You are currently viewing ಖ್ಯಾತ ನಿರೂಪಕಿ ಅಪರ್ಣ ಅವರಿಗೆ ಅಂತಿಮ ನಮನ

ಖ್ಯಾತ ನಿರೂಪಕಿ ಅಪರ್ಣ ಅವರಿಗೆ ಅಂತಿಮ ನಮನ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯಿವರು
ಅಪ್ಪಟ ಕನ್ನಡತಿ ಸ್ವಾತಿಕ ಮನಸ್ಸಿನ ನಟಿಯಿವರು
ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದವರು
ಕನ್ನಡ ಸಿನಿರಸಿಕರಿಗೆ ಚಿರಪರಿಚಿತೆ ಅಪರ್ಣರಿವರು

ವಾಸ್ತುಶಿಲ್ಪಿ ,ಕವಿ ನಾಗರಾಜ್ ವಸ್ತಾರ ಅವರ ಧರ್ಮಪತ್ನಿಯಿವರು
ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದವರು
ಕನ್ನಡ ಭಾಷಾ ಶುದ್ಧಿಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದವರು
ಕನ್ನಡದ ಪದಗಳನ್ನು ಮುತ್ತು ಪೋಣಿಸಿದಂತೆ ಮಾತನಾಡುತ್ತಿದ್ದವರು

ಕನ್ನಡದಲ್ಲಿ ಏಳು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಿರೂಪಿಸಿದವರು
ರೇಡಿಯೋ ಜಾಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು
ಬಹುಮುಖ ಪ್ರತಿಭೆಯ ನಟಿ ಪ್ರತಿಭಾನ್ವಿತೆಯಿವರು
ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದವರು

ಮಸಣದ ಹೂವು ಚಿತ್ರದ ನಾಯಕಿಯಿವರು
ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದವರು
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು
ಇಂದು ಚಿರನಿದ್ರೆಗೆ ಜಾರಿ ಇಹಲೋಕವ ತ್ಯಜಿಸಿದರು

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ