You are currently viewing ನೋವುಗಳಿಗೆ ಮುಲಾಮುಗಳಾಗಲಿ ‘ಕಾವ್ಯ’

ನೋವುಗಳಿಗೆ ಮುಲಾಮುಗಳಾಗಲಿ ‘ಕಾವ್ಯ’

ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ ಗ್ರಾಮದ ಕವಿ, ಮೈಬೂಬಸಾಹೇಬ.ವೈ.ಜೆ. ಆಜ಼ಾದ ಕಾವ್ಯನಾಮೆಯಿಂದ ಗಜಲ್ ಬರೆದು, ‘ಆಜ಼ಾದ ಮಧಿರೆಯ ಸುತ್ತ’ ಎನ್ನುವ ಶೀರ್ಷಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆರ್ಥಿಕ ಸಹಾಯ ಪಡೆದು ಕೃತಿ ಮುದ್ರಿಸಿದ್ದು, ಭೂಮಾತಾ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

ಪಂಪ ಆದಿಯಾಗಿ ಸೃಜನ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಅರಿತಿರುವ, ಉಪನ್ಯಾಸಿಸುವ ಪ್ರಾಧ್ಯಾಪಕರಾದ ವೃತ್ತಿಯ ವೈ.ಜೆ.ಯವರು ಆಧುನಿಕ ಸಾಹಿತ್ಯದ ಆಕರ್ಷಣೆಯಾದ ಗಜಲ್ ಕಾವ್ಯಪ್ರಕಾರ ಆಯ್ದುಕೊಂಡು, ಕನ್ನಡ ಜಾಯಮಾನಕ್ಕೆ ಹೊಂದಿಸಿ ಕಸೂತಿ ಮಾಡಿದ್ದು,ಇದು ಸ್ವಸ್ಥ ಸಾಹಿತ್ಯದ ಕುರುಹು ಎಂದು ಹೇಳಬಹುದು.

ಗಜ಼ಲ್ ಎಂದರೆ: ಪ್ರೇಮ, ನೋವು, ಭಗ್ನಪ್ರೇಮ, ಪ್ರೇಮಿಯ ರೂಮಿ, ಸಾಖಿ, ಮದು, ಮಮತೆ, ಒಡಲ ಒರತೆಗಳಿಗೆ ಸೀಮಿತವಾದ ಗಾಡವಾದ ಹಾಡುಗಬ್ಬ ಕಾವ್ಯ ಎನಿಸಿಕೊಂಡಿತ್ತು. ದಿನಗಳೆದಂತೆ ಬಾಹುಗಳು ವಿಶಾಲಿಸಿಕೊಂಡಿತು.ಈ ಪ್ರಕಾರದಲ್ಲಿ ಕೃಷಿಮಾಡಿರುವ ಮೈಬೂಬಸಾಹೇಬ ಅವರ ಕೃತಿಯಲ್ಲಿ ಎದ್ದುಕಾಣುವ ಒರತೆಗಳ ಬಗ್ಗೆ ಮಾತನಾಡುವುದಾದರೆ ಸಾಮಾಜಿಕ ನೋವು, ಮನುಷ್ಯನ ಬೂಟಾಟಿಕೆ, ದೇಶದ ಅರಾಜಕತೆ, ಪುಂಡಾಟಿಕೆ,ಡಾಂಬಿಕ ದೇಶಭಕ್ತಿ, ಅವೈಜ್ಞಾನಿಕ ಆಚರಣೆಗಳು, ಮಹಿಳಾ ದೌರ್ಬಲ್ಯ, ಸಾಮಾಜೋ-ಆರ್ಥಿಕ ರಾಜಕೀಯ ಅಸಮಾನತೆ, ಅಸ್ಪೃಶ್ಯತೆಯ ಆಚರಣೆಗಳ ಮೇಲೆ ಬೆಳಕು ಚೆಲ್ಲುವ ಕಾವ್ಯಗಳಿವೆ ಎಂದು ಹೇಳಬಹುದು.

ಅವರ ಕಾವ್ಯದ ಒಳಹರಿವು ಬಹುತೇಕ ವಚನಗಲ್ಲಿ ಅಲ್ಲಮನ ಆತ್ಮಸಂವಾದ,ಅಕ್ಕಮಹಾದೇವಿಯ ಭವದ ವೈರಾಗ್ಯ, ಬಸವಾದಿ ಶರಣರ ಶರಣ ಸಂಸ್ಕೃತಿ ಒಟ್ಟಾಗಿ ಜೋಡಿಸಿ ಗಜ಼ಲ್ ಬರೆದಿದ್ದಾರೆ ಎನ್ನಬಹುದು.

ಸತ್ತವರ ಮನೆಯ ಮುಂದೆ ಅತ್ತಹೋಗಲು ಬಂದಿದ್ದೀರಿ
ಸತ್ತವರಿಗೆ ಅತ್ತವರೆದುರು ಸುಳ್ಳು ಹೊಗಳಲು ಬಂದಿದ್ದೀರಿ
ಎನ್ನುವ ಗಜ಼ಲ ಮನಸ್ಸು-ಮನುಷ್ಯನ ಬಹುದೊಡ್ಡ ಸತ್ಚಿಂತನೆಗೆ ಹೊರಹಾಕುತ್ತದೆ. ಸಮಾಜ ಮಾನವ ನಿರ್ಮಿತ ವ್ಯವಸ್ಥಿತ ಮನೋವ್ಯಾಕುಲತೆಯ ವಿಷಮ ಪರಿಸ್ಥಿತಿ ಬಹಳ ಅವಗಾನಿಸಿ ಬರೆದಿದ್ದಾರೆ.
‘ಕತ್ತಲಿಗೆ ಅವರ ಗಲೀಜುಗಳು ಯಾವತ್ತೂ ಗೊತ್ತಾಗಿವೆ ಧಣಿ
ಹಗಲಿನಲ್ಲಿ ನಿಮ್ಮ ಭಸ್ಮ ಹುಲುಸಾಗಿ ಹರಡಲು ಬಂದಿದ್ದೀರಿ’
ಎನ್ನುವ ಸಾಲುಗಳು ಇಂದಿನ ರಾಜಕೀಯ ದಾರುಣ ಪರಿಸ್ಥಿತಿಯ ಕಂದಕಗಳನ್ನು ವಿವರಿಸುವ ಪ್ರಯತ್ನ ಮಾಡಿದೆ.

ಒಟ್ಟಿಗೆ ಈ ಸಂಕಲನದ ಬಗೆಗೆ ಹೇಳುವುದಾದರೆ ಬಡತನವನ್ನುಂಡು ಬೆಳೆದ ಕವಿ, ಅನುಭವಸಿದ ನೋವು, ತಾಪತ್ರ್ಯಯ, ಸಂಕಟಗಳನ್ನು ತಾವ್ಯದ ಶಕ್ತಿಯಾಗಿಸಿ ಪ್ರಸ್ತುತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕವಿತೆಗಳಿಗೆ ಕವಿಯಿಂದ ಕಿವಿಗೆ ತುಂಬುಪ್ರೀತಿಯಿಂದ ಸ್ವಾಗತಿಸಿ,ಇನ್ನಷ್ಟು ಹದವಾಗಿ ಬರೆಯಲಿ, ಕವಿಗಿಂತ‌ ಕಾವ್ಯ ಮುಗಿಲಾಗಲಿ,ಮಿಗಿಲಾಗಲಿ, ನೊಂದು‌ ಬೆಂದವರಿಗೆ ಹೆಗಲಾಗಲಿ ಎಂಬುವ ಶುಭಾಶೆಯ.

ಫಾತೀಮಾ. ಎ. ಬಿ
ಮುದ್ದೇಬಿಹಾಳ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ