ಅಮ್ಮನ ಕೈಯಗಳ ಸ್ಪರ್ಶ ಹೃದಯಕೆ ಶಕ್ತಿ
ಅವಳ ಧೈರ್ಯದಲ್ಲಿ ಜೀವಕ್ಕೆ ದಿಕ್ಕು
ಬೇಸರದ ಹೊತ್ತಿನಲ್ಲಿ ನಿನ್ನ ನೆನೆದರೆ
ಮನದಲಿ ಮೂಡುವುದು ನಗು, ನೆಮ್ಮದಿ
ಉಸಿರಿಗಿಂತಲೂ ಹತ್ತಿರ ನಿನ್ನ ಸ್ಮರಣೆ
ಬದುಕಿನ ದಾರಿಯಲ್ಲಿ ನೀನೆ ಬೆಳಕು
ಕಾಲ ಬದಲಿದರೂ ನಿನ್ನ ಪ್ರೀತಿ ಶಾಶ್ವತ
ಅಮ್ಮ, ನೀನೆ ನನ್ನ ದೇವರ ರೂಪ
ಅಮ್ಮನ ಹೆಜ್ಜೆಯಲ್ಲಿ ಬಾಳ ನಡಿಗೆ
ಅವಳ ಕಣ್ಣಲ್ಲಿ ಕಾಣುತಿದೆ ಭವಿಷ್ಯದ ದಾರಿ
ಚಳಿ, ಬಿಸಿಲು, ಬಿರುಗಾಳಿಗೆ ಛಾಯೆಯಂತೆ
ನಿಂತವಳು ಸದಾ ನಾನೀಗ ಮುನ್ನಡೆಯೋವನೆ
ಬಸವ ವಿನಯ್(ವಿಪಿ)
ಯುವ ಕವಿ ಯುವ ಬರಹಗಾರ,
ಹರವೆ ಚಾಮರಾಜನಗರ