ಪ್ರಥಮ ಪೂಜಿಪ ಪಾಹಿ ಗಜಾನನು
ಪಾರ್ವತಿ ಮಹೇಶ್ವರನ ಸುಪುತ್ರನು
ವಾಮನ ರೂಪಿ ಗೌರಿ ವರಪುತ್ರನು
ಜೈ ಗಣೇಶ ಸಿದ್ದಿ ಬುದ್ದಿ ಪ್ರದಾಯಕನು
ಮಹಾ ಗಣಪತಿ ಶಿವನಂದನನು
ಭವಾನಿ ನಂದನ ಗಜ ವದನನು
ಜಗನ್ಮಾತೆ ಗೌರಿಯ ಮುದ್ದು ಕಂದನು
ಏಕದಂತ ಲಂಬೋದರ ವಿನಾಯಕನು
ಸ್ವರ್ಣ ಗೌರಿ ಪತಿತ ಪಾವನೆಯೆನ್ನುವರು
ಪರಶಿವನ ಅರ್ಧಾಂಗಿ ಪಾರ್ವತಿಯೆನ್ನುವರು
ಕೈಲಾಸ ವಾಸ ಶಿವಶಂಕರನ ಸತಿಯೆನ್ನುವರು
ಶಿವನ ಜಟೆಯಲ್ಲಿ ನೆಲೆಸಿರುವ ಗಂಗೆಯೆನ್ನುವರು
ಶುಭ ಮಂಗಳವಾರ ಗೌರಿಯನು ಪೂಜಿಸುವರು
ಸ್ವರ್ಣ ಗೌರಿ ವ್ರತಚಾರಣೆಯನು ಮಾಡುವರು
ಸುಮಂಗಲಿಯರು ಮುತೈದೆ ಸೌಭಾಗ್ಯ ಬೇಡುವರು
ದೇವಿ ನಮೋ ಸ್ವರ್ಣ ಗೌರಿಯೆಂದು ಭಜಿಸುವರು
ಜಯ ಗೌರಿ ಜೈ ದುರ್ಗೆ ಅಂಬೆ ಮಾತೆಯು
ಲೋಕಮಾತೆಯು ಜಗ್ಜಜನನಿ ಅಂಬಿಕೆಯು
ಜಗದೊಡೆಯ ಜಗದೀಶನ ಸತಿ ಈಶ್ವರೀಯು
ಕರುಣಾಸಾಗರಿ ಕೃಪಾಕರಿ ಸ್ವರ್ಣ ಗೌರಿಯು.
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ