SKU: 14649

ಬಿಡಿ ಹೂಗಳು

5 in stock

50.00

Author : ಎ. ಎಸ್. ಪಾವಟೆ

Publishers Name : ಪೂಜ್ಯಶ್ರೀ ಗುರುಬಸವ ಪ್ರಕಾಶನ

5 in stock

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಮಿತ್ರರಾದ ಶ್ರೀ ಎ. ಎಸ್. ಪಾವಟೆಯವರು ನನಗೆ ಬಾಲ್ಯದಿಂದಲೂ ಪರಿಚಿತರು. ನಲವತ್ತು ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಸಹೋದ್ಯೋಗಿಯಾಗಿ, ಸಾಂಸ್ಕೃತಿಕ ಕ್ರೀಡೆ, ಸಾಹಿತ್ಯಕ, ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಜೊತೆ-ಜೊತೆಯಾಗಿ ಕಾರ್ಯಮಾಡಿದೆವು. ಅಂದು ಕೂಡಿಬಂದ ನಮ್ಮಿಬ್ಬರ ಸ್ನೇಹ ಇಂದಿಗೂ ನಡೆದುಕೊಂಡು ಬಂದಿದೆ. ಶ್ರೀಯುತರು ಶಾಲೆ ಅವಿಚ್ಛಿನ್ನವಾಗಿ ಕಾಲೇಜುಗಳಲ್ಲಿದ್ದಾಗಲೇ ಕಾವ್ಯ ಗಾಯನ, ನಾಟಕ, ನೃತ್ಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವಾರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಹಲವಾರು ಯುವ ಕವಿಗಳಿಗೆ, ಸಾಹಿತಿಗಳಿಗೆ ಮಾರ್ಗದರ್ಶನ ಮಾಡುತ್ತ ಪ್ರೋತ್ಸಾಹಿಸಿದವರು.

ಶ್ರೀ ಪಾವಟೆಯವರು ಕವಿ ಹೃದಯದ ಭಾವಜೀವಿ. ಶಿಕ್ಷಣ ಸಾಹಿತ್ಯ, ಶರಣ ಸಂಸ್ಕೃತಿ, ಮುಂತಾದ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿರುವ ಇವರು ಶಿಸ್ತು, ಪ್ರಾಮಾಣಿಕತೆ, ಕೈಕೊಂಡ ಕಾರ್ಯವನ್ನು ಸಾಧಿಸುವ ಛಲದವರು. ಬಾಲ್ಯದಲ್ಲಿಯೇ ತಮ್ಮ ತಾಯಿಯವರ ಪ್ರೇರಣೆ, ಪ್ರೋತ್ಸಾಹ. ಮಾರ್ಗದರ್ಶನದಲ್ಲಿ ಸಾಹಿತ್ಯ ಸಾಂಸ್ಕೃತಿಕ ರಂಗದಲ್ಲಿ ಒಲವು ಹೊಂದಿ ಕವಿತೆ. ಚುಟುಕು. ಚಿಕ್ಕ ಕಥೆಗಳು, ಬರೆಯುತ್ತ ಇಂದು ಸಾಹಿತ್ಯ ಲೋಕದಲ್ಲಿ ಹಲವು ಕೃತಿಗಳ ಮೂಲಕ ಅದರಲ್ಲಿಯೂ ಶರಣ ಸಾಹಿತ್ಯ ರಚನೆಯ ಮೂಲಕ ಕನ್ನಡಮ್ಮನ ಸೇವೆಯಲ್ಲಿ ತೊಡಗಿದ್ದಾರೆ.

ಬೀಳೂರ ಶ್ರೀ ಗುರುಬಸವ ಮಹಾಸ್ವಾಮಿಗಳವರ ಪರಮ ಭಕ್ತರು. ತಮ್ಮ ‘ಬಿಡಿ ಹೂಗಳು’ ಕೃತಿಯಲ್ಲಿ ಪೂಜ್ಯರನ್ನೇ ಸ್ಮರಿಸುತ್ತ ‘ಗುರುಬಸವೇಶ ಮೆಚ್ಚಿ ಹರಸಿದ ಇನ್ನೇನ ನಡಿ’ ಎಂಬ ಕವನದಿಂದಲೇ ಪ್ರಾರಂಭಿಸಿ 42ಕವನಗಳ ಬಿಡಿ ಹೂಗಳನ್ನು ನಮ್ಮ ಮುಂದೆ ಹರಹಿದ್ದಾರೆ. ಅವು ನಮಗ ಮುದ ನೀಡಲಿ, ಅವರಿಗೆ ಶುಭಕೋರುತ್ತ, ಇನ್ನಷ್ಟು ಕವನ-ಕುಸುಮಗಳು ಅವರಿಂದ ರೂಪುಗೊಳ್ಳಲೆಂದು ಆಶಿಸುವೆ.

Rating This Book

Reviews

There are no reviews yet.

Be the first to review “ಬಿಡಿ ಹೂಗಳು”

Your email address will not be published. Required fields are marked *

Top Books