SKU: 13879

ಬಂಗಾರದ ಹನಿಗಳು

Original price was: ₹90.00.Current price is: ₹80.00.

ಪ್ರತಿ ಹನಿಗೂ ಬೆಲೆ ಇದೆ…..

Author : ಕಂಸ (ಕಂಚುಗಾರನಹಳ್ಳಿ ಸತೀಶ್)

Publishers Name : ಕಂಸ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕವಿಯಾದವನು ಇರುವೆಯ ಕಾಲಿನ ಸಪ್ಪಳವನ್ನು ಕೇಳಿಸಿಕೊಳ್ಳುವಷ್ಟು ಸೂಕ್ಷ್ಮ ಗ್ರಾಹಿ ಆಗಬೇಕೆಂಬ ಮಾತಿದೆ. ಕಂಸ( ಕಂಚುಗಾರನಹಳ್ಳಿ ಸತೀಶ್) ಅವರ “ಬಂಗಾರದ ಹನಿಗಳು” ಕವನ ಸಂಗ್ರಹಕ್ಕೆ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ. ಇದರಲ್ಲಿ ಅಂತಹ ಸೂಕ್ಷ್ಮಗಳು ಸಂಗ್ರಹದ ಉದ್ದಕ್ಕೂ ಓದುಗನಿಗೆ ಅನುಭವವಾಗದೇ ಇರದು.

“ಬಂಗಾರದ ಹನಿಗಳು” ಕಂಸ ಅವರ ಚೊಚ್ಚಲು ಕವನ ಸಂಕಲನ. ಇದರಲ್ಲಿ 100 ಕವನಗಳಿವೆ. ಕಾವ್ಯವಸ್ತು ವೈವಿಧ್ಯಮಯವಾಗಿ ನವಿರಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯ ವಿಷಯಗಳಾದ ಪ್ರಕೃತಿ, ನಮ್ಮ ನೆಲ, ಭಾಷೆ, ಅಮ್ಮ, ಸ್ವಾತಂತ್ರ್ಯ, ಮಗು, ಪ್ರೀತಿ, ನಮ್ಮ ಹಬ್ಬಗಳು ಮುಂತಾದವುಗಳ ಜೊತೆಗೆ ಗಂಭೀರ ವಸ್ತುಗಳ ಬಗ್ಗೆಯೂ ಕವನಗಳು ಇವೆ.‘ಮರದಗೋಳು’ ಎನ್ನುವ ಕವನದಲ್ಲಿ ಅವರ ಕವಿತ್ವ ಚೆನ್ನಾಗಿ ಮೂಡಿ ಬಂದಿದೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿ ಸತೀಶ್ ರವರು ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ ಶಾಲಾ ಮಾಸ್ತರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಬೋಧನೆ ಅಷ್ಟೇ ಸಾಲದು. ಸಾಧನೆಯನ್ನು ಏನಾದರೂ ಮಾಡಬೇಕು ಎನ್ನುವ ಆಸಕ್ತಿಯುಳ್ಳ ತರುಣ.ಸಾಹಿತ್ಯದ ಶಕ್ತಿಯಲ್ಲಿ ಸಾಹಿತ್ಯಾಸಕ್ತನಾಗಿ ಸರಸ್ವತಿಯ ಆರಾಧನೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಒಂದು ಕೃತಿಯನ್ನು ಬರೆಯಬಹುದು ಎಂದುಕೊಂಡರೆ. ಅದು ಬರೆಯುವುದಲ್ಲ. ಅಂತರಂಗದಿಂದ ಬರೆಸುವುದು. ಅಧ್ಯಯನ ಸಂಪತ್ತಿನಿಂದ ತನ್ನ ಅನುಭವದ ಮೂಸೆಯಲ್ಲಿ ಬರೆಯತೊಡಗಿದರೆ ಆ ಕೃತಿ ಯಾವತ್ತೂ ಕೂಡ ಜನಕ್ಕೆ ಶೃತಿಯಾಗಿ.ಸ್ಕೃತಿಯಾಗಿ. ಧೃತಿಯಿಂದ ಅವರ ಜೀವನದಲ್ಲಿ ಬೌದ್ಧಿಕ ವಿಕಾಸವನ್ನು ವೃದ್ಧಿ ಮಾಡಿ ತನ್ಮೂಲಕ ಸಮೃದ್ಧ ಆಲೋಚನೆಯನ್ನು ವಿಶ್ವ ಮಾನವದತ್ತ ಪಸರಿಸುವುದರಲ್ಲಿ ಸಹಕಾರಿಯಾಗುತ್ತದೆ.

ಹೊಸತು ಚಿಂತನೆಯ ಬಲವೇ ಭಾವ ಸಿರಿಗೆ ಅನುರಣನ ಕನಸು ಕಾಣೆಗಳೊಂದೆ ಕಲೆಗೆ ಜೀವಾಳ ರಸಭರಿತ ಪದರಾಗ ಬೆರಗುಗೊಳಿಸುವ ಚಿತ್ರ ರುಚಿ ಶುಚಿಯ ಸಂಸ್ಕೃತಿಯೋ ಮುದ್ದುರಾಮ

ಹೃದಯದಿಂದ ಮೂಡಿ ಬರತಕ್ಕಂತಹ ಅನುಭವ ರೀತ್ಯವಾದಂತಹ ಲೋಕಾನುಭವ. ಕವಿತೆಯ ಮೂಲಕ ಹೊರಬಂದು ಪದ ರೂಪದಲ್ಲಿ ಅದು ಮತ್ತೊಬ್ಬರ ಹೃದಯವನ್ನು ಹದವಾಗಿಸಿ ತನ್ಮೂಲಕ ಅವರನ್ನು ಆಲೋಚನೆಯತ್ತ ಸೆಳೆಯುವುದರಲ್ಲಿ ಸಂಶಯವಿಲ್ಲ. ಸತೀಶ್ ಅವರು “ಬಂಗಾರದ ಹನಿಗಳು” ಕೃತಿಯ ಮೂಲಕ ಕನ್ನಡದ ಜನತೆಗೆ. ಕನ್ನಡದ ಕಣಜಕ್ಕೆ ಕಾಣಿಕೆಯನ್ನು ನೀಡಿದ್ದಾರೆ. ಸರಸ್ವತಿಯ ಆರಾಧನೆಯ ಮೂಲಕ ಅವರು ಸಾಹಿತ್ಯದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

 

Rating This Book

Reviews

There are no reviews yet.

Be the first to review “ಬಂಗಾರದ ಹನಿಗಳು”

Your email address will not be published. Required fields are marked *

Top Books