ಶಿಗ್ಗಾವಿ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಜನಿಸಿದವರು
ತಾಯಿ ಬಚ್ಚಮ್ಮ ತಂದೆ ಬೀರಪ್ಪನಾಯಕ ಸುಪುತ್ರರು
ತಿರುಪತಿ ತಿಮ್ಮಪ್ಪನ ದಯೆಯಿಂದ ಜನ್ಮತಳೆದ ರತ್ನರು
ತಿಮ್ಮಪ್ಪ ನಾಯಕನೆಂಬ ನಾಮಧೇಯದಿ ಪ್ರಸಿದ್ಧರು
ದಾಸ ಸಾಹಿತ್ಯದ ಹರಿಭಕ್ತರಾದಂತ ಕನಕದಾಸರು
ಹದಿನೈದನೇ ಶತಮಾನದ ಶ್ರೇಷ್ಠ ಕೀರ್ತನೆಕಾರರು
ಕರ್ನಾಟಕದ ಭಕ್ತಿ ಪಂಥದ ಪ್ರಮುಖ ಹರಿದಾಸರು
ಉಡುಪಿ ಮಠದ ಶ್ರೀಕೃಷ್ಣನ ಪರಮ ಭಕ್ತರು
ನೀ ಮಾಯೆಯೋ ನಿನ್ನಳೋ ಮಾಯೆಯೆಂದವರಿವರು
ಕುಲ ಕುಲವೆಂದು ಹೊಡೆದಾಡದಿರೆಂದ ಹರಿಭಕ್ತರಿವರು
ಶ್ರೀ ಕೃಷ್ಣ ಹರಿಯೆ ಸರ್ವೋತ್ತಮನೆಂದು ಹಾಡಿದವರು
ಕುಲದ ನೆಲೆಯೇನೆನಾದರೂ ಬಲ್ಲಿರಾ ಎಂದವರಿವರು
ಆತ್ಮ ಯಾವ ಕುಲ ಜೀವ ಯಾವ ಕುಲ ಎಂದವರು
ಕಾಗಿನೆಲೆ ಆದಿಕೇಶವನ ಅಂಕಿತ ನಾಮದವರಿವರು
ಪುರಂದರದಾಸರ ಸಮಕಾಲೀನವರು ಕನಕದಾಸರು
ಶ್ರೀ ವ್ಯಾಸರಾಯರಿಗೆ ಅಚ್ಚುಮೆಚ್ಚಿನ ಶಿಷ್ಯರಿವರು
ಆದಿಕೇಶವನ ಪೂಜಿಸುವ ಪರಮ ಭಕ್ತರಿವರು
ಶ್ರೀಕೃಷ್ಣನನ್ನು ಕಿಂಡಿಯಲ್ಲಿ ಕಂಡ ಪುಣ್ಯವಂತವರಿವರು
ಶ್ರೀ ಕೃಷ್ಣ ಹರಿನಾರಾಯಣನ ಸ್ಮರಿಸುವ ದಾಸರಿವರು
ಶ್ರೀ ಹರಿಯ ಪ್ರತ್ಯಕ್ಷ ದರ್ಶನ ಪಡೆದ ಭಕ್ತ ಕನಕದಾಸರಿವರು
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ