ಅವಳಿಗೆ ನಗುವು ಮರಳಬೇಕಿತ್ತು. ಆದರೆ ನಗುವಿಗೆ ದಾರಿ ಹುಡುಕುವ ಮುನ್ನ, ಆರೋಗ್ಯದ ಸಮಸ್ಯೆ, ಜೀವನದ ಲೆಕ್ಕಾಚಾರ, ಆರ್ಥಿಕ ತೊಂದರೆಗಳು ಹಾದಿ ಮುಚ್ಚಿಕೊಂಡವು.
೧೯ ವರ್ಷ… ಮನಸು ಮಾತ್ರ ೧೦!
ಕನಸು ಕಟ್ಟಲು ಇಷ್ಟಪಡುವ ಚಿಕ್ಕ ಹುಡುಗಿ. ಪ್ರತಿ ಕ್ಷಣ ಭವಿಷ್ಯದ ರೇಖೆ ಬಿಡಿಸುವ ಮುನ್ನವೇ, ಅದೇ ಭೂಸಾಟ! ಏನೇನೋ ಸುಂದರ ಗುರಿಗಳನ್ನು ಕಟ್ಟಿದರೆನು, ಹಠಾತ್ ಒಂದು ಆರೋಗ್ಯ ಸಮಸ್ಯೆ ಅವಳ ದಾರಿ ತಡೆಯಿತು.
ಆಗಲೇ ವಿದ್ಯೆ, ಪರೀಕ್ಷೆ, ಒತ್ತಡ, ಮನೆ, ಹಣ— ಎಲ್ಲವು ಸೇರಿ ಅವಳನ್ನು ಮುರಿದು ಹಾಕಲು ಹೊರಟಿದ್ದವು. ಒಬ್ಬಳೇ ಪ್ರಯಾಣ ಬೆಳೆಸಿದಳು, ಬೆಂಗಳೂರು – ಕೆಂಪೇಗೌಡ ಹಾಸ್ಪಿಟಲ್. “ಅಲ್ಲಿ ಎಲ್ಲವೂ ಸರಿಯಾಗಬಹುದು” ಎಂಬ ಭರವಸೆ.
ಆದರೆ… ಅಲ್ಲೇ ಅವಳ ಜೀವನದ ಲೆಕ್ಕ ತಪ್ಪಿತು!
“ಕೆಂಪೇಗೌಡ ಹಾಸ್ಪಿಟಲ್ – ಅವಳ ಪ್ರಥಮ ಸೋಲು!”
ಅವಳು ಬರವಣಿಗೆಯಲ್ಲಿ ತೊಡಗಿದ್ದವಳು.
ಅದರ ಹಿಂದೆ ಅವಳ ಬದುಕಿನ ಅಳಲು, ನೋವು, ಹೋರಾಟಗಳು ಮರೆಮಾಡಲಾಗಿದ್ದವು.
ಆದರೂ…
ಅವಳಿಗೆ ಬರಹಗಾರ ವೈದ್ಯರು ಪರಿಚಿತ, ಮನಸ್ಸು ಅವರ ಬಳಿ ಸಮಸ್ಯೆ ಹೇಳಿಕೊಳ್ಳಲು ಒಪ್ಪುತ್ತಿರಲಿಲ್ಲ!
ಹೃದಯದಲ್ಲಿ ಭಯ, ಮನದಲ್ಲಿ ಅಳಿವು, ಆದರೆ ನಾವು ಕೇಳದೆ ಸಿಗುವ ಉತ್ತರಗಳೇ ಜೀವನದ ಹೊಸ ಅಧ್ಯಾಯ ಆರಂಭಿಸುತ್ತವೆ.
ಆಗಲೇ, ಮೊದಲನೇ ವೈದ್ಯನ ಬಳಿ ಹೋದಳು.
ಔಷಧಿ, ಒಂದು ಹಾನಿ!
ಮೆಡಿಸಿನ್ ಪೇಪರ್ ಮೇಲೆ ಕಣ್ಣೀರ ಹನಿ ಬಿದ್ದಿತು.
“ಈ ಔಷಧಿ ನನ್ನ ಕೈಗೆಟುಕದು!”
ಹಣದ ಲೆಕ್ಕ ತಪ್ಪಿತ್ತು. ಕೇವಲ ೨,೦೦೦ ರೂಪಾಯಿ ಕೈಯಲ್ಲಿ. ಅದೂ ಬೆವರಿನ ಹನಿಗಳಲ್ಲಿ ತೊಯ್ದ ಹಣ. ಇನ್ನೊಬ್ಬ ವೈದ್ಯನ ಬಳಿ ತೋರಿಸೋದು ಕಷ್ಟ. ಊರಿಗೆ ಹೋಗೋದು? ಆಗೋದಿಲ್ಲ!
“ಅನಿರೀಕ್ಷಿತ ತಿರುವು”
ಅವಳು ಅಲ್ಲೇ ಅದೃಷ್ಟದ ಹಾದಿ ತಲುಪಿದಳು— ಡಾಕ್ಟರ್ ವಿಪುಲ ಮೇಡಂ!
ಅವರ ಬಳಿ ಹೋಗುವ ಮುನ್ನ ಹೃದಯದಲ್ಲಿ ಸಣ್ಣ ಶಂಕೆಯ ಹೊಗೆ. “ಅವರು ಏನುಂದುಕೊಳ್ಳುವರು?”
ಆದರೆ… ಅವರು ಹಾಗೆ ನೋಡಿದ ಕ್ಷಣ— ನನ್ನ ಕಣ್ಣೀರಿಗೆ ಸ್ಪಂದಿಸಿದರು.
“ಸಮಸ್ಯೆ ನೀನೊಬ್ಬಳದು ಅಲ್ಲ! ಹಲವಾರು ಜನ ನಿಮ್ಮ ಕಾಲೇಜಿನಲ್ಲಿ ಇದೇ ಸಮಸ್ಯೆಗೆ ಸಿಲುಕಿದ್ದಾರೆ!”
ಅವಳಿಗೆ ಮೊದಲ ಬಾರಿಗೆ ನಿರಾಳ ಉಸಿರೋಡಿದ ಅನುಭವ. “ಹೌದು, ನಾನು ಒಬ್ಬಳಲ್ಲ!”
“ನೀನು ಏನು ಓದುತ್ತಿದ್ದೀಯ?”
“ಟೆಕ್ನಿಕಲ್ ಕೋರ್ಸ್, ಮೇಡಂ…”
“ಹುಹ್, ಅದು ಒತ್ತಡ ಕಡಿಮೆ ಅಲ್ಲವೇ?”
“ಇಲ್ಲ, ತುಂಬಾ!”
ಮೇಡಂ ಕೇವಲ ನಗುತ್ತಾ. “ನಾನು ಕೂಡ ಓದಿದ್ರು, ನನಗೂ ಒತ್ತಡ ಇತ್ತು” ಎಂದಾಗ, ಅವಳಿಗೆ ಅರ್ಥವಾಯಿತು— ನಾನು ಏನೂ ತೊಂದರೆ ಅನುಭವಿಸುತ್ತಿಲ್ಲ, compared to this!”
ಆ ಕ್ಷಣ… ಅವಳಿಗೆ ಒಂದು ಭಯ ಕಾಡಿತು—
“ಅವರು ಊಟಕ್ಕೆ ಹೋದರೆ, ನಾನು ಮನೆಗೆ ತಲುಪೋಕೆ ರಾತ್ರಿ ಆಗುತ್ತಲ್ಲ!”
ಆದರೆ ಅವರು ಹೋದರೇ ಇಲ್ಲ!
ಅವರ ಕಣ್ಣಲ್ಲಿ ಕಾಳಜಿ! ಅವರ ನಡೆದು ನಿಂತ ಶಬ್ದದಲ್ಲೂ ವಿಶ್ವಾಸ!
ಮಾತುಗಳಿಗಿಂತ ಕಣ್ಣಿನ ಭಾವನೆಗಳೇ ಆ ದಿನ ಜ್ವಲಿಸಿದ್ದವು!
ಔಷಧಿ, ಸಿರಪ್ ಎಲ್ಲವನ್ನೂ ಅವರು ಮೌನವಾಗಿ ಅವಳ ಎದುರಿಟ್ಟರು. ಕೇವಲ ಔಷಧಿ ಅಲ್ಲ, ಆಪ್ತತೆ, ಕಾಳಜಿ, ನಗು!
ಆಗಲೇ ಆಕೆಯ ಮನಸ್ಸಿನಲ್ಲಿ ಒಂದು ತೀರ್ಮಾನ!
ಈಗಲೇ ಪಾದಗಳಿಗೆ ನಮಸ್ಕಾರ ಮಾಡಬೇಕೆ?
ಇಲ್ಲ…!
“ನಾನು ನನ್ನ ಜೀವನದ ಮೊದಲ ಗೆಲುವನ್ನು ಸಾಧಿಸಿದ್ದೇನೆ!”
ಆಗಿನಿಂದ… ಅವಳ ಬದುಕಿಗೆ ಹೊಸ ಬೆಳಕು!
“ನಗುವುದು ಮರಳಿ ಕಲಿತುಕೊಂಡಳು!”
ವೈದ್ಯರು ಔಷಧಿ ಮಾತ್ರ ಕೊಡಲ್ಲ, ನಗುವಿಗೂ ಮೌಲ್ಯ ನೀಡುತ್ತಾರೆ!
ಡಾಕ್ಟರ್ ವಿಪುಲ ಮೇಡಂ… ಅವಳ ನಗುವಿನ ಪುನರ್ಜನ್ಮ!”
ಸ್ಪೂರ್ತಿ ಎಸ್ ಆರ್
ಹೊಳೆನರಸೀಪುರ
ಹಾಸನ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ