You are currently viewing ಯೋಗದಿಂದ ಆರೋಗ್ಯ

ಯೋಗದಿಂದ ಆರೋಗ್ಯ

ಮನುಜನಿವನು ಮೃಷ್ಟಾನ್ನ ಭೋಜನ ಪ್ರಿಯನು
ಎರಡು ಹೊತ್ತು ಉಂಡವ ಯೋಗಿಯಾಗುವನು
ಮೂರು ಹೊತ್ತು ಉಂಡವ ಭೋಗಿಯಾಗುವನು
ನಾಲ್ಕು ಹೊತ್ತು ಉಂಡವನು ರೋಗಿಯಾಗುವನು

ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಬೇಕು
ಆಧುನಿಕ ಜೀವನ ಶೈಲಿಯಿದು ಚಿಂತನೆ ನಡೆಸಬೇಕು
ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು
ನಮ್ಮ ಮನಸ್ಸು ಬುದ್ಧಿಯನ್ನು ಹಿಡಿತದಲ್ಲಿಡಬೇಕು

ಅಜ್ಞಾನದ ಅಂಧಕಾರವ ಕಳೆಯುವುದು ಜ್ಞಾನಯೋಗ
ಜೀವನದಲ್ಲಿ ಧನಾತ್ಮಕತೆ ತರುವುದು ಕರ್ಮಯೋಗ
ಭಗವಂತನ ಭಕ್ತಿಯಿಂದ ಧ್ಯಾನಿಸುವುದು ಭಕ್ತಿಯೋಗ
ಮನಸ್ಸು ಬುದ್ಧಿ ಸಂಸ್ಕಾರ ಕಲಿಸುವುದು ರಾಜಯೋಗ

ಯೋಗಿಯಾಗು ಪರಿಪೂರ್ಣತೆ ಪಡೆದು ಜ್ಞಾನಿಯಾಗು
ಮನಸ್ಸಿದ್ದರೆ ಮಾರ್ಗ ಛಲದಿಂದ ಕಲಿತು ಯೋಗ್ಯನಾಗು
ದೇಹಕ್ಕೆ ಶಕ್ತಿ ವ್ಯಾಯಾಮ ಪ್ರಾಣಾಯಾಮ ಮಾಡು
ಯೋಗಕ್ಕಿಲ್ಲ ಯಾವುದೇ ಜಾತಿ ಧರ್ಮದ ಕಟ್ಟು ಪಾಡು

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ