SKU: 15073

ವಿಶ್ವಾಸದ ಹೆಜ್ಜೆಗಳು

100.00

ಬೆಳಗುಗವಿತೆಗಳು

Author : ಸುರೇಶ ಎಲ್.ರಾಜಮಾನೆ

Publishers Name : ಮೊಹಾಲಿಯಾ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಪ್ರತಿ ಬೆಳೆಗೂ ಒಂದು ಬೆರಗೆ, ಹೊಸದಿನಕ್ಕೆ ಮುನ್ನುಡಿ. ಇನ್ನೂ ಬದುಕು ಇದೆ, ಎಂಬ ಭರವಸೆಯ ಮುಂಜಾವು, ಕವಿಮನಸಿಗೆ, ಆತನ ದೃಷ್ಟಿಗೆ ನಿಲುಕಿದ್ದೆಲ್ಲವೂ ಕವಿತೆಗೆ ವಸ್ತುವ, ಮನಕ್ಕೆ ವಕ್ಕಿದ್ದೆಲ್ಲವೂ ಸ್ಫೂರ್ತಿಯ ಅಂಥದ್ದರಲ್ಲಿ ಸುರೇಶ ರಾಜಮಾನೆಯಂಥ ಉತ್ಸಾಹಿ ಕವಿಗೆ ಈ ಸ್ತಿತ್ಯಂತರ ನೂರಾರು ಚೆಂದ ಕವಿತೆಗಳ ವಸ್ತುವಾದದ್ದು ಒಂದು ಸುಂದರ ಅನುಭೂತಿ, ಅನೂಹ್ಯ ಅನುಭವ. ಸೂರ್ಯ, ಸುರೇಶನ ಆತ್ಮ ಸಂಗಾತವಾಗಿ ಬೆಳಗು ಕವಿತೆಗಳ ಪ್ರೇರಣೆಯಾಗಿ ಬೆಳಗುತ್ತಿದ್ದುದನ್ನು ನಾನು ಮೊದಲಿನಿಂದಲೂ ಬಲ್ಲೆ. ‘ಎಲ್. ಆರ್. ಸುರೇಶ’ ‘ಎಲ್ಲಾರ ಸೂರ್ಯ’ನಾಗಿ ಮೇಲೇರುತ್ತಿದ್ದುದನ್ನು ನಾನು ಗಮನಿಸುತ್ತಲೇ ಇದ್ದೆ. ಆಗಿನಿಂದಲೂ ನಾನು ಇವರ ಕವಿತೆಗಳ ಅಭಿಮಾನಿ.

ಇಲ್ಲಿ ಶಿಸ್ತಾಗಿ ಜೋಡಿಸಿದ ನೂರಾರು ‘ಹೃಸ್ವ’ ಕವಿತೆಗಳ ತುಂಬಾ ಜಗದ ಜಾದೂಗಾರ ಸೂರ್ಯ’ದೀರ್ಘ’ವಾಗಿ ವಿಜೃಂಭಿಸಿದ್ದಾನೆ. ರಸ್ತೆ ಪಕ್ಕದ ಕಸ ಕೂಡ ರಾತ್ರಿ ಮಳೆಯಲಿ ನೆನೆದು ಧರೆಯ ದೊರೆಯಿಂದ ಧನ್ಯನಾಗಿದ್ದು, ನಿಶ್ಚಿಂತೆಯಿಂದ ಮಲಗಿದ್ದ ಟಾರು ರಸ್ತೆಗಳಿಗೆಲ್ಲ ಭಾನು ಬೆಳಕ ಸುರಿದು ಜಳಕ ಮಾಡಿಸಿದ್ದು. ಮುಗಿಲೂರ ಮನ್ಮಥ ಧರೆಗೆ ನೀಡಿದ ಮನಮೋಹಕ ಬೆಳಗು, ಮೈಗಂಟಿದ ಹೊದಿಕೆಯ ಬಿಡಿಸಿ ಮನದಂಗಳದ ಕಸಗುಡಿಸಿ ಮಧುರತೆಯ ಮುಂಜಾವನು ತಂದಿದ್ದು, ಮುಗಿಲೊಡಲಿಂದ ಮುಗಿಬಿದ್ದ ಹೊನ್ನ ಕಿರಣಗಳು ಭೂರಮೆಯ ಮೈ ಸವರಿ ಬೆಚ್ಚಗಾಗಿಸಿದ್ದು, ಸೂರ್ಯ ಜಗದ ಜೀವರಾಶಿಗೆಲ್ಲ ಜೀವದುಸಿರಾದದ್ದು, ದುಡಿಯುವ ಬಡವನ ಮನೆಯಂಗಳದಲೂ ಸೂರ್ಯೋದಯದ ಚಿತ್ತಾರ ಮೂಡಿದ್ದು, ಮುಂತಾದ ಪ್ರಯೋಗಗಳೆಲ್ಲ ಮನಕ್ಕೆ ಮುದ ನೀಡುತ್ತವೆ. ಸುರೇಶರ ಈ ಕವಿತೆಗಳು ಸೂರ್ಯನಂತೆಯೇ ಮನದಂಗಣವ ಬೆಳಗುತ್ತವೆ. ಓದುತ್ತಾ ಓದುತ್ತಾ ಭಾನುವಿನ ಹಲವು ರೂಪಗಳನ್ನು ಹರಿವಾಣದಲ್ಲಿಟ್ಟು ಉಣಬಡಿಸಿದ ಅನುಭವ ನೀಡುತ್ತವೆ.

ಸರ್ವರೊಳಗೊಂದಾಗುವ ಮನುಷ್ಯರಾಗಲು ಮಾನವಿಯತೆಯ ಬೆಳಕು ಎಂಬಲ್ಲಿ ಸುರೇಶರ ಮನದಲ್ಲಿರುವ ಉದಾತ್ತಭಾವ ಗೋಚರಿಸುತ್ತದೆ. ಅಲೌಕಿಕವಾದುದನ್ನು ಹೇಳುತ್ತಲೇ, ಹೊದ್ದ ಕೌದಿಯ ಕಿಂಡಿಯಿಂದ ಕುಕ್ಕಿ ಎಬ್ಬಿಸಿದ ಸೂರ್ಯ ಬದುಕಿಗೆ ಬೆಳಕ ನೀಡಿದರೂ ಬದುಕು ಹರಿದಿರುವುದನ್ನು ತೋರಿಸಿದ ಕಟು ವಾಸ್ತವವನ್ನೂ ಹೇಳುತ್ತ ಲೌಕಿಕ ಬದುಕಿನ ಕಠೋರ ಸತ್ಯವನ್ನು ತಿಳಿಯಾದ ಮಾತಿನಲ್ಲಿ ತಿಳಿಸುತ್ತಾರೆ. ಅಂಗಳದ ಕಸ ಹೊಡೆದು ರಂಗೋಲಿ ಇಟ್ಟಂತಹ ಅವರ ಕವಿತೆಗಳು ಮನದಲ್ಲಿಯ ಕಸ ಹೊಡೆದು ಚೆಂದದ ಚಿತ್ತಾರದ ಜನೋಪಯೋಗಿ ರಂಗೋಲಿ ಇಡುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

– ಡಾ. ಶಿವಾನಂದ ಕುಬಸದ

Rating This Book

Reviews

There are no reviews yet.

Be the first to review “ವಿಶ್ವಾಸದ ಹೆಜ್ಜೆಗಳು”

Your email address will not be published. Required fields are marked *

Top Books