ನೀ ಕಂಡ ಕನಸು ಇಂದಿಗೂ
ನನಸಾಗಲಿಲ್ಲ ನೋಡು ತಾತ
ರಾಮರಾಜ್ಯದಂತೆ ಬಿಂಬಿಸುವ
ಕಲೆಯ ಮರೆತರು ದೂಡುತ
ನಾಲ್ಕು ಕಾಲಿನ ಕುರ್ಚಿಯ
ಹಗೆತನ ಹಣೆಬರಹಕ್ಕೆ ಸವಾಲು
ಸೋತು ಸುಣ್ಣವಾಗುವ ಹಪಾಹಪಿ
ಸತ್ಯ ಅಹಿಂಸೆಯು ಮಣ್ಣುಪಾಲು
ಹಿರಿಯರು ಮರೆಯಾದರೆ
ಸಮಾಜದಲ್ಲಿ ತಿದ್ದಿಬುದ್ದಿಗೆ ಕಾಲವಿಲ್ಲ
ಶಿಕ್ಷಕರು ಮರೆಯಾದರೆ
ಪ್ರಗತಿಯ ಕಾಣರು ಮಕ್ಕಳೆಲ್ಲ
ಅದೆಷ್ಟು ಕಾಲಮಿಂಚಿ ಹೋಯಿತು
ಕನಸು ನನಸಾಗಲು ಇಲ್ಲಿ
ಜ್ಞಾನ ತಂತ್ರಜ್ಞಾನವೇ ಹರಿಯಿತು
ರಕ್ತಸಿಕ್ತ ದೇಹಗಳ ಮರೆಯಲ್ಲಿ
ಸ್ವತಂತ್ರವು ದೊರೆಕಿದ್ದು ಆಗ
ಅದು ಇತಿಹಾಸವ ನೆನೆಪಿಸಿದಾಗ
ಸ್ವಾತಂತ್ರ್ಯದ ಹಮ್ಮುಬಿಮ್ಮು ಈಗ
ಹೆಣ್ಣುಗಂಡುಗಳ ಸಮಾಂತರದ ರಾಗ
ಸವಿತಾ ಮುದ್ಗಲ್
ಬಳ್ಳಾರಿ