ಹುಟ್ಟಿದಾಗ
ತೊಟ್ಟಿಲಲ್ಲಿ ಹಾಕಿ ತೂಗಿದರು
ಸತ್ತಾಗ
ಚಟ್ಟದಲ್ಲಿ ಹಾಕಿ ಎತ್ತಿದರು
ಹುಟ್ಟಿದ್ದಾಗ
ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರು
ಸತ್ತಾಗ
ಮೈ ಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟರು
ಹುಟ್ಟಿದಾಗ
ಮನೆ ಮಂದಿ ಸೇರಿಕೊಂಡು ನಕ್ಕರು
ಸತ್ತಾಗ
ಮನೆ ಮಂದಿ ಕೂಡಿಕೊಂಡು ಅತ್ತರು
ಹುಟ್ಟಿದಾಗ
ಹೆಸರೊಂದು ಹುಡುಕಿ ಇಟ್ಟರು
ಸತ್ತಾಗ
ಹೆಸರು ಬಿಟ್ಟು ಹೆಣ ಅಂತ ಅಂದರು
ಹುಟ್ಟಿದಾಗ
ತಾಯಿ ಗರ್ಭದಿಂದ ಹೊರಗೆ ಬಂದೆವು
ಸತ್ತಾಗ
ಭೂಮಿಯ ಗರ್ಭದ ಒಳಗೆ ಹೋದೆವು
ಹುಟ್ಟಿದಾಗ
ನಾವು ಬರಿ ಕೈಯಲ್ಲಿ ಬಂದಿದ್ದು ನಿಜಾ
ಸತ್ತಾಗ
ನಾವು ಬರಿ ಕೈಯಲ್ಲಿ ಹೋಗುವುದು ನಿಜಾ
ಮಹಾಂತೇಶ ಬೇರಗಣ್ಣವರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ