You are currently viewing ಶ್ರೀ ರಾಮ ಜಯರಾಮ

ಶ್ರೀ ರಾಮ ಜಯರಾಮ

ಮರ್ಯಾದ ಪುರುಷೋತ್ತಮ ರಾಮ
ಮನುಕುಲದ ಮಾದರಿ ಶ್ರೀರಾಮ
ಮುನಿ ವಶಿಷ್ಠರ ಪ್ರೀತಿ ಶಿಷ್ಯ ರಾಮ
ರಘುಕುಲದ ತಿಲಕ ಜಯ ರಾಮ

ಲಕ್ಷ್ಮಣನ ಅನುಜ ಆದ್ಯರಾಮ
ಲವಕುಶ ಪುತ್ರರಪಿತಾಮಹ ರಾಮ
ಅಂಜನಿ ಪುತ್ರನ ಪ್ರಭು ರಾಮ
ಸುಗ್ರೀವನ ಆತ್ಮ ಸ್ನೇಹಿತ ಶ್ರೀರಾಮ

ಜಾನಕಿ ವಲ್ಲಭ ರಘು ರಾಮ
ಜಟಾಯುಗೆ ಜೀವದಾತ ರಾಮ
ಜಟಾ ಜೂಟದಾರಿ ಸೀತಾರಾಮ
ವಾಲ್ಮೀಕಿ ಮನ ಪರಿವರ್ತಕ ರಾಮ

ಕೌಶಲ್ಯ ದಶರಥನ ಕಂದ ರಾಮ
ಪಿತೃವಾಕ್ಯ ಪರಿಪಾಲಕ ರಾಮ
ಏಕ ಪತ್ನಿ ವ್ರತ ಪುರಸ್ಕೃತ ರಾಮ
ವಿಶ್ವಾಮಿತ್ರರ ಪ್ರೀತಿಯ ರಾಮ

ಸೌಜನ್ಯದ ಶಿಖರ ನೀನೇ ರಾಮ
ವನ್ಯಜೀವಿಗಳ ರಕ್ಷಕ ಶ್ರೀರಾಮ
ಅನುಜ ಭರತನ ಪಾದುಕೆ ರಾಮ
ಶಿಲೆ ಅಹಲ್ಯಗೆ ಶಾಪ ಮುಕ್ತ ರಾಮ

ಕಾದ ಶಬರಿಗೆ ಭಾವ ಕೊಟ್ಟ ರಾಮ
ದಶಕಂಠನ ಶಿರಸಂಹಾರಕ ರಾಮ
ವಿಭೀಷಣನಿಗೆ ಪಟ್ಟ ಕಟ್ಟಿದ ರಾಮ
ಹಗಲಿರುಳು ಸ್ಮರಿಸೋಣ ರಾಮ ನಾಮ

ಶ್ರೀರಾಮ ಜಯ ರಾಮ ಜಯ ಜಯ ರಾಮ.

ಶಿವಲೀಲಾ ಧನ್ನಾ .ಜವಳಿ (ಡಿ)
ಜಿಲ್ಲಾ :-ಕಲ್ಬುರ್ಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ