ಫೂರ್ತಿ
ಧುಮುಕಿ ಬಡವರ ಮೇಲೆ ಪ್ರೀತಿ ವಿಶ್ವಾಸವು
ತೋರಿಸಿ ಮೈತುಂಬ ಬಟ್ಟೆ ತೊಡಲಿಲ್ಲ ಗಾಂಧೀಜಿ
ಮಹಾತ್ಮರ ಕೀರ್ತಿ ಜಗತ್ತಿಗೆ ಸಾರಿದರು ಇಲ್ಲಿ
ತಮ್ಮ ವಿದ್ಯಾಭ್ಯಾಸ ಸ್ವದೇಶ ವಿದೇಶದಲ್ಲಿ
ವ್ಯಾಸಂಗ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ
ದಿಗ್ವಿಜಯ ಸಾಧಿಸಿದ ಸಮರ್ಥರು ಮಹಾತ್ಮರು
ಅಹಿಂಸ ಚಳುವಳಿಗೆ ಸ್ಫೂರ್ತಿ ನೀಡಿದ್ದರು
ಬೇಡಲಿಲ್ಲ ಕಾಡಲಿಲ್ಲ ಛಲ ಬಿಡಲಿಲ್ಲ ನೋಡಿ
ಕೆಂಪು ಕೋತಿಗಳ ಎದುರು ಅಂಜಲಿಲ್ಲ ನೋಡಿ
ಕೈಯಲ್ಲಿ ಕೋಲು ಸೊಂಟದಲ್ಲಿ ಗಡಿಯಾರು
ಮೈ ಮುಚ್ಚಲು ಬಿಳಿ ಶೆಲ್ಯವು ಧರಿಸಿದ್ದರು
ಕಾಲಲ್ಲಿ ಹರಿದ ಚಪ್ಪಲಿ ತೊಟ್ಟಿದ್ದ ಗುರುತು
ದಂಡಿಯಲ್ಲಿ ಉಪ್ಪಿನ ಸತ್ಯಾಗ್ರಹ ನಡಿಸಿದರು
ದೇಶದ ಶಾಂತಿ ಸಮೃದ್ಧಿ ಸಂದೇಶ ಸೂಚಿಸಿದರು
ಎಲ್ಲರನ್ನು ಬಡಿದೆಬ್ಬಿಸಿ ಸ್ವಾತಂತ್ರಕ್ಕಾಗಿ ದುಡಿದು
ಸತತ ಪ್ರಯತ್ನದ ಮೂಲಕ ಗೆಲುವು ಖಂಡಿದು
ಇವರು ಬರಿಗಾಲಿನ ಪಕೀರನಾಗಿ ಮಹಾತ್ಮರಾದರು
ನಮ್ಮ ನಿಮ್ಮ ಮುದ್ದಿನ ತಾತ ಗಾಂಧೀಜಿಯವರು
ಮಹಾಂತೇಶ ಖೈನೂರ