ಸ್ವಾತಂತ್ರ್ಯ ಹೋರಾಟಗಾರ್ತಿ ಈ ಮಾತೆ ಸಕ್ಕರೆ
ನಾಡಿನ ಉತ್ತೂರ ಗ್ರಾಮದವರು ಹಣಮಂತಗೌಡ
ರಂಗವ್ವರುದರದಿ ಉದಿಸಿದ ಮಾತೆ ಸೀತಾಬಾಯಿ
ವ್ಯಕ್ತಿಯಲ್ಲ ನೀವು ಹೋರಾಟದ ಶಕ್ತಿ ತಮ್ಮಣ್ಣಪ್ಪ
ಗಲಗಲಿ ಗುರುಗಳ ಪರಮ ಶಿಷ್ಯ ಹೃದಯವಂತಿಕೆಗೆ
ಹೆಸರುವಾಸಿ ಸರ್ವ ವಿಷಯ ಪಾರಂಗತೆ
ವಚನ, ಉಪನ್ಯಾಸ ಕರಗತ ಮಾಡಿಕೊಂಡ
ಸರಳ ಚಿತ್ತದಿಂದ ಅಭ್ಯಾಸಗೈದವರು ಹಣ ಆಸ್ತಿ
ಅಂತಸ್ತು ಅಪೇಕ್ಷಿಸದೆ ಜನರೇ ನನ್ನಾಸ್ತಿ ಎಂದ ವೀರಮಾತೆ
ಅವಿರತ ಪರಿಶ್ರಮದಿ ಜ್ಞಾನ ಪಡೆದವರು
ಸರಳ ಬದುಕಿನ ಗುಟ್ಟು ಅರಿತವರು
ಸ್ವಾತಂತ್ರ್ಯ ಹೋರಾಟದಲಿ ಪತಿ
ಬಸಪ್ಪರ ಅನುಸರಿಸಿ ನಡೆದವರು
ಹಮ್ಮು, ಬಿಮ್ಮು ಇಲ್ಲದೆ
ಎತ್ತರಕ್ಕೆ ಬೆಳೆದವರು
ಮಹಾತ್ಮ ಗಾಂಧಿ ಎಂದರೆ
ಜೀವ ಕೊಡುವವರು
ವಿಜಯಪುರಕೊಮ್ಮೆ ಗಾಂಧೀಜಿ ಬಂದಾಗ
ಪತಿಯ ಜೊತೆ ನಡೆದರು ಮಹಾತ್ಮನಿದ್ದಲ್ಲಿಗೆ ಕಂಡ
ಜನರೆಲ್ಲ ಸೀತೆ-ರಾಮನ ಜೋಡಿ ಅಹುದೆಂದು
ತಾಯಿಗೆ ತಲೆದೂಗಿ ನಮಿಸಿದರು
ಸ್ವಾತಂತ್ರ್ಯ ಹೋರಾಟದಿ ಮಡಿದ ಕುಟುಂಬಕ್ಕೆ
ಕೇಳಿದರು ಗಾಂಧೀಜಿ ಕಾಣಿಕೆ ಕೊಡುವಂತೆ
ಮನದಲ್ಲೇ ಮರುಗುತ ಪತಿಯ ಅನುಮತಿ ಪಡೆದು
ನೀಡಿದಳು ಮಹಾತಾಯಿ ತನ್ನ ಬಂಗಾರವನು
ಮೈಮೇಲೆ ಧರಿಸಿದ್ದ ಆಭರಣವನು
ಕೊಟ್ಟು ಮುಂದೆಂದು ಬಂಗಾರ ಬೇಡೆಂದ
ಮಾತೆ ತಾಳಿ ಧರಿಸಿದಳು ಬರೀ ವೈರಾಗ್ಯ
ತಾಳಿ ಕೊನೆವರೆಗೆ ಬಯಸದೆ ಚಿನ್ನದೊಡವೆ
ಇದೇ ಆದರ್ಶವನು ಮನೆಮಂದಿ ಎಲ್ಲರೂ
ಇಂದಿಗೂ ಪಾಲಿಸಿಕೊಂಡು ಬಂದಿರುವರು
ವೀರ ನಾರಿಯ ಪಥದಿ ಸಾಗುತಲಿ
ಮನಗೆದ್ದಿದೆ ನೋಡಿ ಶ್ರೀಮಂತ ಕುಟುಂಬ
ವೆಂಕಟೇಶ ಪಿ ಗುಡೆಪ್ಪನವರ
ಉತ್ತೂರ
ಮೋ:990245737