ಮುಗಿಯಿತು ರಜಾ
ಇನ್ನಿಲ್ಲ ಹಸಿವಿನ ಸಜಾ
ಓದು ಬರಹ ಜೋರು
ಜೊತೆಗೆ ಅನ್ನ ಸಾರು
ದೀಪಾವಳಿ ಹಬ್ಬಕೆ
ಕಾತುರದಿ ಕಾಯಲು
ಆಗಲೇ ತೆರೆಯಿತು
ಶಾಲೆಯ ಬಾಗಿಲು
ಮಜಾ ಮಜಾ ಆಟ
ಹಳ್ಳದ ಮಣ್ಣು ರಾಡಿ
ಮಳೆಯಲಿ ಕುಣಿತ
ಆಣಿಕಲ್ಲು ಮೋಡಿ
ಮತ್ತೇ ಹಿಡಿಯುವ
ಪಾಟಿಚೀಲ ಕೈಯಲಿ
ಜೊತೆಗೊಂದಿಷ್ಟು
ಪುಟಾಣಿ ಬೆಲ್ಲ ಜೇಬಲಿ
ರಂಗ ಹನುಮ ಸಂಗ
ಸುಮಾ ತಾರಾ ಮೇಘ
ಕೂಡಲಿ ಗೆಳೆಯರ ಗುಂಪು
ನಮ್ಮಿ ಗೆಳೆತನವೇ ಸೊಂಪು
ಬರಬರ ಅಕ್ಷರ ಓದಿ
ಸರಸರ ಲೆಕ್ಕವ ಬರೆದು
ತಿದ್ದಿ ಬೆಳೆಸುವ ಗುರುವಿಗೆ
ಶಾಲೆಗೆ ಬಾಗಿ ನಮಿಸುವ
ಭುವನೇಶ್ವರಿ ರು. ಅಂಗಡಿ
ಶಿಕ್ಷಕಿಯರು
ಸರಕಾರಿ ಪ್ರೌಢಶಾಲೆ ಕಲಹಾಳ
ತಾ/ ರಾಮದುರ್ಗ ಜಿ/ಬೆಳಗಾವಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ